Tuesday, 27 February, 2024

ಮತ ಮತ್ತು ಲಿಬರಲಿಸಂ ನಡುವೆ ನಲುಗುತ್ತಿರುವ ಪ್ಯಾಲೆಸ್ತೇನ್

Share post

ಕೆಲವೊಮ್ಮೆ ಜಗತ್ತಿನಲ್ಲಿ ಶಕ್ತಿವಂತರಾಗುವುದಕ್ಕೆ ಕೇವಲ ನಾವು ಗಟ್ಟಿಯಾಗಿರುವುದು ಮಾತ್ರವಲ್ಲ, ನಮ್ಮ ವಿರೋಧಿಗಳು ತೀರಾ ದುರ್ಬಲಾಗಿರುವುದೂ ಕಾರಣವಾಗುತ್ತದೆ. ಇಸ್ರೇಲನ್ನು ಸುತ್ತುವರೆದಿದ್ದ ಅರಬ್ ದೇಶಗಳು ಒಂದೇ ಧರ್ಮದ ಮೂಲಕ ಬೆಸೆದುಕೊಂಡಿದ್ದರೂ ಕೂಡಾ, ಮೊದಲಿಂದಲೂ ರಾಜತಾಂತ್ರಿಕವಾಗಿ ಅಲ್ಲಿದ್ದ ನೂರುಜನ ರಾಜರು ನೂರುದಿಕ್ಕಿಗೆ ನೋಡುವಂತವರಾಗಿದ್ದರು. ಸದಾ ಅಂತರಿಕ ಕಚ್ಚಾಟಗಳಲ್ಲೇ ಮುಳುಗಿದ್ದು, ರಾಜಮನೆತಗಳು ತಮ್ಮವರನ್ನೇ ಗಟ್ಟಿಮಾಡುಕೊಳ್ಳುವುದರಲ್ಲೇ ನಿರತರಾಗಿದ್ದವು. ಅರಬ್ ಒಕ್ಕೂಟದ ಎರಡು ದೊಡ್ಡ ದೇಶಗಳಾಗಿದ್ದ ಸೌದಿ ಅರೇಬಿಯಾ ಮತ್ತು ಇರಾನ್ ಪರಸ್ಪರ ಮಾತೇ ಆಡುತ್ತಿರಲಿಲ್ಲ. ಇವರಿಬ್ಬರ ನಡುವೆ ಸಂಧಾನಕ್ಕೆ ಉಸಿರೆತ್ತುವ ತಾಕತ್ತೂ ಅರಬ್ ಒಕ್ಕೂಟದಲ್ಲಿರಲಿಲ್ಲ, ಇವತ್ತಿಗೂ ಇಲ್ಲ. ಸಧ್ಯಕ್ಕೆ ಪ್ಯಾಲೆಸ್ತೇನ್ ವಿಚಾರದಲ್ಲಿ ಇಬ್ಬಾಗವಾಗಿರುವ ಅರಬ್ ದೇಶಗಳಲ್ಲಿ, ಹಮಾಸಿನ ನಾಯಕರನ್ನು ಸಾಕುತ್ತಿರುವುದು ಕತಾರ್. ಮುಸ್ಲಿಂಬ್ರದರ್’ಹುಡ್, ಐಸಿಸ್, ಹಮಾಸ್, ಪಿಎಲ್ಓ ಸೇರಿದಂತೆ ಎಲ್ಲಾರೀತಿಯ ‍ಧಾರ್ಮಿಕ ತೀವ್ರಗಾಮಿಗಳು, ಅವರ ದೇಶದಲ್ಲಿ ಅವರ ಮೇಲೆ ಬಾಂಬ್ ಬಿದ್ದಾಗ ಓಡಿಬರುವುದು ಇಲ್ಲಿಗೆ. ಇವರಿಗೆಲ್ಲಾ ಜಾಗಕೊಟ್ಟು ಅರಬ್ ಒಕ್ಕೂಟದಲ್ಲಿ ಅದಾಗಲೇ ಎಲ್ಲರ ಕೆಂಗಣ್ಣಿಗೆ ಗುರಿಯಾಗಿರುವ ಕತಾರ್, ಶ್ರೀಮಂತದೇಶವಾಗಿದ್ದರೂ ಸಹ ಇಡೀ ಪ್ಯಾಲೆಸ್ತೇನ್ ದೇಶವನ್ನು ಸಾಕುವಷ್ಟು ಶ್ರೀಮಂತವೇನಲ್ಲ. ಇಸ್ರೇಲ್ ಮತ್ತು ಹಮಾಸ್ ನಡುವೆ ಸಂಧಾನಮಾತುಕತೆಗೆ ಕರೆಗೊಟ್ಟು, ವಿಶ್ವದ ಕಣ್ಸೆಳೆಯುವಷ್ಟು ಚಾಕಚಕ್ಯತೆಯೂ ಅದಕ್ಕಿಲ್ಲ.

 

ಈ ಅರಬ್ ರಾಷ್ಟ್ರಗಳು ಎಂದಿಗೂ ಯಹೂದಿಗಳನ್ನು ಪ್ರೀತಿಸಲೇ ಇಲ್ಲ. ಪ್ರೀತಿಸುವುದು ಬಿಡಿ ಮನುಷ್ಯರೆಂದೂ ಪರಿಗಣಿಸಲಿಲ್ಲ. ಅವರಿಗೂ ಯಾವತ್ತಿಗೂ ಇರುವ ಆಸೆ ಒಂದೇ. ಅವತ್ತು ಯಹೂದಿಗಳ ಮೇಲೆ ಎಲ್ಲಾ ಒಟ್ಟಾಗಿ ಮುಗಿಬಿದ್ದಾಗಲೂ ಕೂಡಾ ಪ್ಯಾಲೆಸ್ತೇನನ್ನು ಬಚಾಯಿಸಬೇಕೆಂಬುದು ಅವರ ಉದ್ದೇಶವಾಗಿರಲಿಲ್ಲ. ಬದಲಿಗೆ “ಹೇಗಿದ್ದರೂ ಇಸ್ರೇಲಿಗಳು ಸಧ್ಯಕ್ಕೆ ಸಣ್ಣಕಿದ್ದಾರೆ. ಒಂದೇ ಬಾರಿ ಎಲ್ಲರೂ ಮುಗಿಬಿದ್ದರೆ ಪ್ರತಿರೋಧಿಸಲೂ ಆಗದೆ ನಿರ್ನಾಮವಾಗ್ತಾರೆ” ಎನ್ನುವುದಷ್ಟೇ ಲೆಕ್ಕಾಚಾರವಾಗಿತ್ತು. ಅವರ ದುರಾದೃಷ್ಟಕ್ಕೆ, ಇಸ್ರೇಲಿಗಳು ಅಷ್ಟು ಸುಲಭವಾಗಿ ಮಣಿಯಲಿಲ್ಲ. ಬದಲಿಗೆ ಸೆಟೆದುನಿಂತು ಅರಬರನ್ನು ಹೆಡೆಮುರಿಕಟ್ಟಿ ಅವರನ್ನು ಹಿಂದಕ್ಕೊತ್ತಿ ಆ ಜಾಗವನ್ನು ಆಕ್ರಮಿಸಿದರು. ತಕ್ಶಣವೇ ಎಲ್ಲರಿಗೂ ಶಕ್ತ-ಅಶಕ್ತರ ಪಾಠ ನೆನಪಾಯಿತು? ಎಲ್ಲಾದರೂ ಅರಬ್ಬರ ದೇವರ ಆಶೀರ್ವಾದ ಹೆಚ್ಚಾಗಿ ಅವರೇ ಯುದ್ದದಲ್ಲಿ ಗೆದ್ದಿದ್ದರೆ, ಜಗತ್ತಿಗೆ ಬೇರೆಯದೇ ಪಾಠ ಹೇಳುತ್ತಿದ್ದರು. “ನಮ್ಮನ್ನು ಎದುರುಹಾಕಿಕೊಂಡವರಿಗೆ ಇದೇ ಗತಿ” ಅಂತಾ ಐಸಿಸ್ಸಿನವರು ವಿಡೀಯೋ ಮಾಡಿ ಎಲ್ಲರ ಎದೆನಡುಗಿಸಿದಂತೆ ಇವರೂ ಎದೆತಟ್ಟುತ್ತಿದ್ದರು. ಇಸ್ರೇಲೆಂಬ ವಾಮನ ಬೆಳೆದುನಿಂತದ್ದಕ್ಕೆ ಎಲ್ಲರಿಗೂ ಈಗ ಶಾಂತಿ ಅಶಕ್ತತೆಯ ನೆನಪಾಗ್ತಾ ಇದೆಯಷ್ಟೇ.

 

ಹಮಾಸಿಗಳು, ಪ್ಯಾಲೆಸ್ತೇನಿಗಳು ಮತ್ತಿವರ ಬೆಂಬಲಿಗ ಲಿಬರಲ್ಲುಗಳು ಅತ್ತು ಕರೆದು, ಇಸ್ರೇಲಿಗಳನ್ನು ಕೆಟ್ಟವರನ್ನಾಗಿಸುವುದರಲ್ಲೇ ಸುಖ ಕಂಡರೇ ಹೊರತು, ತಮ್ಮನ್ನು ತಾವು ಬೆಳೆಸಿಕೊಳ್ಳಲಿಲ್ಲ. ಭಾರತ ಇಂಡೋ-ಪ್ಯಾಲೆಸ್ತೇನ್ ಟೆಕ್ ಪಾರ್ಕ್ ಕಟ್ಟಿಕೊಟ್ಟಂತೆ ಹಲವು ದೇಶಗಳು ಕೂಡಾ ಪ್ಯಾಲೆಸ್ತೇನಿಗೆ ಹಲವಾರು ರೀತಿಯ ಸಹಾಯ ಮಾಡಿವೆ. ಆದರೆ ಆ ಎಲ್ಲಾ ಕಟ್ಟಡಗಳಲ್ಲಿ ಭಯೋತ್ಪಾದಕರಿಗೆ ಆಫೀಸು ಮಾಡಿಕೊಟ್ಟು, ಇರುವ ಹಣ-ಕಸುವನ್ನೆಲ್ಲಾ ಬರೀ ಕರುಣಾಜನಕವಾದ ಕಥೆಗಳನ್ನು ಹೆಣೆಯುವಲ್ಲೇ ನಿರತವಾದ ಪ್ಯಾಲೆಸ್ತೇನ್ ಇವತ್ತಿಗೂ ಜಗತ್ತಿನ ಬಡಪ್ರಾಂತ್ಯಗಳಲ್ಲೊಂದು. ಹಮಾಸ್ ಇವತ್ತು ಇಷ್ಟು ದೊಡ್ಡದಾಗಿ ಬೆಳೆದು ನಿಲ್ಲಲಿಕ್ಕೆ ಯಾರು ಕಾರಣ? ಪ್ಯಾಲೆಸ್ತೀನಿಯರೇ ತಾನೇ? ಅವರ ಹಣದಿಂದಲೇ ಭಸ್ಮಾಸುರನಾಗಿ ಬೆಳೆದು ನಿಂತ ಸಂಸ್ಥೆಯನ್ನು ಒಂದು ಬಾರಿಯೂ ಪ್ರಶ್ನಿಸದೇ, ತಮ್ಮದೊಂದು ಸರ್ಕಾರ, ಸಂವಿಧಾನ ಅಂತಾ ಮಾಡಿಕೊಳ್ಳದೇ, ಇವರ ದುಡ್ಡಲ್ಲಿ ಹಡಬೆ ತಿರುಗಿಕೊಂಡು, ಇವ್ರ ಮಕ್ಕಳನ್ನು ಸಾಯಲಿಕ್ಕೆ ಮುಂದೆ ದೂಡಿ, ಕತಾರಿನ ವೈಭವೋಪೇತ ಹೋಟೆಲಿನಲ್ಲಿ ಕುಳಿತಿರುವ ರಾಕ್ಷಸರನ್ನು ಪ್ರಶ್ನಿಸದೇ, ಇವತ್ತು”ನಾನು ಹಮಾಸ್ ಅಲ್ಲ, ಅವರ ತಪ್ಪಿಗೆ ನಮ್ಮ ಮನೆಗೆ ಯಾಕೆ ಬಾಂಬ್ ಬಿದ್ದಿದೆ?” ಅಂತಾ ಅಳುವ ಪ್ಯಾಲೆಸ್ತೀನಿಯರ ಮಂಕುಬುದ್ಧಿಗೆ ಏನನ್ನೋಣ!

 

ಯಹೂದಿಗಳು ಬರೇ ಅರವತ್ತು ವರ್ಷಗಳಲ್ಲಿ, ಸದಾ ಶತ್ರುಗಳ ಭಯದಲ್ಲೇ ಬದುಕಿದ್ದರೂ, ಸಂಪೂರ್ಣ ಸ್ವಂತಬಲದಲ್ಲಿ ತಮ್ಮನ್ನು ತಾವು ಶಕ್ತಗೊಳಿಸಿಕೊಂಡಿದ್ದಾರೆ. ಇಡೀ ಜಗತ್ತಿಗೇ ಶಸ್ತ್ರಾಸ್ತ್ರಗಳನ್ನು ತಯಾರಿಸಿ ಮಾರುವ ಮಟ್ಟಿಗೆ ಬೆಳೆದಿದ್ದಾರೆ. ತರಕಾರಿ ಹಣ್ಣು ಹಂಪಲು ಮೊಟ್ಟೆ ಮಾಂಸ ಹಾಲುಗಳನ್ನು ತಮಗೆ ಬೇಕಾದಷ್ಟು ಮಾತ್ರವಲ್ಲದೇ ಬೇರೆದೇಶಗಳಿಗೂ ರಫ್ತು ಮಾಡುವಷ್ಟು ಬೆಳೆಯುತ್ತಿದ್ದಾರೆ. ಅಕ್ಕಪಕ್ಕದ ಎಲ್ಲಾ ದೇಶಗಳಿಗೂ ಬೆವರಿಳಿಸುವಷ್ಟು ಗಟ್ಟಿಯಾದ ಸೈನ್ಯ, ತಂತ್ರಜ್ಞಾನ ಮತ್ತು ಶಸ್ತ್ರಗಳನ್ನು ಕಟ್ಟಿಕೊಂಡಿದ್ದಾರೆ. ಅಷ್ಟೇ ಭಯದಲ್ಲಿ ಬದುಕುತ್ತಿರುವ ಪ್ಯಾಲೆಸ್ತೀಯರೂ ಇಸ್ರೇಲಿನೆಡೆಗೆ ದ್ವೇಷಬೆಳೆಸಿಕೊಳ್ಳಲು ವಿನಿಯೋಗಿಸಿದಷ್ಟೇ ಸಮಯವನ್ನು ಸ್ವಂತ ಅಭಿವೃದ್ಧಿಗೂ, ರಾಜತಾಂತ್ರಿಕ ಸಂಬಂಧಗಳ ಬೆಳವಣಿಗೆಗೂ ಬಳಸಿದ್ದಿದ್ದರೆ ಇವತ್ತು ಇಸ್ರೇಲಿಗೆ ಎದುರಾಗಿ ಎದೆಕೊಟು ನಿಲ್ಲಬಹುದಾಗಿತ್ತು. ಇಸ್ರೇಲಿ ರಾಕೆಟ್ಟುಗಳಿಂದ ಸತ್ತವರ ಸಂಖ್ಯೆ ಐವತ್ತು ಪಟ್ಟು ಕಡಿಮೆಯಿರುತ್ತಿತ್ತು. ನಿಮ್ಮ ಶತ್ರುಗಳನ್ನು ಇಲ್ಲವಾಗಿಸುವ ನಿಮ್ಮ ಶಕ್ತಿಯೂ ಹೆಚ್ಚಿ, ಜಗತ್ತಿನ ಮಾಧ್ಯಮಗಳಲ್ಲಿ “ಪ್ಯಾಲಿಸ್ತೀನಿನ ಮರುದಾಳಿಗೆ ಇಸ್ರೇಲಿನ ನೂರು ಮಂದಿ ಬಲಿ” ಅಂತಲೂ ಸುದ್ಧಿ ಬರುತ್ತಿತ್ತು. ನಿಮ್ಮ ಸಂಪರ್ಕ, ಧರ್ಮಸ್ನೇಹಿತರ ದೊಡ್ಡ ಜಾಲ ಉಪಯೋಗಿಸಿಕೊಂಡು ನಿಮ್ಮನ್ನು ಆತ್ಮನಿರ್ಭರರಾಗಿ ಬೆಳೆಸಿಕೊಳ್ಳುವತ್ತ ಹೆಜ್ಜೆಹಾಕಿ ಅಂತಾ ಹೇಳುವ ಯಾವ ಲಿಬರಲ್ ಕೂಡಾ ಇನ್ನೂ ಹುಟ್ಟಿಬಂದಿಲ್ಲ.

 

ಇದು ಬರೀ “ಹಮಾಸ್ ಅಲ್ಲದ ಪ್ಯಾಲೆಸ್ತೀನಿಯರ” ಕಥೆ ಮಾತ್ರವಲ್ಲ. ಇದು ಇಡೀ ಮುಸ್ಲಿಂಸಮುದಾಯದ ಯಥಾಪ್ರಕಾರದ ಅಳು. ಇವರು ಬಿಟ್ಟೋಡಿಹೋಗುವ ಯಾವ ದೇಶದಲ್ಲೂ ಸಂವಿಧಾನ, ವಾಕ್ ಸ್ವಾತಂತ್ರ್ಯ ಇರಲ್ಲ, ಅಲ್ಪಸ್ವಲ್ಪ ಇದ್ದರೂ ಅದು ಕುಸಿಯುವ ಮುನ್ನ ಹೋರಾಟ ಮಾಡಲ್ಲ. ಇವರು ಓಡಿಹೋಗಿ ಸೇರುವ ಎಲ್ಲಾ ದೇಶಗಳಲ್ಲೂ ಅವಿರುತ್ತವೆ. ತಮ್ಮ ಕರುಣಾಜನಕ ಕಥೆಯನ್ನು ಹೇಳಲಿಕ್ಕೆ ಅವೆಲ್ಲಾ ಇವರಿಗೆ ಬೇಕು. ಒಂದು ಸಲ ಅಲ್ಲಿಗೆ ಗುಳೇಹೋಗಿ ಅಲ್ಲಿ ಗಟ್ಟಿಯಾಗಿ ನಿಂತಮೇಲೆ, ಮತ್ತಿವರ ಬಾಲ ಡೊಂಕೇ. ಮತ್ತಿವರು ಅಲ್ಲಿ ಹಲಾಲ್ ಅನ್ನೇ ಕೇಳುವವರು, ಷರಿಯಾ ಕಾನೂನೇ ಬೇಕೆನ್ನುವವರು, ಹಿಜಾಬ್ ಹಾಕಲು ಅನುಮತಿ ಕೇಳುವವರು, ಅನುಮತಿ ಕೊಡಲಿಲ್ಲವೆಂದರೆ ತಮಗೆ ಆಸರೆಕೊಟ್ಟ ಅದೇ ದೇಶಕ್ಕೆ ಕೊಳ್ಳಿಯಿಡುವವರು. ಪಕ್ಕದಲ್ಲೇ ಎಕರೆ ಬಯಲಿದ್ದರೂ, ರಸ್ತೆಯಲ್ಲೇ ಪ್ರಾರ್ಥನೆಗೆ ಸೊಂಟಬಗ್ಗಿಸುವವರು. ನಾನು ಮತ್ತು ನನ್ನ ಮತದ ಉಳಿಯುವಿಕೆಯಷ್ಟೇ ಮುಖ್ಯ, ಜಗತ್ತಿನಲ್ಲಿ ಉಳಿದವರ ಅಭಿಪ್ರಾಯ, ನಂಬಿಕೆ, ಅಸ್ತಿತ್ವ ಎಲ್ಲವೂ ನಗಣ್ಯ ಎನ್ನುವ ಈ ಮತದಲ್ಲಿದ್ದಷ್ಟು ಸ್ಚಾರ್ಥ ನಿಮಗೆ ಬೇರೆಲ್ಲೂ ಕಾಣಸಿಗುವುದಿಲ್ಲ.

 

ಪ್ಯಾಲೆಸ್ತೇನ್ ಬೆಂಬಲಿಸುವ ಈ ಎಲ್ಲಾ ಲಿಬರಲ್ಲುಗಳೂ “ಪಾಪ ಪ್ಯಾಲೆಸೀನಿನವರು ಸತ್ತರು ನೋಡಿ. ಮಕ್ಕಳು ಸತ್ತರು, ಹೆಂಗಸರು ಸತ್ತರು ನೋಡಿ ನೋಡಿ” ಅಂತಾ ಅಳುವವರೇ! ಎಲ್ಲರೂ ಪ್ಯಾಲೆಸ್ತೇನಿನ ಸಾವಿನ ಲೆಕ್ಕ ಕೊಡುವವರೇ!! ಹಮಾಸ್ ಒಂದೇದಿನ ಐದುಸಾವಿರಕ್ಕೂ ಹೆಚ್ಚು ರಾಕೆಟ್ಟುಗಳನ್ನ ಇಸ್ರೇಲಿನೆಡೆಗೆ ಹಾರಿಸಿತು. ಇಸ್ರೇಲಿನ ಬಳಿ ಐರನ್ ಡೋಮ್ ಅನ್ನುವ ಕ್ಷಿಪಣಿ ಪ್ರತಿರೋಧ ತಂತ್ರಜ್ಞಾನ ಇಲ್ಲದೇ ಹೋಗಿದ್ದಿದ್ದರೆ ಹಮಾಸಿನ ಅಷ್ಟೂ ರಾಕೆಟ್ಟುಗಳು ಒಂದೇದಿನದಲ್ಲಿ ಎಷ್ಟು ಇಸ್ರೇಲಿಗಳನ್ನು ಕೊಂದಿರುತ್ತಿದ್ದವು ಎಂಬ ಲೆಕ್ಕಾಚಾರವನ್ನು ಯಾವ ಲಿಬರಲ್ ಕೂಡಾ ಲೆಕ್ಕವಿಡಲ್ಲ. ಇಸ್ರೇಲಿನ ಮಕ್ಕಳೂ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಕೂತಿದ್ದಾರೆ ಅನ್ನುವು‍ದೂ ಇವರ ಲೆಕ್ಕದಲ್ಲಿಲ್ಲ.

 

ಯಹೂದಿಗಳು ಇಲ್ಲಿಗೆ ಬಂದಿಳಿದಾಗ ಪ್ಯಾಲೆಸ್ತೇನ್ ಇಷ್ಟು ದೊಡ್ಡದಿತ್ತು, ಈಗ ಇಷ್ಟೇ ಇಷ್ಟು ಉಳಿದಿದೆ ಅಂತಾ ಅಳುವ, ಶಕ್ತಿಶಾಲಿ ಇಸ್ರೇಲ್ ಅಶಕ್ತನ ಮೇಲೆ ಅಷ್ಟು ಜೋರಾಗಿ ದಾಳಿಮಾಡುವ ಅಗತ್ಯವಿದೆಯಾ ಅಂತಾ ಕೊರಗುವ, ಫಿಲಿಸ್ತೀನಿಯರಿಗೆ “ಅರವತ್ತು ವರ್ಷದ ಹಿಂದೆ ನೀವು ಬಲಶಾಲಿಯಾಗಿದ್ದಿರಿ, ನಿಮ್ಮ ಬಳಿ ಹತ್ತಾರು ಅರಬ್ ರಾಷ್ಟ್ರಗಳ ಬೆಂಬಲವಿತ್ತು, ಆಗ ನೀವು ನಿಮ್ಮೆದುರಿಗಿದ್ದ ಪುಟ್ಟ ಇಸ್ರೇಲನ್ನ ಹೇಗೆ ನಡೆಸಿಕೊಂಡಿರಿ? ಆಗಲೂ ನಿಮ್ಮದು ಇದೇ ಮಾತಿತ್ತೇನು? ಅವರನ್ನು ಕೆಣಕಿ ಕೊಂದು ಜೀವನ ನರಕವಾಗಿಸಿದರಲ್ಲಾ ಆಗ ಅವರು ಸಣ್ಣದೇಶ, ಅಶಕ್ತರು ಅಂತಾ ಅನ್ನಿಸಲಿಲ್ಲವಾ? ಅವರ ಮೇಲೆ ಎಲ್ಲರೂ ಮುರಕೊಂಡು ಬೀಳಬಾರದು ಅನಿಸಲಿಲ್ಲವಾ?” ಅಂತಾ ಕೇಳುವ ತಾಕತ್ತು ಯಾವ ಲಿಬರಲ್ಲಿಗೂ ಇನ್ನೂ ಬಂದಿಲ್ಲ. ತಮಾಷೆಯೆಂದರೆ ಪ್ಯಾಲೆಸ್ತೇನಿಯರಿಗೆ ಬೇಕಿರುವುದು ಶಾಂತಿಯಲ್ಲ, ಇಸ್ರೇಲಿಗಳ ರಕ್ತ ಮತ್ತವರ ಅವರ ದೇಹಗಳಷ್ಟೇ ಅನ್ನೋದು ಈ ಮೊದಲೂ ನಿರೂಪಿತವಾಗಿದೆ. ಯಾರು ನಿಮ್ಮನ್ನು ಬೆಳೆಯದಂತೆ ತಡೆದವರು? ಇವರ  ಮುಖಂಡರುಗಳು ತಮಗೆ ಓಡಾಡಲಿಕ್ಕೆ ಬೋಯಿಂಗ್ 747 ತರಿಸಿಟ್ಟುಕೊಂಡು, ಉಳಿದವರನ್ನೆಲ್ಲಾ ಹಸಿವಿಗೆ ನೂಕುತ್ತಿರುವಾಗ ಎದ್ದುನಿಂತು ಅವರನ್ನು ಪ್ರಶ್ನಿಸುವ ಧೈರ್ಯ ಇವರಿಗೇ ಇರಲಿಲ್ಲ. ಆದರೆ ಇವರ ವೈರಿಗಳನ್ನ ಇಡೀ ಜಗತ್ತು ಪ್ರಶ್ನಿಸಬೇಕಂತೆ!!

 

ಇವರುಗಳಿಗೆ ಸ್ವಾತಂತ್ರ್ಯ ಮೊಗೆಮೊಗೆದುಕೊಟ್ಟರೂ ಎರಡೇ ದಿನದಲ್ಲಿ ಅಲ್ಲಿ ಮತ್ತೆ ಇವರು ಸರ್ವಾಧಿಕಾರವನ್ನೇ ಬೆಳೆಸುವುದು. ಯಾಕೆಂದರೆ ಅದೊಂದೇ ಇವರಿಗೆ ಸೂಕ್ತವಾದದ್ದು. ಇಸ್ರೇಲಿಗಳು “ಜಗತ್ತಿನಲ್ಲಿರುವ ಪ್ಯಾಲೆಸ್ತೀಯರೆಲ್ಲಾರೂ ಸಾಯಬೇಕು. ನಾನಾಗಿಯೇ ಹೋಗಿ ಕೊಲ್ಲುತ್ತೀನಿ” ಎನುತ್ತಿಲ್ಲ. ಬದಲಿಗೆ “ನನ್ನನ್ನು ಕೊಲ್ಲಬಂದವರಿಂದ ತನ್ನನ್ನು ರಕ್ಷಿಸಿಕೊಳ್ಳುತ್ತೀನಿ” ಎನ್ನುತ್ತಿದೆಯಷ್ಟೇ. ಆದರೆ ಪ್ಯಾಲೆಸ್ತೀನಿಗಳು ಶಾಂತಿ ಬೇಕು ಅನ್ನುತ್ತಿಲ್ಲ. ಬದಲಿಗೆ ಇಸ್ರೇಲಿಗಳ ಪ್ರಾಣ ಬೇಕು, ಇಸ್ರೇಲಿಗಳ ರಕ್ತ ಬೀದಿಬೀದಿಯಲ್ಲಿ ಹರಿಯಬೇಕು ಇವೇ ಇವರ ಘೋಷಣೆಗಳು. ರಕ್ತ, ಕೊಲೆ, ಹೆಣ ಬಿಟ್ಟರೆ ಬೇರೆ ಮಾತೇ ಇಲ್ಲದವರೆಲ್ಲಾ ಶಾಂತಿಬಯಸುವವರು. ಇದನ್ನು ನಾವು ನಂಬಬೇಕು.

 

ಇವತ್ತು ಇಸ್ರೇಲ್ ಪ್ರತಿದಾಳಿ ಮಾಡಿದ್ದರ ಬಗ್ಗೆ ಬಾಯಿಬಡಿದುಕೊಳ್ಳುವ ಈ ಸಮುದಾಯ ಮತ್ತವರ ಬೆಂಬಲಕ್ಕೆ ನಿಲ್ಲುವ ರುಡಾಲಿ ಲಿಬರಲ್ಲುಗಳು 2021ರಲ್ಲಿಯೂ ಹಮಾಸ್ 2400 ರಾಕೆಟ್ಟುಗಳನ್ನು ಹಾರಿಸಿ, ಇಸ್ರೇಲ್ ಕೈಯಲ್ಲಿ ಹುಚ್ಚುನಾಯಿಗೆ ಹೊಡೆದಂಗೆ ಹೊಡೆಸಿಕೊಳ್ತಲ್ಲಾ, ಆ ದಾಳಿಯನ್ನು ಖಂಡಿಸಿದರಾ? ಯುದ್ಧಕಾಲದಲ್ಲಿ ಲಬೋಲಬೋ ಅನ್ನುವ ಈ ಆಷಾಡಭೂತಿಗಳು, ಕಳೆದ ಎರಡು ವರ್ಷಗಳಲ್ಲಿ ಅಲ್ಪಸ್ವಲ್ಪ ಶಾಂತಿಯಿತ್ತಲ್ಲ, ಆಗ ಯಾವ ನಿದ್ರೆಗೆ ಜಾರಿದ್ದರು? ಒಂದುಬಾರಿಯಾದರೂ ಹಮಾಸ್ ಮಾಡಿದ ದಾಳಿಗಳ ಬಗ್ಗೆ ಬರೆದರಾ? ಅಥವಾ ಈಗ ನೆಲೆಸಿರುವ ಶಾಂತಿಯನ್ನೇ ಗಟ್ಟಿಮಾಡೋಣ ಬನ್ನಿ ಎಂದು ಕರೆದರಾ? ಇವತ್ತು ಸಂಧಾನ ಮಾಡಿಸೋಕೆ ನಾನು ತಯಾರು ಎನ್ನುವ ಕತಾರ್ ಎಮಿರನ ಸಲಹೆಗಾರರು ಆಗ ಎಲ್ಲಿದ್ದರು?

 

ನಾಲ್ಕುವಾರದ ಹಿಂದಷ್ಟೇ ಅಝರ್ಬೈಜಾನ್ ಎಂಬ ದೇಶ, ಪಕ್ಕದ ಅರ್ಮೇನಿಯಾದ ನಾಗೊರ್ನೋ-ಖರಬಾಕ್ ಪ್ರಾಂತ್ಯವನ್ನು ತನ್ನದೆಂದು ಘೋಷಿಸಿಕೊಂಡು, ಸೈನ್ಯನುಗ್ಗಿಸಿ ಒಂದೂವರೆಸಾವಿರ ವರ್ಷಗಳಿಂದ ನೆಲೆಸಿರುವ ಕ್ರಿಶ್ಚಿಯನ್ನರನ್ನು ಗುಳೇ ಎಬ್ಬಿಸುತ್ತಿದೆ. ಧಾರ್ಮಿಕ ದ್ವೇಷ ಅಲ್ಲದೇ ಬೇರೇನೂ ಹುರುಳಿಲ್ಲದ ಅಝರ್ಬೈಜಾನಿನ ಈ ದಾಳಿ ದಶಕಗಳಿಂದ ನಡೆಯುತ್ತಲೇ ಇದೆ. ಇಲ್ಲಿ ಮನೆಮಠ ಬಿಟ್ಟು ಓಡಿಹೋಗುವಂತಾದ ಒಂದು ಮಿಲಿಯನ್ ಅರ್ಮೇನಿಯನ್ ಕ್ರಿಶ್ಚಿಯನ್ನರಿಗಾಗಿ ಒಬ್ಬನೇ ಒಬ್ಬ ಲಿಬರಲ್ಲು ಕವನ ಬರೆದಿಲ್ಲ, ಈ ಲಿಬರಲ್ಲುಗಳ ಮನಸ್ಸು ಯಾವತ್ತೂ ಕಾಶ್ಮೀರ ಪಾಕೀಸ್ಥಾನ ಮತ್ತು ಬಾಂಗ್ಲಾದೇಶದ ಹಿಂದೂಗಳಿಗಾಗಿ ಅತ್ತಿಲ್ಲ, ಇರಾಕಿನ ಬಹಾಯಿ ಪಾರ್ಸಿ ಮತ್ತು ಯಾಜ಼್ದಿಗಳಿಗಾಗಿ ಏನನ್ನೂ ಯಾಚಿಸಿಲ್ಲ, ಅಫ್ಘಾನಿಸ್ಥಾನದ ಹಿಂದೂ ಮತ್ತು ಬೌದ್ಧರಿಗಾಗಿ ಅತ್ತಿಲ್ಲ, ಖುರ್ದಿಸ್ಥಾನದ ಝೋರಾಸ್ಟ್ರಿಯನ್ನರಿಗಾಗಿ ಮಿಡಿದಿಲ್ಲ, ಟರ್ಕಿಯ ಕ್ರಿಶ್ಚಿಯನ್ನರಿಗಾಗಿ ಕಿಡಿಕಿಡಿಯಾಗಿಲ್ಲ. ಮೇಲೆ ಹೇಳಿದ ಅಷ್ಟೂ ಅನ್ಯಾಯ ಅತ್ಯಾಚಾರಗಳು ನಡೆದಿರುವುದು ಒಂದೇ ಮತದ ಅನುಯಾಯಿಗಳಿಂದ. ಒಂದಿಡೀ ಶತಮಾನದ ಕಾಲ ಹಿಂದೂಗಳನ್ನು ಭಾರತಾದ್ಯಂತ ತರಿದ ರಾಕ್ಷಸೀ ಮ್ಲೇಚ್ಛರ ಪಾದಕಮಲಗಳಲ್ಲಿಯೇ ಪವಡಿಸಿತ್ತಾ ಅವರ ಪೃಷ್ಠಸ್ವಚ್ಛತೆಯನ್ನೇ ಕಾಯಕವಾಗಿಸಿರಿಕೊಂಡಿರುವ, ಇವತ್ತಿಗೂ ಡಿಜಿಹಳ್ಳಿ, ಶಿವಮೊಗ್ಗದ ಗಲಭೆಗಳನ್ನು ಖಂಡಿಸಲು ಸಾಧ್ಯವಾಗದ ಈ ಎಲ್ಲಾ ಲಿಬರಲ್ಲುಗಳ ಮನೆ ತಣ್ಣಗಿರಲಿ.

0 comments on “ಮತ ಮತ್ತು ಲಿಬರಲಿಸಂ ನಡುವೆ ನಲುಗುತ್ತಿರುವ ಪ್ಯಾಲೆಸ್ತೇನ್

Leave a Reply

Your email address will not be published. Required fields are marked *