Wednesday, 17 April, 2024

Month: August 2020


ಹಿಂದೂ ನಂಬಿಕೆಗಳ ಪ್ರಕಾರ ಮನುಷ್ಯನ ಜೀವನ ಎಂಬುದು ಒಂದು ಚಕ್ರವಿದ್ದಂತೆ. ಪೂರ್ವಜನ್ಮದ ಪಾಪ-ಪುಣ್ಯಗಳಿಗನುಗುಣವಾಗಿ ಸಿಕ್ಕ ಹುಟ್ಟು, ಕರ್ಮ ಅವಕಾಶಗಳಿಂದ ತುಂಬಿರುವ ಬದುಕು, ಕೊನೆಗೆ ಸಾವು. ಪಾಪಕರ್ಮಗಳ ಲೆಕ್ಕ ಹೆಚ್ಚಿದ್ದಲ್ಲಿ ಮತ್ತೆ ಇನ್ನೊಂದು ಜನ್ಮ, ಮತ್ತದೇ ಹುಟ್ಟು ಹಾಗೂ ಕರ್ಮದ ವಿಫುಲ ಅವಕಾಶವಿರುವ ಬದುಕು. ಒಳ್ಳೆಯ ಕರ್ಮಗಳ ಲೆಕ್ಕದ ಮೇಲಾದ ದಿನ ಸತ್ಯದ ಸಾಕ್ಷಾತ್ಕಾರವಾಗಿ ನಂಬಿದ ದೇವರ Read more…


ಹಾಡುಗಳನ್ನು ಹಾಡುವುದಕ್ಕೂ, ಹಾಡುಗಳನ್ನು ಅನುಭವಿಸುವುದಕ್ಕೂ ವ್ಯತ್ಯಾಸವಿದೆ. ಈಗ ನೋಡಿ ‘ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ’ ಎಂಬ ದಾಸರಪದವನ್ನ ಅದೆಷ್ಟು ಜನ ಹಾಡಿರಲಿಕ್ಕಿಲ್ಲ. ಆದರೆ ಪಂಡಿತ್ ವೆಂಕಟೇಶ್ ಕುಮಾರರು ಅದನ್ನು ಹಾಡುವ ಪರಿ ಕೇಳಿದಾಗ ಗಾಯನವೆಂದರೆ ಇದಲ್ಲವೇ ಎಂದೆನಿಸುವುದು ಸತ್ಯ. ಅವರದನ್ನು ಹಾಡುತ್ತಾ ಅನುಭವಿಸುವಾಗ ಆ ಹಾಡನ್ನು ಪುರಂದರರು ವೆಂಕಟೇಶರಿಗಾಗಿಯೇ ಬರೆದರೇನೋ ಅನ್ನಿಸದವರಿಲ್ಲ. ಹಾಗೆಯೇ ವಿದ್ಯಾಭೂಷಣರ Read more…


ನನಗಿಷ್ಟವಾದದ್ದನ್ನ ಪೋಸ್ಟ್ ಹಾಕಲಿಲ್ಲ, ನನಗಿಷ್ಟವಾಗುವ ರೀತಿಯಲ್ಲಿ ಬರೆಯಲಿಲ್ಲ, ನಾನು ಯೋಚಿಸುವಂತೆ ಯೋಚಿಸಲಿಲ್ಲ, ನನಗಿಷ್ಟವಾದ ವೈದ್ಯಪ್ರಕಾರವನ್ನು ಬೆಂಬಲಿಸಲಿಲ್ಲ, ಅಂತೆಲ್ಲಾ ಕುಸುಗುಡುತ್ತಾ ಜನರನ್ನು ಅನ್ಫ್ರೆಂಡ್ ಅಥವಾ ಬ್ಲಾಕ್ ಮಾಡುವ ಜನರೇ . . . . . . . . . ನನಗಿಷ್ಟವಾದ ಆಟಗಾರನಿಗೆ ಆಡುವ ಅವಕಾಶ ನೀಡಲಿಲ್ಲ ಅಂತಲೇ ಧೋನಿಗೆ ಬೈದಾಡುವವರು 🤦🏻‍♂️🤣 ಇರುವ ಹನ್ನೊಂದು ಜನರ Read more…


Collection of Krishna statues from a few South Indian temples. (Photo credits: as mentioned)   ಮನದಲ್ಲಿ ಕೃಷ್ಣ ಗಮನದಲ್ಲಿ ಕೃಷ್ಣ ಚಿತ್ರದಲ್ಲಿ ಕೃಷ್ಣ ಚಿತ್ತದಲ್ಲಿ ಕೃಷ್ಣ ಶೃಂಗದಲ್ಲಿ ಕೃಷ್ಣ ರಣರಂಗದಲ್ಲಿ ಕೃಷ್ಣ ಭೃಂಗದಲ್ಲಿ ಕೃಷ್ಣ ಜಗರಂಗದಲ್ಲಿ ಕೃಷ್ಣ ಅಂತ್ಯ-ಆದಿಯಲ್ಲಿ ಕೃಷ್ಣ ನಿನ್ನ ಪಾದದಲ್ಲಿ ನಾ, ಕೃಷ್ಣ  


ತಂತ್ರಜ್ಞಾನದೊಂದಿಗೆ ಮನುಷ್ಯ ಕೂಡಾ ವೇಗವಾಗಿ ಬೆಳೆಯುತ್ತಿದ್ದಾನೆ. ಮೊದಲಿಗಿಂತಲೂ ಹೆಚ್ಚು ಚುರುಕೂ ಆಗಿದ್ದಾನೆ. ಈಗಿನ ಮಕ್ಕಳಂತೂ ಬಿಡ್ರೀ ತುಂಬಾ ಫಾಸ್ಟು. ಮಾತೆತ್ತಿದ್ರೆ ಮೊಬೈಲು, ಕೈಯೆತ್ತಿದ್ರೆ ಕಿಂಡಲ್. ಪಕ್ಕದವನ ಹತ್ರ ಒಳ್ಳೆ ಹಾಡಿದೆಯಾ, ಯಾವುದಾದರೂ ಇಂಟರೆಸ್ಟಿಂಗ್ ವಿಡಿಯೋ ಇದೆಯಾ? ಲೋ ಮಗಾ ನನ್ಗೂ ವಾಟ್ಸ್ಯಾಪ್ ಮಾಡೋ ಅಂತಾರೆ. ಒಂದುವರ್ಷದ ಹಿಂದೆ ಶೇರಿಟ್ ಮಾಡೋ ಅಂತಿದ್ರು. ಅದಕ್ಕೂ ಮುಂಚೆ ಟೆಥರಿಂಗ್ Read more…


90ರ ದಶಕದಲ್ಲಿ ಟೀವಿ ಅಂದರೆ ದೂರದರ್ಶನ ಮಾತ್ರವಿದ್ದ ಕಾಲದಲ್ಲಿ ನಮಗೆಲ್ಲಾ ಆಗಾಗ ಕೆಲ ಚರ್ಚೆಗಳನ್ನು ನೋಡುವ ಅವಕಾಶವಿದ್ದಿತ್ತು. ಒಂದೇ ವಿಷಯದಮೇಲೆ ಭಿನ್ನಾಭಿಪ್ರಾಯ ಹೊಂದಿದ್ದ ಎರಡು ಬಣಗಳ ಪ್ರತಿನಿಧಿಗಳು ಬಂದು ತಂತಮ್ಮ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಭಿನ್ನಾಭಿಪ್ರಾಯಗಳಿದ್ದರೂ ಅದೆಷ್ಟು ಗೌರವಯುತವಾಗಿ ಮಾತನಾಡ್ತಾ ಇದ್ರು ಅಂದ್ರೆ, ಈ ಚರ್ಚೆಗಳಿವೆ ಬರುವವರೇನಾದರೂ ಅಷ್ಟಾವಧಾನ ತಗೊಂಡು ಬಂರ್ತಾರಾ? ಅದೆಷ್ಟು ಸಿಟ್ಟಾಗದೇ, ಸೌಮ್ಯವಾಗಿ Read more…