Friday, 26 April, 2024

Category: ಅಪ್ರಸ್ತುತಿ

ತಲೆಹರಟೆ


ಟ್ಯಾಕ್ಸಿ ಹತ್ತಿದ ಪ್ಯಾಸೆಂಜರ್ ಸ್ವಲ್ಪ ಹೊತ್ತಾದಮೇಲೆ ಮಾಸ್ಕ್ ತೆಗೆದ. ಡ್ರೈವರ್ ಅಂದ “ಸರ್ ಮಾಸ್ಕ್ ಹಾಕ್ಕೊಳ್ಳಿ. ಇಲ್ಲಾಂದ್ರೆ ಕೆಳಗಿಳ್ಸಬೇಕಾಗುತ್ತೆ. ಕಂಪನಿಯವರು ಸಿಸಿಟಿವಿಯಲ್ಲಿ ನೋಡ್ತಿರ್ತಾರೆ. ಕಷ್ಟ ಆಗುತ್ತೆ ಸಾರ್. ಅದೂ ಅಲ್ದೇ ಕೊರೋನಾ ಸಾರ್…..” ಪ್ಯಾಸೆಂಜರ್: “ರೀ! ನಿಮ್ ಮಾಸ್ಕ್ ಕೆಲಸ ಮಾಡುತ್ತೆ ಅಂತಾದ್ರೆ ನನ್ ಮಾಸ್ಕ್ ಯಾಕೆ ಬೇಕು. ಕೊರೋನಾ ಬರಲ್ಲ ಬಿಡ್ರೀ” ಡ್ರೈವರ್ ಸ್ವಲ್ಪ Read more…


ನಿಮಗೆ ಹಲವು ವಿಷಯಗಳ ಬಗ್ಗೆ ತಿಳಿದಿದೆ, ಹಲವು ಭಾಷೆಗಳಲ್ಲಿ ಮಾತನಾಡುವ ಸಾಮರ್ಥ್ಯವಿದೆಯೆಂದಾದರೆ, ಹೆಮ್ಮೆಪಡಿ….ನಿಮಗೆ, ಎಷ್ಟೇ ವಿಷಯ ತಿಳಿದಿರಲಿ, ಎಷ್ಟೇ ಭಾಷೆಗಳು ಬರಲಿ ಬಿಡಲಿ, ಕೆಲವು ಸಲ ಮಾತನಾಡದೇ ಬಾಯಿಮುಚ್ಚಿಕೊಂಡಿರುವ ಸಾಮರ್ಥ್ಯವಿದೆಯೆಂದಾದರೆ….ಅದಕ್ಕೆ ಇನ್ನೂ ಹೆಚ್ಚು ಹೆಮ್ಮೆಪಡಿ 🙂


ಈ ಹಣದುಬ್ಬರ ಅನ್ನೋದು ಹುಡುಗನೊಬ್ಬ ಬಿಸಿಲಲ್ಲಿ ಹಿಡಿದುನಿಂತ ಐಸ್ಕ್ರೀಮಿನ ಕೋನಿನಂತೆ….ಈಗಿರುತ್ತೆ ಈಗಿರಲ್ಲ. ಈಗ ನೋಡಿ, ಪೆಟ್ರೋಲ್ ಹಾಕಿಸೋಕೆ ಬಂಕ್’ಗೆ ಹೋದಾಗ, ಸೂಪರ್ ಮಾರ್ಕೆಟಲ್ಲಿ ತರ್ಕಾರಿ, ಅಡುಗೆ ಎಣ್ಣೆ ತಗೊಳ್ಳುವಾಗ ಇನ್ಫ್ಲೇಷನ್ನು, ಆಗಿನ್ನೂ ಟಬ್ಬಿನಿಂದ ತೆಗೆದ ಐಸ್ಕ್ರೀಮಿನ ಉಂಡೆಯಂತೆ ಗಟ್ಟಿಯಾಗಿ ಕಾಣ್ತಾ ಎದ್ದೆದ್ದು ಕುಣೀತಿರುತ್ತೆ. ಅದೇ ತನಿಷ್ಕಿನಲ್ಲಿ ಬ್ರೇಸ್ಲೆಟ್ಟು, ಚೈನು, ನೆಕ್ಲೇಸು ಕೊಳ್ಳುವಾಗ, ಹೋಟೆಲಲ್ಲಿ ಕೂತು ಗಡದ್ದಾಗಿ Read more…


ದೆಹಲಿಯಲ್ಲಿ ಕೆಲಸಮಾಡುವಾಗ ಒಬ್ಳು ಒಡಿಸ್ಸಿ ಹುಡ್ಗಿ ನಮ್ಮಾಫೀನ ಆಫೀಸ್ ಸರ್ವೀಸಸ್ ಡೀಪಾರ್ಟ್ಮೆಂಟಿನಲ್ಲಿದ್ಲು. ನಾನು ಆಗ ಕೆಲಸಕ್ಕೆ ಸೇರಿದ ಮೊದಲ ದಿನ ಬಂದು, ನನ್ನ ನಾಯಿಬೆಲ್ಟು (ಐಡಿ ಕಾರ್ಡು ಕಣ್ರೀ), ಆಕ್ಸೆಸ್ ಕಾರ್ಡು, ಮೊಬೈಲ್ ಫೋನು, ಕಾರ್ ಪಾರ್ಕಿಂಗ್ ಸ್ಟಿಕ್ಕರು ಎಲ್ಲಾ ಕೊಡೋಕೆ ಬಂದಿದ್ಲು. ಆಕೆಯ ಹೆಸರೇನು ನೋಡೋಣ ಅಂತಾ ಅವಳ ಕತ್ತಿನಲ್ಲಿ ನೇತಾಡ್ತಿದ್ದ ಐಡಿಕಾರ್ಡಿನ ಮೇಲೆ Read more…


‘ರಾಮ್ ತೇರಿ ಗಂಗಾ ಮೈಲಿ’ ಚಿತ್ರದಲ್ಲಿ ಮಂದಾಕಿನಿ ಬೆತ್ತಲೆಯಾದದ್ದಕ್ಕೆ ನಮ್ಮ ಅಂಕಲ್ ಒಬ್ರು ಆ ಫಿಲಂ ಹೆಸರು “ರಾಮ್ ತೇರಿ ಗಂಗಾ ಬರೀ ಮೈಲಿ” ಅಂತಾ ಅನ್ನೋರು. ಈಗಿನ ಕಟ್ಟರ್ಗಳೇನಾದರೂ ಅದನ್ನು ಕೇಳಿಸಿಕೊಂಡಿದ್ರೆ ರಾಮನನ್ನು ಇಲ್ಯಾಕೆ ಎಳೆದುತಂದದ್ದು ಅಂತಿದ್ರೇನೋ! #ಕರ್ಮತೀರೋಗಾ #ಇತಿನಾಮಕೇ


ಇದೊಂದು ರಷ್ಯನ್ ಅಮಿನೇಷನ್ ವಿಡಿಯೋ(V1)ವನ್ನ ರೊಮೇನಿಯನ್ ಒಬ್ಬ ವಿವರಿಸ್ತಾ ಇರೋ ವಿಡಿಯೋ (V2). ಯಾರಿಗಾದರೂ ‘ಅಂದಿನಕಾಲದ’ ಕಮ್ಯೂನಿಸ್ಟ್ ಮತ್ತು ಸೋಷಿಯಲಿಸ್ಟ್ ದೇಶಗಳಲ್ಲಿ ಜೀವನ ಅಂದ್ರೆ ಹೇಗಿತ್ತು ಅಂತಾ ತಿಳಿದುಕೊಳ್ಳೋ ಆಸೆಯಿದ್ದರೆ, ಇದೊಂದು ನೋಡಲೇಬೇಕಾದ ವಿಡಿಯೋ. ನಿರೂಪಕನಿಗೆ ಬಹಳ ದಪ್ಪದ ರಷ್ಯನ್ ಆಕ್ಸೆಂಟ್ ಇದೆ. ಅದನ್ನ ಸ್ವಲ್ಪ ಗಮನಕೊಟ್ಟು ಅರ್ಥ ಮಾಡ್ಕೊಂಡ್ರೆ, ಇದೊಂದು ಒಳ್ಳೆಯ insight ಕೊಡೋ Read more…


ನಾನು ಚಿಕ್ಕವನಿದ್ದಾಗ (ಬಹಳಷ್ಟು ದೊಡ್ಡವನಾದಮೇಲೂ ಸಹ) ಇದೊಂದು ಎಲ್ಲಾ ಫಿಲಂ ಪೋಸ್ಟರುಗಳಲ್ಲಿ, ಸಿನಿ ಜಾಹೀರಾತುಗಳಲ್ಲಿ, ಮೂವೀ ಹೆಸರಿನ ಕೆಳಗೆ ಬಲಬದಿಯಲ್ಲಿ ಸಣ್ಣಕ್ಷರಗಳಲ್ಲಿ ಕಂಡುಬರುತ್ತಿದ್ದ ಕಾಮನ್ ಪದ. ಇದರರ್ಥ ಏನು ಅಂತಲೇ ನನಗೆ ಗೊತ್ತಾಗ್ತಿರಲಿಲ್ಲ. ಫಿಲಂ ಟೈಟ್ಲು ನೋಡಿದ್ರೇನೇ ಗೊತ್ತಾಗುತ್ತೆ ಇದು ಕನ್ನಡದ ಫಿಲಂ ಅಂತಾ. ಮತ್ತೆ ಇದೇನಿದು ಕಲರ್*ಕನ್ನಡ ಅಂದ್ರೆ ಅಂತಾ ತಲೆ ತುರಿಸಿಕೊಳ್ತಾ ಇದ್ದೆ. Read more…


ಕಿಣಿ ಅನ್ನೋ ಸರ್ ನೇಮು ಇರೋವ್ರು ಡಾಕ್ಟರಾದ್ರೆ, ಕ್ಲಿನಿಕ್ ಮುಂದೆ “ಡಾಕಿಣಿ” ಅಂತಾ ಬೋರ್ಡ್ ಹಾಕ್ಕೋಬೇಕು. ಪಾಪ ಅಲ್ವಾ! 🙁 ಶೃಂಗೇರಿಯಲ್ಲಿ ಅಂದಕಾಲತ್ತಿಲ್ ಒಬ್ರು ಡಾಕ್ಟರ್ ಇದ್ರು. ಅವರ ಮೊದಲ ಹೆಸರು ನೆನಪಿಲ್ಲ. ಅವರ ಸರ್ ನೇಮು ಕಿಣಿ. ಎಲ್ರೂ ಅವ್ರಿಗೆ “ಕಿಣಿ ಡಾಕ್ಟ್ರು” ಅಂತಲೇ ಕರೆಯೋರು. ಅವರ ನೆನಪಾಯ್ತು


ಪ್ರಚಂಡಮಾರುತ ಬೀಸಿದಾಗ, ಆಗಸದಲಿ ಕಾರ್ಮೋಡ ಕೈಚಾಚಿ, ತಿಮಿರದ ಹಕ್ಕಿ ರೆಕ್ಕೆಚಾಚಿದಾಗ, ದೀಪವನ್ನು ಬೂರ್ಷ್ವಾಗಾಳಿ ಹೊಸಕಿದಾಗ, ರಣಹದ್ದುಗಳು ಕೀರಲಿದಾಗ, ಗೂರುಬ್ಬಸವುದು ಎದೆಹಿಂಡಿದಾಗ,   ದೇಹೀ ಎಂದರೂ ಕೊಡದ ಬ್ರಾಹ್ಮಣನಿಗೆ, ಕೋಶ ತೆರೆಯದ ರಾಜತ್ವ ಕ್ಕೆ ದಲಿತನ ಕೋಪದ ರೂಪತೋರಿಸಿ, ಕಾಮಾಲೆಯ ಧರ್ಮ ನಿರ್ನಾಮಮಾಡಿ, ರಕ್ತದೋಳಿಹರಿದರೂ ಸರಿ ಚೆಗುವಾರನ ಆ ಕನಸನ್ನು ನನಸು ಮಾಡುವೆವು.   ಕವಿತೆ ಅರ್ಥವಾಗಿಲ್ಲಾ ಅಂತಾ Read more…


‘ನಾನು’, ‘ನನ್ನನ್ನ ಜನ ನೋಡಬೇಕು’ ‘ನನ್ನ ಮಾತನ್ನ ಜನ ಕೇಳಬೇಕು’ ಅನ್ನೋದು ವ್ರಣವಿದ್ದಂತೆ. ಅದರ ಮೇಲೆ ಬಟ್ಟೆ ಮುಚ್ಚಿದರೆ (‘ನಾನು’ ಅನ್ನೋದನ್ನ ತೋರಿಸಿಕೊಳ್ಳೋ ದಾರಿಗಳು ಬಂದ್ ಆದರೆ) ಒಳಗೇ ಕೊಳೆತ ಶುರುವಾಗುತ್ತದೆ.