Tuesday, 19 March, 2024

ಹಣದುಬ್ಬರ

Share post
ಈ ಹಣದುಬ್ಬರ ಅನ್ನೋದು ಹುಡುಗನೊಬ್ಬ ಬಿಸಿಲಲ್ಲಿ ಹಿಡಿದುನಿಂತ ಐಸ್ಕ್ರೀಮಿನ ಕೋನಿನಂತೆ….ಈಗಿರುತ್ತೆ ಈಗಿರಲ್ಲ.
ಈಗ ನೋಡಿ, ಪೆಟ್ರೋಲ್ ಹಾಕಿಸೋಕೆ ಬಂಕ್’ಗೆ ಹೋದಾಗ, ಸೂಪರ್ ಮಾರ್ಕೆಟಲ್ಲಿ ತರ್ಕಾರಿ, ಅಡುಗೆ ಎಣ್ಣೆ ತಗೊಳ್ಳುವಾಗ ಇನ್ಫ್ಲೇಷನ್ನು, ಆಗಿನ್ನೂ ಟಬ್ಬಿನಿಂದ ತೆಗೆದ ಐಸ್ಕ್ರೀಮಿನ ಉಂಡೆಯಂತೆ ಗಟ್ಟಿಯಾಗಿ ಕಾಣ್ತಾ ಎದ್ದೆದ್ದು ಕುಣೀತಿರುತ್ತೆ.
ಅದೇ ತನಿಷ್ಕಿನಲ್ಲಿ ಬ್ರೇಸ್ಲೆಟ್ಟು, ಚೈನು, ನೆಕ್ಲೇಸು ಕೊಳ್ಳುವಾಗ, ಹೋಟೆಲಲ್ಲಿ ಕೂತು ಗಡದ್ದಾಗಿ ಬಟರ್-ಚಿಕನ್ನು, ಹೈದರಾಬಾದಿ ಬಿರಿಯಾನಿ ತಿನ್ನುವಾಗ ಈ ಇನ್ಫ್ಲೇಷನ್ನು ಅರ್ಧ ಕರಗಿ ಇದು ಐಸ್ಕ್ರೀಮೇ ಹೌದಾ ಅಂತಾ ಅನುಮಾನ ಬರುವಂತಾಗಿರುತ್ತೆ.
ಆದರೆ ಮಲ್ಟಿಪ್ಲೆಕ್ಸಲ್ಲಿ ನೆಚ್ಚಿನ ನಟನ ಸಿನಿಮಾಕ್ಕೆ ಮುನ್ನೂರು ರೂಪಾಯಿ ಟಿಕೇಟು, ಐನೂರು ರೂಪಾಯಿಯ ಪೆಪ್ಸಿ-ಪಾಪ್ಕಾರ್ನು ಕೊಳ್ಳುವಾಗ, ಬಾರಲ್ಲಿ ಪಿಚರ್ಗಟ್ಲೇ ಬಿಯರ್ ಗಂಟಲಲ್ಲಿಳಿಸಿ ಡರ್ರೆಂದು ತೇಗುವಾಗ, ಮಧುಲೋಕದಲ್ಲಿ ಸ್ಕಾಚ್ ಬಾಟ್ಲಿ ಬ್ಯಾಸ್ಕೆಟ್ಟಲ್ಲಿ ಇಡುವಾಗ ಇದೇ ಇನ್ಫ್ಲೇಷನ್ನು ಪೂರ್ತಿ ಕರಗಿ ನೆಲಕ್ಕೆ ಬಿದ್ದು ನೀರಾಗಿ ಹರಿದಿರುತ್ತೆ. ಆ ಕೋನೂ ಪೂರ್ತಿ ಮೆತ್ತಗಾಗಿ ಬಾಯಲ್ಲಿಟ್ಟರೆ ಗರಿಗರಿಯಾಗಿ ಕರುಂಕುರುಂ ಅನ್ನೋ ಬದಲು, ಹಾಗೇ ಕರಗಿ ಹೋಗುತ್ತೆ.
ಟ್ವೀಟೊಂದರ ಭಾವಾನುವಾದ

0 comments on “ಹಣದುಬ್ಬರ

Leave a Reply

Your email address will not be published. Required fields are marked *