Wednesday, 28 February, 2024

StaySafe

Share post

ಟ್ಯಾಕ್ಸಿ ಹತ್ತಿದ ಪ್ಯಾಸೆಂಜರ್ ಸ್ವಲ್ಪ ಹೊತ್ತಾದಮೇಲೆ ಮಾಸ್ಕ್ ತೆಗೆದ. ಡ್ರೈವರ್ ಅಂದ “ಸರ್ ಮಾಸ್ಕ್ ಹಾಕ್ಕೊಳ್ಳಿ. ಇಲ್ಲಾಂದ್ರೆ ಕೆಳಗಿಳ್ಸಬೇಕಾಗುತ್ತೆ. ಕಂಪನಿಯವರು ಸಿಸಿಟಿವಿಯಲ್ಲಿ ನೋಡ್ತಿರ್ತಾರೆ. ಕಷ್ಟ ಆಗುತ್ತೆ ಸಾರ್. ಅದೂ ಅಲ್ದೇ ಕೊರೋನಾ ಸಾರ್…..”

ಪ್ಯಾಸೆಂಜರ್: “ರೀ! ನಿಮ್ ಮಾಸ್ಕ್ ಕೆಲಸ ಮಾಡುತ್ತೆ ಅಂತಾದ್ರೆ ನನ್ ಮಾಸ್ಕ್ ಯಾಕೆ ಬೇಕು. ಕೊರೋನಾ ಬರಲ್ಲ ಬಿಡ್ರೀ”

ಡ್ರೈವರ್ ಸ್ವಲ್ಪ ಯೋಚಿಸಿ: “ನೀವು ಹೇಳಿದ್ದು ಸರಿ ಸಾರ್. ಸಕ್ಕತ್ ಪಾಯಿಂಟು” ಅಂದವ ಕಾರಿನ ಹೆಡ್ಲೈಟ್ ಆಫ್ ಮಾಡ್ದ.

ಪ್ಯಾ: “ಯೋ….ಲೈಟ್ ಯಾಕೆ ಆಫ್ ಮಾಡ್ದೆ. ರೋಡ್ ಕಾಣಲ್ಲ. ಆಕ್ಸಿಡೆಂಟ್ ಆಗುತ್ತೆ. ಎದುರಿಂದ ಯಾರಾದ್ರೂ ಬಂದ್ರೆ…..” ಅಂತಾ ಚಡ್ಡಿ ಒದ್ದೆಮಾಡ್ಕೊಳ್ಳೋಕೆ ರೆಡಿಯಾದ.

ಡ್ರೈ: “ಏ ಪರವಾಗಿಲ್ಲ ಸಾರ್. ಎದುರಿಂದ ಬರೋ ಕಾರುಗಳಿಗೆ ಹೆಡ್ಲೈಟ್ ಇದೆಯಲ್ಲಾ, ಬಿಡಿ”

ಪ್ಯಾಸೆಂಜರಿಗೆ ಅರ್ಥವಾಯ್ತು. ಸುಮ್ನೆ ಮಾಸ್ಕ್ ಹಾಕ್ಕೊಂಡು ಕೂತ.

0 comments on “StaySafe

Leave a Reply

Your email address will not be published. Required fields are marked *