Saturday, 27 April, 2024

Month: November 2023


ಕಳೆದವಾರ ಕಾರ್ಪೊರೇಟ್ ಜಗತ್ತು ಬೋರ್ಡ್ ರೂಂ ಕಾಳಗವೊಂದರ ರೋಚಕ ಬಹುಮಜಲುಗಳ ಬಂಡಾಯದ ತಿರುವುಮುರುವುಗಳ ಕಥೆಯೊಂದಕ್ಕೆ ಸಾಕ್ಷಿಯಾಯ್ತು. ಇಡೀ ಜಗತ್ತಿನ ತಾಂತ್ರಿಕ ಚಹರೆಯನ್ನೇ ಚಾಟ್ ಜಿಪಿಟಿಯ ಮೂಲಕ ಬದಲಿಸುವ ಪಣತೊಟ್ಟ ಸ್ಯಾಮ್ ಆಲ್ಟ್-ಮನ್ ಎಂಬ ವಿಕ್ಷಿಪ್ತ ವ್ಯಕ್ತಿ ಈ ಇಡೀ ಕಥೆಯ ಕೇಂದ್ರಬಿಂದುವಾಗಿದ್ದ. ವಿಜ್ಞಾನ ತಂತ್ರಜ್ಞಾನ ಜಗತ್ತನ್ನು ಅವಲೋಕಿಸುವ ಅಭ್ಯಾಸದವರು ನೀವಾದರೆ, ಈ ಜಗತ್ತಿನಲ್ಲಿ ಪ್ರತೀ ಮೂರುದಶಕಕ್ಕೊಮ್ಮೆ ಹೀಗಾಗುವುದನ್ನು Read more…


ಕ್ರಿಕೆಟ್ ಜ್ವರ ಇನ್ನೂ ಇಳಿದಿಲ್ಲ. ನಿರುತ್ಸಾಹದ ಅಲೆಗಳು ಇನ್ನೂ ಸಪಾಟಾಗಿಲ್ಲ. ಸ್ವಘೋಷಿತ ತಜ್ಞರ ವಿಮರ್ಶೆಗಳು, ವಿಮರ್ಶೆಯ ಹೆಸರಿನಲ್ಲಿ ಕೂರಂಬುಗಳು ಇನ್ನೂ ತಣ್ಣಗಾಗಿಲ್ಲ. ಸೋಲಿನ ಕಾರಣದ ಹುಡುಕಾಟ ನಿಂತಿಲ್ಲ. ತಂಡಕ್ಕೆ, ನಾಯಕನಿಗೆ, ಆ ಬೌಲರನಿಗೆ, ಈ ಬ್ಯಾಟ್ಸ್ಮನ್ನನಿಗೆ, ತರಬೇತುದಾರನಿಗೆ, ಆಯ್ಕೆಸಮಿತಿಗೆ, ಎದುರಾಳಿ ತಂಡಕ್ಕೆ, ಪಾಕಿಸ್ಥಾನಕ್ಕೆ, ಮೋದಿಗೆ ಇನ್ನೂ ಬೈದು ಮುಗಿದಿಲ್ಲ. ಹಾಗಾಗಿ ಇವತ್ತಿನ ಬರಹದ ಓದುಗರು ಕಡಿಮೆಯೇ ಇರಬಹುದು. ಆದರೆ ಜೀವನ ನಿಲ್ಲುವುದಿಲ್ಲ, ನಿಲ್ಲಲೂಬಾರದು ನೋಡಿ. ಬನ್ನಿ ಒಂದು ಕತೆ ಕೇಳೋಣ. Read more…


ಜಗತ್ತು ವೇಗವಾಗಿ ಬೆಳೆಯುತ್ತಿದೆ ಅನ್ನುವ ಮಾತನ್ನು ನಾವು ಸದಾ ಕೇಳುತ್ತಲೇ ಇರುತ್ತೇವೆ. ಹಾಗೂ ಆ ಬೆಳವಣಿಗೆಯ ಬಗ್ಗೆ ಹೆಮ್ಮೆಯನ್ನೂ ಪಡುತ್ತೇವೆ. ನಮ್ಮ ಕಾಲದಲ್ಲಿ ಹೀಗಿರಲಿಲ್ಲಪ್ಪಾ ಎನ್ನುತ್ತಲೇ, ಹೀಗಿದ್ದಿದ್ದರೆ ಎಷ್ಟು ಚಂದ ಇರ್ತಿತ್ತು ಅನ್ನುವ ಕನಸನ್ನೂ ಕಾಣುತ್ತೇವೆ. ಹೌದು ಕೆಲ ಬೆಳವಣಿಗೆಗಳು ಚಂದ. ಇನ್ನು ಕೆಲವು ಬೆಳವಣಿಗೆಗಳು ಆಗದಿದ್ದರೆ ಚೆಂದವಿತ್ತೇನೋ, ಅಥವಾ ಸ್ವಲ್ಪ ನಿಧಾನಕ್ಕೆ ಆಗಿದ್ದರೂ ಒಳ್ಳೆಯದಿತ್ತೇನೋ Read more…


ದೇಶದ ನಾಯಕತ್ವ ಮತ್ತು ಸರ್ಕಾರಗಳ ಸಿದ್ಧಾಂತಗಳೇನೇ ಇರಲಿ, ದೇಶವೊಂದು ನಡೆಯಬೇಕಾದರೆ ವ್ಯಾಪಾರ ವ್ಯವಹಾರಗಳೆನ್ನುವುದು ಇರಲೇಬೇಕು. ಮಾನವ  ನಾಗರೀಕತೆಗಳು ಪ್ರಾರಂಭವಾದಾಗಲಿಂದಲೂ ಕೊಡುಕೊಳ್ಳುವಿಕೆಯ ವ್ಯಾಪಾರಗಳು ನಡೆದೇ ಇವೆ. ನಾಗರೀಕತೆಗಳು ಪ್ರಾರಂಭವಾಗುವ ಮುನ್ನವೂ ತಮ್ಮದೇ ರೂಪದಲ್ಲಿ ವ್ಯಾಪಾರಗಳಿದ್ದೇ ಇದ್ದವು. ಲಾಭ ಎನ್ನುವ ಪರಿಕಲ್ಪನೆ ಸ್ವಲ್ಪ ತಡವಾಗಿ ಬಂದಿರಬಹುದಷ್ಟೇ. ಕಳೆದ ಆರೂವರೆ ಸಾವಿರ ವರ್ಷಗಳ ನಾಗರೀಕತೆಗಳಲ್ಲೆಲ್ಲೂ ಲಾಭವೆನ್ನುವುದನ್ನು ಕೆಟ್ಟಪದವಾಗಿ ಕಂಡಿಲ್ಲ.  ಅದೊಂದು ವ್ಯಾಪಾರದ ಸಹಜ ಉತ್ಪನ್ನ. ಲಾಭವಿಲ್ಲದೇ Read more…