Tuesday, 27 February, 2024

Month: March 2021


ನಮ್ಮಲ್ಲಿ ಹೆಚ್ಚಿನವರು ಕಾರ್ಪೊರೇಟ್ ಅಥವಾ ಖಾಸಗೀ ಕಂಪನಿಗಳ ಹೆಸರು ಕೇಳಿದ ಕೂಡಲೇ ಅದೇನೋ ಹಾವು ತುಳಿದವರಂತೆ ಆಡುವುದುಂಟು. ಕಾರ್ಪೊರೇಟುಗಳೆಂದರೆ ಬಡವರ ರಕ್ತಹೀರುವವರು, ತಮ್ಮ ಲಾಭವನ್ನಷ್ಟೇ ನೋಡಿಕೊಳ್ಳುವವರು, ಅಬಲರನ್ನು ತುಳಿಯುವವರು, ಕಾನೂನನ್ನು ತಮ್ಮ ಜೇಬಿನಲ್ಲಿಟ್ಟುಕೊಂಡು ಸರ್ಕಾರವನ್ನು ತಮ್ಮದಾಗಿಸಿಕೊಂಡು ತಮಗೆ ಬೇಕಾದದ್ದನ್ನೆಲ್ಲಾ ಮಾಡಿಕೊಳ್ಳುವವರು ಎಂಬ ನಂಬಿಕೆ ಇರುವವರೇ ಹೆಚ್ಚು. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಭೋಪಾಲ್’ನಲ್ಲಿ ಅನಿಲ ಸೋರಿಕೆ ಮಾಡಿ Read more…


ನಿಮಗೆ ಯಾರಾದರೂ ಜಗತ್ತಿನ ಅತ್ಯಂತ ಲಾಭದಾಯಕ ಉದ್ಯಮ ಯಾವುದು ಎಂದರೆ ನಿಮ್ಮ ಉತ್ತರ ಏನಿರಬಹುದು? ಬಿಡಿ, ಜಗತ್ತಿನ ಅತ್ಯಂತ ಲಾಭದಾಯಕ ಕಂಪನಿ ಯಾವುದು ಎಂದರೆ ನಿಮ್ಮ ಉತ್ತರ ಏನಿರಬಹುದು? ಇಲ್ಲೊಂದು ಕಂಪನಿಯಿದೆ ನೋಡಿ. ತನ್ನ 60ವರ್ಷದ ಇತಿಹಾಸದಲ್ಲಿ ಪ್ರತೀವರ್ಷವೂ ಸರಾಸರಿ 20%ನಷ್ಟು ಬೆಳವಣಿಗೆ ಆಗುತ್ತಿದೆ, PBT – Profit Before Taxes ಲಾಭ ಕಳೆದ ಐವತ್ತು Read more…


ಮಾತು ಬೆಳ್ಳಿ, ಮೌನ ಬಂಗಾರವೆಂಬ ನಾಣ್ಣುಡಿಯನ್ನು ನೀವು ಕೇಳಿರಬಹುದು. ಯಾವಾಗ ಎಲ್ಲಿ ಏನನ್ನು ಎಷ್ಟು ಮಾತನಾಡಬೇಕು ಎಂದು ತಿಳಿದಿರಬೇಕಾದದ್ದು ಅತೀ ಮುಖ್ಯ. ಆಡಿದ ಮಾತು ಕಾಳ್ಗಿಚ್ಚಿನಂತೆ ಹರಡುವ ಈ ದಿನಗಳಲ್ಲಂತೂ ಇದು ಇನ್ನೂ ಹೆಚ್ಚು ಮುಖ್ಯ. ಸುಳ್ಳನ್ನು, ತಮಗೆ ಬೇಕಾದ ಸತ್ಯಗಳನ್ನೂ, ಅರೆಬೆಂದ ಸತ್ಯಗಳನ್ನೂ ಬೇಕಾಬಿಟ್ಟಿ ಹರಡುವ ಜನರ ಸಂಖ್ಯೆ ಇತ್ತೀಚೆಗೆ ತೀರಾ ಹೆಚ್ಚಾಗಿದೆ. ಇದರ Read more…


ಮಾನವನ ಆಲೋಚನೆ, ಕ್ರಿಯೆ, ಜಗತ್ತಿನ ಗ್ರಹಿಕೆ ಎಲ್ಲವೂ ಸೀಮಿತವೆಂದು ನಮಗೆ ಗೊತ್ತು. ಈ ಜಗತ್ತನ್ನು ನಮ್ಮ ಸೀಮಿತಗ್ರಹಿಕೆಯೊಳಗೆ ಕಟ್ಟಿಡುವುದು ಅಸಾಧ್ಯ. ಬಿಗ್ ಬ್ಯಾಂಗ್ ಎಂದಾಗ ನಮ್ಮ ಮನಸ್ಸಿನಲ್ಲಿ ಮೂಡುವ ಆ ಸ್ಪೋಟ ಕೂಡಾ ನಾವು ನೋಡಿರಬಹುದಾದ ಅತೀ ದೊಡ್ಡ ಸ್ಪೋಟದ ಎರಡುಮೂರು ಪಟ್ಟಷ್ಟೇ ಆಗಿರುತ್ತದೆ. ಅಂಕೆ ಸಂಖ್ಯೆಗಳನ್ನೂ ಕೂಡಾ ನಾವು ಊಹಿಸಿಕೊಳ್ಳುವ ರೀತಿ ತೀರಾ ಮೂಲಾವಸ್ಥೆಯಲ್ಲಿ. Read more…


ರೈತರ ಪ್ರತಿಭಟನೆಗಳು ನಾಲ್ಕುತಿಂಗಳು ಮುಗಿಸಿ ಐದನೇ ತಿಂಗಳಿನೆಡೆಗೆ ಧಾವಿಸುತ್ತಿವೆ. ಮಾಧ್ಯಮದವರು ಯಥಾಪ್ರಕಾರ ಜಗತ್ತಿನ ಸರ್ವವಿದ್ಯಮಾನಗಳಿಗೆ ಬಳಸುವ ಬೆಲ್-ಕರ್ವ್ ಸುದ್ದಿಸಂಗ್ರಹಣಾ ವಿಧಾನ ಬಳಸಿ ಮೊದಮೊದಲಿಗೆ ಈ ಸುದ್ಧಿಯನ್ನು ತೀರಾ ನಿರ್ಲಕ್ಷಿಸಿ, ನಂತರದ ದಿನಗಳಲ್ಲಿ ನಿಧಾನಕ್ಕೆ ಹೆಚ್ಚೆಚ್ಚು ಕವರೇಜ್ ಕೊಟ್ಟು, ಒಂದು ಕಾಲದಲ್ಲಂತೂ ಭಾರತದಲ್ಲಿ ಸಧ್ಯಕ್ಕೆ ರೈತಪ್ರತಿಭಟನೆಯನ್ನು ಬಿಟ್ಟು ಬೇರೇನೂ ನಡೆಯುತ್ತಲೇ ಇಲ್ಲ ಎಂಬ ತಾರಕಕ್ಕೆ ತಲುಪಿ, ತಮ್ಮ Read more…


ಕಳೆದ ವಾರ ರಸ್ತೆಗಳಲ್ಲಿ ಭಯೋತ್ಪಾದಕರಂತೆ ವರ್ತಿಸುವ ಚಾಲಕರ ಬಗ್ಗೆ ಮಾತನಾಡಿದ್ದೆ. ಇದರ ಬಗ್ಗೆ ಇನ್ನೂ ಬರೆಯುತ್ತಲೇ ಹೋಗಬಹುದು. ನಮ್ಮ ಚಾಲಕರು ಬರೇ ವಾಹನ ಓಡಿಸುವಾಗ ಮಾತ್ರವಲ್ಲ, ಸಿಗ್ನಲ್ಲುಗಳಲ್ಲಿ ಕಾಯುವಾಗಲೂ ತೀರಾ ಅಪ್ರಬುದ್ದತೆ ಮತ್ತು ಅಸಹನೆಯಿಂದ ತೋರುತ್ತಾರೆ. ರೈಲ್ವೇ ಗೇಟುಗಳಲ್ಲಿ ನಿಂತಾಗ ತಮ್ಮ ಕಡೆಯ ಎಡಬದಿಯಲ್ಲಿ ನಿಂತು ಬಲಬದಿಯನ್ನು ಎದುರಿನಿಂದ ಬರುವವರಿಗೆ ಬಿಡಬೇಕು ಎಂಬುದನ್ನೂ ಮರೆತು, ಇಡೀ Read more…


ಪ್ರತಿಬಾರಿ ನಾನು ಭಾರತಕ್ಕೆ ಟಿಕೇಟು ಬುಕ್ ಮಾಡಿದಾಗಲೂ ಮನಸ್ಸಿನಲ್ಲಿ ಸಾವಿರ ರೀತಿಯ ಸಂತಸಗಳು ಗರಿಗೆದರಿ ನಿಲ್ಲುತ್ತವೆ. ಜನನೀ ಜನ್ಮಭೂಮಿಶ್ಚ ಸ್ವರ್ಗಾದಪೀ ಗರಿಯಸೀ ಎಂಬೆಲ್ಲಾ ಸಾಲುಗಳು ಮನಸ್ಸಿನಲ್ಲಿ ತುಂಬಿಕೊಂಡು, ಮನಸ್ಸು ಕಣ್ಣುಗಳೆಲ್ಲಾ ತುಂಬಿಬಂದು ದೇಶಪ್ರೇಮ ಚಿಗುರಿ ನಿಲ್ಲುತ್ತದೆ. ಬೆಂಗಳೂರಿನಲ್ಲಿಳಿದು ಇಮಿಗ್ರೇಷನ್ನು, ಭದ್ರತಾ ತಪಾಸಣೆ ಎಲ್ಲವನ್ನೂ ಬೇಗ ಬೇಗ ಮುಗಿಸಿ, ಬ್ಯಾಗೆತ್ತಿಕೊಂಡು ಹೊರಗಡೆ ಓಡಿ ಕಾಯುತ್ತಿರುವವರನ್ನು ತಬ್ಬಿಕೊಳ್ಳುವ ತವಕ. Read more…


ಜೀವನವನ್ನು ಹಸನು ಮಾಡುವ ಶಕ್ತಿ ನಗುವಿದ್ದಷ್ಟು ಬೇರಾವುದಕ್ಕೂ ಇಲ್ಲ ಎಂಬುದೊಂದು ನಂಬಿಕೆ. Laughter is the best medicine ಅನ್ನೋದು ಒಂದು ತೀರಾ ಪ್ರಾಕ್ಟಿಕಲ್ ನಾಣ್ಣುಡಿ ಕೂಡಾ. ನಗು….ನೀ ನಗು….ಕಿರು ನಗೆ ನಗು ಅಂತೆಲ್ಲಾ ನಮ್ಮ ಸಿನಿಮಾ ನಾಯಕರು ಬೇರೆ ಪಾತ್ರಗಳನ್ನು ಪುಸಲಾಯಿಸುವುದನ್ನು ನಾವೆಷ್ಟು ನೋಡಿಲ್ಲ. ಎಂತಹುದೇ ಗಂಭೀರ ಸನ್ನಿವೇಶವನ್ನೂ ಕೂಡಾ ತಿಳಿಗೊಳಿಸುವ ಶಕ್ತಿ ನಗುವಿಗಿದೆ. Read more…


ಭಾರತೀಯ ಸೇನೆ ಮತ್ತದರ ಎಲ್ಲಾ ಘಟಕಗಳಿಗೆ ನಾವು ಅದೆಷ್ಟು ಚಿರಋಣಿಯಾಗಿದ್ದರೂ ಸಾಲದು. ನಮ್ಮ ಬದುಕನ್ನು ಮತ್ತು ಕನಸನ್ನು ಉಳಿಸುವ ಸೈನ್ಯ ಮತ್ತು ಸೈನಿಕರು ಕೂಡಾ ತಮ್ಮ ಕೊಡುಗೆಗೆ ಮಾನ್ಯತೆ ಮತ್ತು ಶಹಬ್ಬಾಸಿಯನ್ನು ಬಯಸುತ್ತಾರೆ. ತಮ್ಮ ಹೆಸರು ಉಳಿಯಬೇಕು, ಮುಂದಿನ ಪೀಳಿಗೆಯೂ ನಮ್ಮ ಬಗ್ಗೆ ತಿಳಿಯಬೇಕು ಎಂದು ಆಸೆಪಡುತ್ತಾರೆ. ಸೇನಾ ಮುಖ್ಯಸ್ಥರು ಭಾಷಣಗಳಲ್ಲಿ ತಮ್ಮ ಹೆಸರನ್ನು ಉಲ್ಲೇಖಿಸಿದಾಗ Read more…