Tuesday, 28 May, 2024

Month: October 2020


ಒಬ್ಬ ಹಿಂದೂ: (*) ಒಂದೇ ಭೋದಕನನ್ನೇ ಹಿಡಿದುಕೊಂಡು ನೇತಾಡ್ತಾನಾ? – ಇಲ್ಲ. ಬದಲಿಗೆ “ಭೋಧಕರಿಗೆ ಕೊನೆಯೇ ಇಲ್ಲ. ಇವತ್ತಿಗೂ ಹೊಸಬರು ಹುಟ್ತಾನೇ ಇದ್ದಾರೆ ನೋಡಿ. ಜಗತ್ತು ಜೀವನ ಸೃಷ್ಟಿ ಸಾವು ಇವನ್ನೆಲ್ಲಾ ಅರ್ಥಸಿಕೊಳ್ಳೋಕೆ ಒಂದು ಜನ್ಮ ಸಾಕಾಗೊಲ್ಲ ಸ್ವಾಮಿ” ಅಂತಾನೇನೋ. (*) ಒಂದೇ ಪುಸ್ತಕದಲ್ಲಿ ಇಡಿ ಜಗತ್ತಿನ ಮರ್ಮ ಅಡಗಿದೆ ಅಂತಾ ನಂಬ್ತಾನಾ? – ಇಲ್ಲ. Read more…


ಹದಿನೆಂಟನೇ ಶತಮಾನಕ್ಕೂ ಮೊದಲು ನಮಗೆ ಬದುಕುವ ರೀತಿಯನ್ನು ಕಲಿಯಲು ಶಾಲೆಗಳ ಅಗತ್ಯವೇ ಇರಲಿಲ್ಲ. ಜೀವನವೇ ಪಾಠಶಾಲೆಯಾಗಿತ್ತು. ಜ್ಞಾನಾರ್ಜನೆಗಾಗಿ ಗುರುಕುಲಗಳಿದ್ದವು. ಸಾಮಾನ್ಯಬದುಕನ್ನು ಬಿಟ್ಟು ಹೆಚ್ಚಿನ ಜ್ಞಾನಾಸಕ್ತಿಯಿದ್ದವರು, ವ್ಯಾಕರಣ ಅಥವಾ ಸಾಹಿತ್ಯಾಸಕ್ತರು, ತತ್ವಜ್ಞಾನದ ಹಿಂದೆಬಿದ್ದವರು ಮತ್ತು ಸ್ಥಿತಿವಂತರು ಗುರುಕುಲಗಳನ್ನು ಆಶ್ರಯಿಸುತ್ತಿದ್ದರು.  ಬ್ರಿಟೀಷರಿಗೆ ಭಾರತದ ಈ ಮಜಲನ್ನು ಅರ್ಥೈಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಚರ್ಚಿನಿಂದ ಕಲಿತದ್ದು ಮಾತ್ರವೇ ಜ್ಞಾನ ಅಥವಾ ಕಲಿಕೆ Read more…


ದೆಹಲಿಯಲ್ಲಿ ಕೆಲಸಮಾಡುವಾಗ ಒಬ್ಳು ಒಡಿಸ್ಸಿ ಹುಡ್ಗಿ ನಮ್ಮಾಫೀನ ಆಫೀಸ್ ಸರ್ವೀಸಸ್ ಡೀಪಾರ್ಟ್ಮೆಂಟಿನಲ್ಲಿದ್ಲು. ನಾನು ಆಗ ಕೆಲಸಕ್ಕೆ ಸೇರಿದ ಮೊದಲ ದಿನ ಬಂದು, ನನ್ನ ನಾಯಿಬೆಲ್ಟು (ಐಡಿ ಕಾರ್ಡು ಕಣ್ರೀ), ಆಕ್ಸೆಸ್ ಕಾರ್ಡು, ಮೊಬೈಲ್ ಫೋನು, ಕಾರ್ ಪಾರ್ಕಿಂಗ್ ಸ್ಟಿಕ್ಕರು ಎಲ್ಲಾ ಕೊಡೋಕೆ ಬಂದಿದ್ಲು. ಆಕೆಯ ಹೆಸರೇನು ನೋಡೋಣ ಅಂತಾ ಅವಳ ಕತ್ತಿನಲ್ಲಿ ನೇತಾಡ್ತಿದ್ದ ಐಡಿಕಾರ್ಡಿನ ಮೇಲೆ Read more…


ಜೇಮ್ಸ್ ಕ್ಯಾಮರೂನನ ಟೈಟಾನಿಕ್ ನೆನಪಿದ್ಯಾ? “ಎಂತಾ ಮೂರ್ಖ ಪ್ರಶ್ನೆ. ಆ ಚಿತ್ರವನ್ನು ನೋಡಿದವರು ಯಾರಾದರೂ ಅದನ್ನು ಮರೆಯುವ ಸಾಧ್ಯತೆ ಬಹಳವೇ ಕಡಿಮೆ” ಅಂತೀರಾ. ಹೌದು, ಅಷ್ಟು ಅಚ್ಚುಕಟ್ಟಾಗಿ ನಿರ್ಮಿಸಿದ ಅರೆಸತ್ಯ ಅರೆಕಾಲ್ಪನಿಕ ಚಿತ್ರವದು. ಅರೆಕಾಲ್ಪನಿಕ ಯಾಕಂದಿರಾ? ಚಿತ್ರದ ಜೀವಾಳವಾದ ಜಾಕ್ ಮತ್ತು ರೋಸ್ ಕಥೆ ಕಾಲ್ಪನಿಕವಾದ್ದರಿಂದ. ಅದು ಬಿಟ್ಟರೆ ಉಳಿದದ್ದೆಲ್ಲಾ ನಿಜವೇ. ಅದನ್ನೇ ಬಿಟ್ಟರೆ ಇನ್ನೇನು Read more…


ರಾಘು ಕಾಫಿಯನ್ನು ಪ್ರೀತಿಸಿದವ. ಹಾಗಾಗಿ ಚಹಾವನ್ನು ದ್ವೇಷಿಸುತ್ತಾನೆ ಅಂತೆಲ್ಲಾ ಅಂದುಕೊಳ್ಳುವ ಅಗತ್ಯವಿಲ್ಲ. ನಾನು ಮೊದಲಿಂದಲೂ ಒಂದಕ್ಕಿಂತಾ ಹೆಚ್ಚು ದೋಣಿಯಲ್ಲಿ ಕಾಲಿಟ್ಟವನೇ 😉 . ಪಾಂಡುವಿನ ಪ್ರೀತಿ ಮಾದ್ರಿಯೆಡೆಗೆ ಹೆಚ್ಚೋ, ಕುಂತಿಯೆಡೆಗೆ ಹೆಚ್ಚೋ ಅನ್ನುವ ಪ್ರಶ್ನೆಯೇ ಅನಗತ್ಯ ಹಾಗೂ ಅನುಚಿತವಾದದ್ದು. ಹಾಗೆಯೇ ನನಗೆ ಕಾಫಿ ಹೆಚ್ಚೋ, ಟೀ ಹೆಚ್ಚೋ ಅನ್ನೂ ಪ್ರಶ್ನೆಯೂ ಅಷ್ಟೇ ನಿಕೃಷ್ಟ. ಈ ಕಾಫಿ-ಟೀ ಹೋರಾಟಗಳೂ ಕಾಫಿ Read more…


ದಂಡಿಗೆ ಹೆದರಲಿಲ್ಲ ದಾಳಿಗೆ ಹೆದರಲಿಲ್ಲ, ಕರ್ಮದ್ದು ಈ ಕರೋನಾ ಕಾಲದಲ್ಲಿ ಶೀತ-ಕೆಮ್ಮಿಗೆ ಹೆದರುವಂಗಾಗೋಯ್ತು. ಇಸ್ಕೀ ಚೀನಾಕೀ ಆಂಖ್….   ನನಗೂ, ನನ್ನ ಸಂಪಿಗೆಯಂತಿಲ್ಲದ ನಾಸಿಕಕ್ಕೂ ಸ್ವಲ್ಪ ಅಷ್ಟಕ್ಕಷ್ಟೇ. ಕಾಲೇಜಲ್ಲಿದ್ದಾಗ ಯಾರೋ ದೋಸ್ತು ಒಂದ್ಸಲ “ರಾಘು ಮೂಗು ಪಕೋಡಾ ಮೂಗು” ಅಂತಾ ಅಂದಿದ್ದನ್ನ ನನ್ನ ನಾಸಿಕ ತಪ್ಪಾಗಿ ಅರ್ಥೈಸಿಕೊಂಡು, “ನಿನ್ ಫ್ರೆಂಡ್ಸೆಲ್ಲಾ ಹೀಗೇ, ಲೋಫರ್ರುಗಳು ಅಂತಾ ಬೈದು” Read more…


“ಈ ಲಾಕ್ಡೌನ್ ಸಮಯದಲ್ಲಿ ನೀವು ಯಾವುದೇ ಹೊಸರುಚಿ ಮಾಡದೇ, ಯಾವುದೇ ಪುಸ್ತಕ ಓದದೇ, ಯಾವುದೇ ಹೊಸಾ ಕೌಶಲ್ಯ ಕಲಿಯದೇ, ಯಾವುದೇ ಸೀರೀಸ್/ಸಿನಿಮಾ ನೋಡಿ ಹೊಸಾ ಪಾಠ ಕಲಿಯದೇ ಇದ್ದರೂ ಪರವಾಗಿಲ್ಲ. ಇದು ಲಾಕ್ಡೌನ್ ಅಷ್ಟೇ, ಯಾವುದೇ ರೇಸ್ ಅಲ್ಲ. ಲಾಕ್ಡೌನ್ ಅನ್ನು ಕೆಲಜನರು ಕಾಂಪಿಟಿಷನ್ ಆಗಿಸಿಕೊಂಡು ಬಿಟ್ಟಿದ್ದಾರೆ” ಅನ್ನುವ ಕೆಲವು ಪೋಸ್ಟರುಗಳನ್ನ ನೋಡಿದೆ.   ಒಮ್ಮುಖವಾಗಿ Read more…


‘ರಾಮ್ ತೇರಿ ಗಂಗಾ ಮೈಲಿ’ ಚಿತ್ರದಲ್ಲಿ ಮಂದಾಕಿನಿ ಬೆತ್ತಲೆಯಾದದ್ದಕ್ಕೆ ನಮ್ಮ ಅಂಕಲ್ ಒಬ್ರು ಆ ಫಿಲಂ ಹೆಸರು “ರಾಮ್ ತೇರಿ ಗಂಗಾ ಬರೀ ಮೈಲಿ” ಅಂತಾ ಅನ್ನೋರು. ಈಗಿನ ಕಟ್ಟರ್ಗಳೇನಾದರೂ ಅದನ್ನು ಕೇಳಿಸಿಕೊಂಡಿದ್ರೆ ರಾಮನನ್ನು ಇಲ್ಯಾಕೆ ಎಳೆದುತಂದದ್ದು ಅಂತಿದ್ರೇನೋ! #ಕರ್ಮತೀರೋಗಾ #ಇತಿನಾಮಕೇ


“ಉಪಮಾ ಕಾಳಿದಾಸಸ್ಯ ಭಾರವೇರರ್ಥಗೌರವಂ | ದಂಡಿನಃ ಪದಲಾಲಿತ್ಯಂ ಮಾಘೇ ಸಂತಿ ತ್ರಯೋಗುಣಾಃ” ಎಂಬ ಮಾತು ಭಾರತದ ಸಾಹಿತ್ಯ ಮತ್ತು ಕಾವ್ಯ ಪ್ರತಿಭೆಗಳಲ್ಲಿ ಅತೀ ಮುಖ್ಯವಾದ ನಾಲ್ಕು ಜನರನ್ನು ಅಂದರೆ ಕಾಳಿದಾಸ, ಭಾರವಿ, ದಂಡಿ ಮತ್ತು ಮಾಘ ಇವರನ್ನು ನಮಗೆ ಪರಿಚಯಿಸುತ್ತದೆ. ಸಾಹಿತ್ಯದ ವಿಚಾರಕ್ಕೆ ಬಂದರೆ ಅಕ್ಷರಗಳೊಂದಿಗೆ ಆಟವಾಡುವುದರಲ್ಲಿ ನಮ್ಮ ಕವಿಗಳು, ವಾಗ್ಗೇಯಕಾರರನ್ನು ಮೀರಿಸುವವರು ಜಗತ್ತಿನ ಬೇರೆಕಡೆಯಲ್ಲಿ Read more…


ಎಸ್ಪಿಬಿಯವರಿಗೆ ನುಡಿನಮನ ಸಲ್ಲಿಸಿದ ನನ್ನ ಲೇಖನಕ್ಕೆ ಮೈಸೂರಿನ ಶ್ರೀ ಪಾಂಡುರಂಗ ವಿಠಲರು ಚಂದದ ಧ್ವನಿರೂಪಕೊಟ್ಟಿದ್ದಾರೆ. ಮೂಲಬರಹ ಇಲ್ಲಿದೆ: “ಕಲ್ಲಾದರೆ ನಾನು…..ಆಕಾಶದೀಪವು ನೀನು” ಎಂದೂಮಾಸದ ಎಸ್ಪಿಬಿಯವರ ಧ್ವನಿಗೊಂದು ಧ್ವನಿನಮನ.