Sunday, 17 March, 2024

Month: November 2020


ಊಟವೆನ್ನುವುದು ಮತಧರ್ಮಗಳಿಂತಾ ಹಳೆಯ ಜೀವನಪಾಠ. ಊಟದ ಇತಿಹಾಸದಿಂದ ಹಿಡಿದು, ಅದನ್ನು ತಯಾರಿಸುವ ರೀತಿ, ಅದರೊಳಗೆ ಹೋಗುವ ಸಾಮಾಗ್ರಿಗಳು, ಅವುಗಳ ವೈಯುಕ್ತಿಕ ಪರಿಮಳ ಹಾಗೂ ರುಚಿ, ಅವುಗಳನ್ನು ಮಿಶ್ರ ಮಾಡುವ ರೀತಿ, ಅವೆಲ್ಲಾ ಮಿಶ್ರವಾದ ನಂತರ ಹುಟ್ಟುವ ಹೊಸದೇ ಆದ ಒಂದು ಅಲೌಕಿಕ ರುಚಿ ಮತ್ತು ಪರಿಮಳ ಇವೆಲ್ಲವೂ ಜೀವನಪ್ರೀತಿಯ ಗುರುತುಗಳು. ಒಳ್ಳೆಯ ಊಟ ಜೀವನಕ್ಕೆ ಕೊಡೋ Read more…


ಈ ಲೇಖನ ಪ್ರಾರಂಭವಾಗುವುದು 1815ರಲ್ಲಿ ಇಂಡೋನೇಷ್ಯಾದ ಮೌಂಟ್ ತಂಬೋರಾ ಜ್ವಾಲಾಮುಖಿ ಸ್ಫೋಟಿಸಿವುದರೊಂದಿಗೆ. ತಂಬೋರಾ ಜ್ವಾಲಾಮುಖಿಯ ಸ್ಪೋಟ ದಾಖಲೀಕೃತ ಮಾನವ ಇತಿಹಾಸದ ಅತ್ಯಂತ ಶಕ್ತಿಶಾಲಿ ಸ್ಫೋಟ. ನಿಮ್ಮಲ್ಲಿ ಕೆಲವರಿಗೆ 1980ರ ಭೀಕರ ಸೇಂಟ್ ಹೆಲೆನ್ಸ್ ಸ್ಪೋಟ ಜ್ವಾಲಾಮುಖಿ ನೆನಪಿರಬಹುದು. ನಮ್ಮ ಶಾಲೆಗಳಲ್ಲಿ ನಮಗೆ ಅಂಕಪಟ್ಟಿ ಇರುವಂತೆಯೇ ಜ್ವಾಲಾಮುಖಿಗಳ ಸ್ಪೋಟಕ್ಕೂ ಒಂದರಿಂದ ಏಳರವರಿಗಿನ ಅಂಕಪಟ್ಟಿಯಿದೆ. ಸೇಂಟ್ ಹೆಲೆನ್ಸ್ ಸ್ಪೋಟ Read more…


ನಿಜವಾಗಿಯೂ….ಹೆಸರಲ್ಲೇನಿದೆ!? ಹೆಸರಲ್ಲಿ ಬರೀ ಅಕ್ಷರಗಳಿವೆ ಅಂತಾ ಹಾಸ್ಯ ಮಾಡ್ಬೇಡಿ. ಎಷ್ಟೋ ಸಲ ಮನುಷ್ಯನಿಗಿಂತಾ ಅವನ ಹೆಸರೇ ಮುಖ್ಯವಾಗುತ್ತೆ. ಅದಕ್ಕೇ ಅಲ್ವೇ, ಮನುಷ್ಯ ಸತ್ತಮೇಲೂ ಅವನ ಕೆಲಸಗಳಿಂದಾಗಿ ಹೆಸರು ಮಾತ್ರ ಉಳಿಯುವುದು? ಕೆಲವೊಮ್ಮೆ ಮಾಡಿದ ಕೆಲಸ ಕೂಡ ಅಳಿದು ಹೋದರೂ ಹೆಸರು ಮಾತ್ರ ಹಾಗೇ ಉಳಿಯುತ್ತೆ. ಯಾರಾದರೂ ಅತ್ಯಾಕಾಂಕ್ಷಿಗಳನ್ನು ಕಂಡಾಗ “ನೀನೇನು ದೊಡ್ಡ ಅಲೆಕ್ಸಾಂಡರೋ!” ಅಂತಾ ಕೇಳುವುದೂ, Read more…


ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ. ಯುಗಾದಿ ಮಾತ್ರವಲ್ಲ, ದೀಪಾವಳಿಯೂ ಮರಳಿ ಮತ್ತೆ ಬರುತ್ತದೆ. ಆದರೆ ದೀಪಾವಳಿ ಯಾವತ್ತೂ ಬರಿಕೈಯಲ್ಲಿ ಬರುವುದಿಲ್ಲ, ಜೊತೆಗೊಂದಷ್ಟು ಚರ್ಚೆಗಳನ್ನೂ ತನ್ನೊಂದಿಗೆ ತರುತ್ತದೆ. ಈ ಚರ್ಚೆಗಳಲ್ಲಿ ಯುಗಾದಿಯ ಹಾಡಿನಂತೆ ಹೊಸದೇನೂ ಇಲ್ಲ. ಅದೊಂದು ಮಾಬಿಯಸ್ ಪಟ್ಟಿಯಮೇಲೆ ನಡೆಯುವ ಇರುವೆಯ ಕಥೆಯಂತೆಯೇ ಹಿಂದೂಗಳಪಾಲಿಗೆ Read more…


ಪ್ರತಿಬಾರಿಯೂ ನವೆಂಬರ್ ಬಂದಾಗ ಕರ್ನಾಟಕದಲ್ಲೊಂದು ವಿಚಿತ್ರವಿದ್ಯಮಾನ ಜರುಗುತ್ತದೆ. ಕನ್ನಡವೆಂದರೆ ಎಲ್ಲರಿಗೂ ಇದ್ದಕ್ಕಿದ್ದಂತೆ ಎಲ್ಲಿಲ್ಲದ ಪ್ರೀತಿ ಉಕ್ಕುತ್ತದೆ. ಕೆಲವರಿಗೆ ಹೆಚ್ಚೇ ಉಕ್ಕುತ್ತದೆ. ಕನ್ನಡವನ್ನು ಹಿಂದಿ ನುಂಗಿಹಾಕುತ್ತಿದೆ ಎಂಬ ವಿಚಾರವನ್ನು ನಮ್ಮೆಲ್ಲರಿಗೂ ತಿಳಿಸಿಕೊಡಲಾಗುತ್ತದೆ. ಬೆಂಗಳೂರಿನಲ್ಲಿ ರ್ಯಾಲಿಗಳು, ಭಾಷಣಗಳು, ಉತ್ಸವಗಳು ಜರುಗುತ್ತವೆ. ಕನ್ನಡವನ್ನು ಉಳಿಸಬೇಕು, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಕರ್ನಾಟಕದ ಕೆಲಸಗಳಲ್ಲಿ ಸರ್ಕಾರಿ ಮಾತ್ರವಲ್ಲ ಖಾಸಗಿ ಕೆಲಸಗಳಲ್ಲೂ ಕನ್ನಡಿಗರಿಗೆ ಮೀಸಲಾತಿ Read more…