Sunday, 28 April, 2024

Month: August 2023


ಕಳೆದವಾದ ಸಿಂಗಪೂರ್ ಏರ್ಲೈನ್ ತನ್ನ ದೇಶವನ್ನು, ಸೇಫ್ಟೀವಿಡಿಯೋದಂತಹ ಒಂದು ನೀರಸವಾಗಬಹುದಾಂತಹಾ ವಿಚಾರದ ಮೂಲಕವೂ ಹೇಗೆ ಪ್ರವಾಸೀ ಮಾರುಕಟ್ಟೆಗೆ ತೆರೆದಿಡುತ್ತೆ ಎನ್ನುವುದನ್ನ ಹೇಳಿದ್ದೆ. ಸೇಫ್ಟೀವಿಡಿಯೋ ಮಾತ್ರವಲ್ಲ, ಅವರ ಇನ್-ಫ್ಲೈಟ್ ಮನರಂಜನಾ ವ್ಯವಸ್ಥೆಯಲ್ಲಿ, ಸಿಂಗಪೂರಿನ ಬಗ್ಗೆ, ಅಲ್ಲಿನ ಆಕರ್ಷಣೆಗಳ ಬಗ್ಗೆ ಸಣ್ಣ ಸಣ್ಣ ಫಿಲಂಗಳೇ ಇವೆ. ನಿಮ್ಮ ಪ್ರಯಾಣದ ಉದ್ದೇಶ ಏನೆಂದು ಆರಿಸಿಕೊಂಡರೆ, ನಿಮ್ಮ ಅಭಿರುಚಿಗೆ ತಕ್ಕಂತೆ ಒಂದು Read more…


ನನ್ನ ಮಗಳು ‘ಕುಹೂ’ಗೆ ಈಗ ಜುಲೈ ಆಗಸ್ಟಿನಲ್ಲಿ ಶಾಲೆಗೆ ರಜವಾದ್ದರಿಂದ, ಸಧ್ಯಕ್ಕೆ ಕುಟುಂಬದೊಂದಿಗೆ ತಿರುಗಾಟದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ವರ್ಷದವರೆಗೂ ಅವಳಿಗೆ ಶಾಲೆಯಿಂದ ರಜಕೇಳಬೇಕಾಗಿದ್ದರೆ ಹೆಚ್ಚಿನ ತಲೆಬಿಸಿಯೇನೂ ಇರುತ್ತಿರಲಿಲ್ಲ. ಯಾವಾಗ, ಎಷ್ಟು ದಿನ ಬೇಕಾದರೂ ಕಾಲಿಗೆ ಚಕ್ರ ಕಟ್ಟಬಹುದಾಗಿತ್ತು. ಈ ವರ್ಷದಿಂದ ಹಾಗಿಲ್ಲ, ವರ್ಷಕ್ಕಿಷ್ಟು ದಿನ ಶಾಲೆಗೆ ಬರಲೇಬೇಕೆಂಬ ನಿಯಮವಿರುವುದರಿಂದ ಹೆಚ್ಚಿನ ಪ್ರವಾಸ ಮತ್ತು ಪ್ರಯಾಣಗಳನ್ನು Read more…


ಬೆಳಿಗ್ಗೆ ಇಂತಹದ್ದೊಂದು ಸುದ್ಧಿ ಓದಿದೆ. ಅದರಲ್ಲಿ ಹೇಗೆ ಇಮೇಲ್ ಹಾಗೂ ಅಟ್ಯಾಚ್ಮೆಂಟುಗಳು ಪರಿಸರಕ್ಕೆ ಹಾನಿ ಮಾಡುತ್ತಿವೆ ಅಂತಾ ಪತ್ರಿಕಾ ಲೇಖನವೊಂದಿತ್ತು. “ಪ್ರತಿಯೊಂದು ಈಮೇಲ್’ನಿಂದ 4ಗ್ರಾಂನಷ್ಟು ಕಾರ್ಬನ್ ಡೈ-ಆಕ್ಸೈಡ್ ವಾತಾವರಣಕ್ಕೆ ಸೇರುತ್ತದೆ. ಈಮೇಲ್ ಗಾತ್ರ ದೊಡ್ಡದಿದ್ದರೆ, ಅಥವಾ ದೊಡ್ಡ ಅಟ್ಯಾಚ್ಮೆಂಟುಗಳಿದ್ದರೆ ಇನ್ನೂ ಹೆಚ್ಚು ಇಂಗಾಲ ಪರಿಸರಕ್ಕೆ ಸೇರಿ ಮಾಲಿನ್ಯಕ್ಕೆ ಕಾರಣವಾಗುತ್ತದೆ” ಅಂತಾ ಅದರಲ್ಲಿ ಬರೆದಿದ್ದರು.   ಮೇಲ್ನೋಟಕ್ಕೆ Read more…


ಹಣವುಳಿಸುವ ಕಥೆಗಳಲ್ಲಿ ಇದು ಕೊನೆಯ ಕಂತು. ಕಳೆದ ವಾರದ ಎಳೆಯನ್ನೇ ಮುಂದುವರಿಸುತ್ತಾ ಉದ್ಯೋಗಿ ಸಂಬಂಧೀ ಖರ್ಚುಗಳನ್ನೇ ಬೇರೆ ಬೇರೆ ರೀತಿಯಲ್ಲಿ ಕಡಿಮೆ ಮಾಡುತ್ತಾ ಲಾಭಗಳಿಸಿದ ಕಂಪನಿಗಳ ಕೆಲ ಉದಾಹರಣೆಗಳನ್ನು ನೋಡೋಣ.   ಖರ್ಚು ಕಡಿಮೆ ಮಾಡೋದು ಎಂದ ಕೂಡಲೇ ನಮಗೆ, ಈ ಕ್ಷಣದ ಅಂದರೆ ಈ ತಿಂಗಳಲ್ಲಿ ಉದ್ಯೋಗಿಗಳ ಸಂಬಳದ ಖರ್ಚನ್ನು ಕಡಿಮೆಮಾಡುವುದು ಎಂಬ ಆಲೋಚನೆ ಬರುತ್ತದೆ. Read more…