Tuesday, 19 March, 2024

Month: September 2020


ನೀವು ಆಗಾಗ ಸಾಮಾನ್ಯವಾಗಿ ಅತ್ಯುತ್ತಮ ವ್ಯಕ್ತಿತ್ವವನ್ನು ಗುರುತಿಸುವಾಗ, “ಮೇರುಸಮಾನರಾದ” “ಮೇರು ಪ್ರಾಯರಾದ” “ಮೇರು ಪರ್ವತದಂತಾ ವ್ಯಕ್ತಿತ್ವ” ಮೊದಲಾದ ವಿಶೇಷಣಗಳ ಬಳಕೆಯನ್ನು ಕೇಳಿರುತ್ತೀರಿ ಅಥವಾ ನೋಡಿರುತ್ತೀರಿ. ಕರ್ನಾಟಸಂಗೀತಪ್ರಿಯರಿಗೆ ಶಾಮಾಶಾಸ್ತ್ರಿಗಳು ಜಗನ್ಮಾತೆ ಪಾರ್ವತಿಯನ್ನು ‘ಸುಮೇರು ಮಧ್ಯ ನಿಲಯೇ’ ಎಂದು ಕರೆದಿರುವುದು ನೆನಪಿರಬಹುದು. ಪಾರ್ವತಿ ಪರ್ವತ ರಾಜ ಹಿಮಾಲಯನ ಮಗಳಾದ್ದರಿಂದ, ಇದೇ ಕಾರಣಕ್ಕೇ ಮೇರು ಪರ್ವತ ಹಿಮಾಲಯ ಪರ್ವತಗಳಲ್ಲಿ ಎಲ್ಲೋ ಇದೆ ಎಂಬ ನಂಬಿಕೆ Read more…


ಜಗತ್ತಿನಲ್ಲಿ ಬೇರೆಯವರ ಜೀವ ಉಳಿಸಿದವರ ಲೆಕ್ಕ ಹಾಕಿದರೆ, ಅತೀ ಹೆಚ್ಚು ಜೀವಗಳನ್ನುಳಿಸಿದ ಮಹಾನುಭಾವ ಯಾರಿರಬಹುದು? ಎಂಬ ಪ್ರಶ್ನೆಗೆ ಉತ್ತರ ಸ್ವಲ್ಪ ಕಷ್ಟವೇ. ಯಾಕೆಂದರೆ ಮಾನವ ಇತಿಹಾಸದಲ್ಲಿ ಬೇರೆ ಬೇರೆ ವ್ಯಕ್ತಿಗಳು ತಮ್ಮದೇ ಆದ ರೀತಿಯಲ್ಲಿ ನೂರಾರು ಜೀವಗಳನ್ನು ಉಳಿಸಿ, ಮನುಕುಲದ ಉಳಿವಿಗೆ ಹಾಗೂ ಮುನ್ನಡೆಗೆ ಕಾರಣರಾಗಿದ್ದಾರೆ. ಮೈಕೇಲ್ ಹೊಲ್ಲಾರ್ಡ್ ಎಂಬ ಫ್ರೆಂಚ್ ಗೂಡಾಚಾರಿ, ಜರ್ಮನ್ನರು ಅತೀರಹಸ್ಯವಾದ Read more…


(ಶೋಡಷಿ ಎಂಬ ಪದದ ಅರ್ಥ ಹದಿನಾರ ಹರಯದ ಹುಡುಗಿ. ಈ ಪದವನ್ನು ಇಲ್ಲಿ ಪ್ರಾಸಕ್ಕಾಗಿ ಬಳಸಲಾಗಿದೆಯೇ ಹೊರತು, ಯಥಾರ್ಥ ಕಲ್ಪಿಸಿಕೊಳ್ಳಬಾರದಾಗಿ ವಿನಂತಿ 😊) ************************************** ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ಎಂಬಮಾತು ಭಾರತದಲ್ಲಿ ಸಾಕ್ಷಾತ್ಕಾರವಾಗಿ ಬಹಳ ಕಾಲವಾಗಿದೆ. ಎಲ್ಲಿ ಮಹಿಳೆಯರನ್ನು ಅಪಮಾನದಿಂದ ಕಾಣಲಾಗುತ್ತದೆಯೋ ಅಲ್ಲಿ ಧರ್ಮಕರ್ಮಗಳು ನಿಷ್ಫಲವಾಗುತ್ತವೆಯೆಂದು ನಮ್ಮ ಪೂಜ್ಯಸಾಹಿತ್ಯಗಳು ತಿಳಿಸುತ್ತವೆ. ಭಾರತೀಯಸಂಸ್ಕೃತಿ Read more…


ನಿನ್ನೆ ಪೂರ್ವಯೂರೋಪಿಗೆ ಸಂಬಂಧಿಸಿದ ಮಹತ್ವದ ಶಾಂತಿಮಾತುಕತೆಯೊಂದು ಅಮೇರಿಕದ ಮಧ್ಯಸ್ಥಿಕೆಯಲ್ಲಿ ನಡೆಯಿತು. ಎರಡು ದಶಕಗಳ ವೈರತ್ವವನ್ನು ಬದಿಗಿಟ್ಟು, ಕೊಸೋವೊ ಮತ್ತು ಸರ್ಬಿಯಾಗಳು ಕೈ-ಕೈ ಮಿಲಾಯಿಸಿ, ತಮ್ಮ ಸಂಬಂಧವನ್ನು ಧನಾತ್ಮಕವಾಗಿ ವೃದ್ಧಿಸಿಕೊಳ್ಳುವತ್ತ ಹೆಜ್ಜೆ ಹಾಕಿವೆ. ಎರಡೂ ಪ್ರಾಂತ್ಯಗಳು ತಮ್ಮ ಗಡಿಗಳನ್ನು ಪರಸ್ಪರರಿಗೆ ತೆರೆಯುವ ಬಗ್ಗೆ, ರಸ್ತೆ ರೈಲು ಮಾರ್ಗಗಳನ್ನು ಪುನರಾರಂಭಿಸುವ ಬಗ್ಗೆ, ವಾಣಿಜ್ಯ ವ್ಯವಹಾರ ಮತ್ತು ಹೂಡಿಕೆಗಳ ಬಗ್ಗೆ Read more…


‘ಪಾಪಿ ಚಿರಾಯು’ ಅನ್ನೋ ಮಾತು ನೀವು ಆಗಾಗ ಕೇಳಿರಬಹುದು. ಮೇಲ್ನೋಟಕ್ಕೆ ಕಂಡುಬರುವಂತೆ ಇದರರ್ಥ ‘ಪಾಪಿಗಳಿಗೆ ಸಾವಿಲ್ಲ’ ಅಂತಾ. ಆದರೆ ನಿಜಕ್ಕೂ ಪಾಪಿಗೆ ಸಾವಿಲ್ಲವೇ!? ‘ಜೀವನ ಅತ್ಯಮೂಲ್ಯ’ ಅಂತಾ ಆದ ಮೇಲೆ, ಸಾವು ಸಿಗದವ ಪಾಪಿ ಹೇಗೆ? ಸಾವು ಹತ್ತಿರ ಸುಳಿಯದೇ ಬದುಕುಳಿದವ ಪುಣ್ಯವಂತನಲ್ಲವೇ!? ಹಾಲಿವುಡ್ಡಿನಲ್ಲಿ ‘ಫೈನಲ್ ಡೆಸ್ಟಿನೇಷನ್’ ಎಂಬುದೊಂದು ಚಿತ್ರಸರಣಿಯೇ ಇದೆ. ಅದನ್ನು ನೋಡಿ ಮನೆಯಿಂದ Read more…