Saturday, 27 April, 2024

Month: October 2023


ತಂತ್ರಜ್ಞಾನ ಮುಂದುವರೆದಂತೆಲ್ಲಾ ಮನುಷ್ಯನ ಕೆಲಸ ಕಡಿಮೆಯಾಗಿದೆ ಎಂದು ಭಾವಿಸುವವರಿದ್ದಾರೆ. ಆದರೆ ನಿಜಕ್ಕೂ ಮನುಷ್ಯನ ಕೆಲಸಗಳೇನೂ ಕಡಿಮೆಯಾಗಿಲ್ಲ, ಇದ್ದ ಕೆಲಸಗಳು ಮೊದಲಿಗಿಂತಾ ಸುಲಭವಾಗಿವೆ ಅಷ್ಟೇ. ಆ ಕೆಲಸಗಳನ್ನು ಸುಲಭವಾಗಿ ಮತ್ತು ಬೇಗ ಮುಗಿಸಿದ ಮನುಷ್ಯ ಸಮಯವನ್ನುಳಿಸಿ ಆ ಸಮಯದಲ್ಲಿ ಕೆಲಸವಿಲ್ಲದೇ ಕೂತಿಲ್ಲ. ಬೇರೆ ಇನ್ನೊಂದೇನೋ ಕೆಲಸ ಶುರುಹಚ್ಚಿಕೊಂಡಿದ್ದಾನೆ. ಹಾಗಾಗಿಯೇ, ಹದಿನೆಂಟನೇ ಶತಮಾನದಲ್ಲಿ ಒಂದು ಶತಕೋಟಿಯಿದ್ದ ನಾವುಗಳು, ಎಂಟು ಶತಕೋಟಿಯಾಗಿ ಬೆಳೆದರೂ, ಕೆಲಸಗಳನ್ನು ಕಡಿಮೆ Read more…


ಕೆಲವೊಮ್ಮೆ ಜಗತ್ತಿನಲ್ಲಿ ಶಕ್ತಿವಂತರಾಗುವುದಕ್ಕೆ ಕೇವಲ ನಾವು ಗಟ್ಟಿಯಾಗಿರುವುದು ಮಾತ್ರವಲ್ಲ, ನಮ್ಮ ವಿರೋಧಿಗಳು ತೀರಾ ದುರ್ಬಲಾಗಿರುವುದೂ ಕಾರಣವಾಗುತ್ತದೆ. ಇಸ್ರೇಲನ್ನು ಸುತ್ತುವರೆದಿದ್ದ ಅರಬ್ ದೇಶಗಳು ಒಂದೇ ಧರ್ಮದ ಮೂಲಕ ಬೆಸೆದುಕೊಂಡಿದ್ದರೂ ಕೂಡಾ, ಮೊದಲಿಂದಲೂ ರಾಜತಾಂತ್ರಿಕವಾಗಿ ಅಲ್ಲಿದ್ದ ನೂರುಜನ ರಾಜರು ನೂರುದಿಕ್ಕಿಗೆ ನೋಡುವಂತವರಾಗಿದ್ದರು. ಸದಾ ಅಂತರಿಕ ಕಚ್ಚಾಟಗಳಲ್ಲೇ ಮುಳುಗಿದ್ದು, ರಾಜಮನೆತಗಳು ತಮ್ಮವರನ್ನೇ ಗಟ್ಟಿಮಾಡುಕೊಳ್ಳುವುದರಲ್ಲೇ ನಿರತರಾಗಿದ್ದವು. ಅರಬ್ ಒಕ್ಕೂಟದ ಎರಡು ದೊಡ್ಡ ದೇಶಗಳಾಗಿದ್ದ ಸೌದಿ ಅರೇಬಿಯಾ Read more…


ನಾವು ಒಂದು ಹುಡುಗಿ, ಒಬ್ಬಳು ಹೆಂಡತಿ, ಒಂದೋ ಎರಡೋ ಮಕ್ಕಳನ್ನ ಸುಧಾರಿಸಬೇಕು ಅನ್ನೋವಷ್ಟರಲ್ಲಿ ಹೈರಾಣಾಗಿರ್ತೀವಿ. “ಆರತಿಗೊಬ್ಬ ಮಗಳು, ಕೀರುತಿಗೊಬ್ಬ ಮಗ…ನಾವಿಬ್ಬರು ನಮಗಿಬ್ಬರು” ಎನ್ನುವಲ್ಲಿಂದ “ಗಂಡ ಹೆಂಡ್ತಿ ಮುಖದಲ್ಲಿ ನಗು, ಬೀದಿಗೊಂದು ಮಗು” ಅನ್ನೋ ಸ್ಥಿತಿಗೆ ಬಹುತೇಕ ಹಿಂದೂಗಳು, ಮಾತ್ರವಲ್ಲ ಇಡೀ ಯೂರೋಪು ಅಮೇರಿಕಾ ತಲುಪಿವೆ. ಅದೇ ಕಾಲಕ್ಕೆ ಶಾಂತಿಬಯಸುವವರು ಹೊಟ್ಟೆಗೆ ಹಿಟ್ಟಿಲ್ಲದಿದ್ರೂ ಮನೆತುಂಬ, ಊರತುಂಬೆಲ್ಲಾ ಮಕ್ಕಳು ಮಾಡಿಕೊಳ್ಳುತ್ತಿರುವಾಗ, ಅಲ್ಲೊಬ್ಬ “ನಾವು ಹೆಚ್ಚೆಚ್ಚು ಮಕ್ಕಳನ್ನು ಮಾಡಿಕೊಳ್ಳದೇ ಇರೋದು, ಮಾನವಕುಲಕ್ಕೆ Read more…


ಜೀವನದಲ್ಲಿ ಯಶಸ್ಸು ಸಾಧಿಸಲಿಕ್ಕೆ ಏನು ಮಾಡಬೇಕು? ಅಂತಾ ಕೇಳಿದ್ರೆ ಕೆಲವರು ಕಷ್ಟಪಟ್ಟು ದುಡಿಯಬೇಕು ಅನ್ನಬಹುದು, ಕೆಲವರು ಜ್ಞಾನ ಇರಬೇಕು ಅನ್ನಬಹುದು, ಮತ್ತೆ ಕೆಲವರು “ಏನೇ ಗಳಿಸಬೇಕಾದರೂ ಅದೃಷ್ಟ ಇರಬೇಕು. ಅದಿಲ್ಲದಿದ್ದರೆ ಎಷ್ಟೇ ಬುದ್ಧಿವಂತಿಕೆ, ಶ್ರಮ ಹಾಕಿದರೂ ಏನೂ ಗಿಟ್ಟಲ್ಲ” ಅನ್ನಬಹುದು. ಅವೆಲ್ಲವೂ ಸರಿಯಾದ ಮಾತುಗಳು ಕೂಡಾ ಹೌದು. ಹಣ, ಹೆಸರು, ಸ್ಥಾನ ಮಾತ್ರವಲ್ಲ ಮನಶ್ಶಾಂತಿ ಪಅಡೆಯಲಿಕ್ಕೂ ಕೂಡಾ ಅದನ್ನು ಗಳಿಸುವುದು ಹೇಗೆ ಎನ್ನುವ ಪರಿಜ್ಞಾನ Read more…