Saturday, 16 March, 2024

Good bye MSD!

Share post

ನನಗಿಷ್ಟವಾದದ್ದನ್ನ ಪೋಸ್ಟ್ ಹಾಕಲಿಲ್ಲ,
ನನಗಿಷ್ಟವಾಗುವ ರೀತಿಯಲ್ಲಿ ಬರೆಯಲಿಲ್ಲ,
ನಾನು ಯೋಚಿಸುವಂತೆ ಯೋಚಿಸಲಿಲ್ಲ,
ನನಗಿಷ್ಟವಾದ ವೈದ್ಯಪ್ರಕಾರವನ್ನು ಬೆಂಬಲಿಸಲಿಲ್ಲ,

ಅಂತೆಲ್ಲಾ ಕುಸುಗುಡುತ್ತಾ ಜನರನ್ನು ಅನ್ಫ್ರೆಂಡ್ ಅಥವಾ ಬ್ಲಾಕ್ ಮಾಡುವ ಜನರೇ
.
.
.
.
.
.
.
.
.
ನನಗಿಷ್ಟವಾದ ಆಟಗಾರನಿಗೆ ಆಡುವ ಅವಕಾಶ ನೀಡಲಿಲ್ಲ ಅಂತಲೇ ಧೋನಿಗೆ ಬೈದಾಡುವವರು 🤦🏻‍♂️🤣

ಇರುವ ಹನ್ನೊಂದು ಜನರ ಟೀಮಿನಲ್ಲಿ ಯಾರ್ಯಾರನ್ನ ಆಡಿಸಬೇಕು ಮಾರ್ರೆ!?
ಯಾರ್ಯಾರಿಗೋ ವಿದಾಯದ ಪಂದ್ಯ ಕೊಡಿಸಲಿಲ್ಲ ಅಂತಲೂ ಅಳುವವರಿದ್ದಾರಲ್ಲ, ಎಂಚಿ ಸಾವು ಯಾ.

ಒಂದು ಕಡೆ ಸಚಿನ್/ಸೆಹ್ವಾಗ್/ಗಂಗೂಲಿ/ಲಕ್ಷ್ಮಣ್/ದ್ರಾವಿಡರಂತಹಾ Gods of Cricketರನ್ನೂ ಸಂಭಾಳಿಸಿಕೊಂಡು, ಇನ್ನೊಂದು ಕಡೆ ಹೊಸಪ್ರತಿಭೆಗಳನ್ನೂ ಹುಡುಕಿ, ಹೆಕ್ಕಿ, ಬೆಳೆಸಿಕೊಂಡು, ದೇಶದ ಹೆಸರುಹೊತ್ತ ಜೆರ್ಸಿಯನ್ನೂ ಹೊತ್ತು, ಪಂದ್ಯಗಳನ್ನು ಕಪ್ಪುಗಳನ್ನು ಗೆಲ್ಲುವುದು ಸುಲಭದ ಮಾತಲ್ಲ. ಅದರಲ್ಲೂ ಪಾಕಿಸ್ಥಾನ-ಭಾರತಗಳಂತಹಾ ಭಾವನಾತ್ಮಕ ದೇಶಗಳಲ್ಲಂತೂ ಹತ್ತು ಪಟ್ಟು ಕಠಿಣ.

ಪ್ರತೀ ನಾಯಕನಿಗೂ (ಕ್ರಿಕೆಟ್ ತಂಡದ ನಾಯಕ ಮಾತ್ರವಲ್ಲ) ಅವನದ್ದೇ ಆದ ಹತ್ತಿರದ ಮತ್ತು ದೂರಗಾಮಿ ಗುರಿಯಿರುತ್ತದೆ. ಅದನ್ನು ತಲುಪುವ ಆ ಜರ್ನಿ ಗೇಮ್ ಆಫ್ ಥ್ರೋನ್ಸ್’ನ ಖಲೀಸೀಯ ಪ್ರಯಾಣದಂತದ್ದು. ಕೆಲವು ಸುಲಭದ, ಕೆಲವು ಕಷ್ಟದ ನಿರ್ಧಾರಗಳು ಎದುರಾಗೇ ಆಗುತ್ತವೆ. ಎಷ್ಟೋ ಬಾರಿ ತಮಗಿಷ್ಟವಾದದ್ದನ್ನೇ ಕಳೆದುಕೊಳ್ಳಬೇಕಾಗುತ್ತದೆ, ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಬಿಟ್ಟೇ ನಡೆಯಬೇಕಾಗುತ್ತದೆ, ಇನ್ನು ಕೆಲವೊಮ್ಮೆ ಬಲಿಯೂ ಕೊಡಬೇಕಾಗಿಬರುತ್ತದೆ. It’s a part of the journey.

ಸದಾ ನೀರಿಗೆ ಅಂಟಿಕೊಂಡೇ ಇದ್ದರೂ ಯಾವತ್ತೂ ಅಂಟಿಕೊಳ್ಳದ ತಾವರೆಲೆಯಂತಹಾ ಸ್ಥಿತಪ್ರಜ್ಞತೆ, ಎಲ್ಲವನ್ನೂ ಅಳೆದುತೂಗಿ ನಿರ್ಧರಿಸುವ ಯುಧಿಷ್ಟಿರನ ಸ್ಥಿರತೆ, ಪಾರ್ಥನಿಗೆ ಮಾತ್ರ ಹೆಚ್ಚು ಸಹಾಯಮಾಡಿ ನಮ್ಮನ್ನೆಲ್ಲಾ ಕಡೆಗಣಿಸಿದೆ ಎಂದು ಬೈಸಿಕೊಂಡರೂ ನಕ್ಕು ಮತ್ತೆ ಅವರೊಂದಿಗೇ ಜೊತೆಗೇ ನಿಲ್ಲುವ ಕೃಷ್ಣನ ಆಳ……ಇವು ಎಲ್ಲರಿಗೂ ಕೂಡಿಬರಲ್ಲ. ಹಾಗೆ ಕೂಡಿಬಂದವರನ್ನು ಜಗತ್ತು ಅರ್ಥೈಸಿಕೊಳ್ಳಲೂ ಸಾಧ್ಯವಿಲ್ಲ.

ಒಂದು ತಿಳಿದಿರಿ….ಅವನು ನಡೆದ ಹಾದಿ, ಅವನಿಗಿದ್ದ ಸವಾಲುಗಳು, ಅವನಿಗಿದ್ದ ಕಷ್ಟಗಳು ಅವನಿಗೆ ಮಾತ್ರ ಗೊತ್ತಿರಲು ಸಾಧ್ಯ. ಅವಕ್ಕೆ ತಕ್ಕ ಪರಿಹಾರಗಳೂ ಅವನಿಗೆ ಮಾತ್ರ ಗೊತ್ತಿರಲು ಸಾಧ್ಯ. ನಾನು-ನೀವು ಬರೀ ಮಾತನಾಡಬಹುದಷ್ಟೇ. ಬೇರೇನೂ ಮಾಡಲಾಗುವುದಿಲ್ಲ. ಮಾತನಾಡಲು ಯಾರಿಗೂ 144 ಸೆಕ್ಷನ್ನಿಲ್ಲ. ಎಷ್ಟು ಬೇಕಾದರೂ ಆಡಿ. ಆದರೆ ಅವು ಬರೀ ಮಾತುಗಳಾಗಿರುತ್ತವೆಯೇ ಹೊರತು, ಅದರಿಂದ ನಯಾಪೈಸೆ ಪ್ರಯೋಜನ ನಿಮಗಾಗಲೀ, ನಿಮಾಮನೆಚ್ಚಿನ ಆಟಗಾರರಿಗಾಗಲೀ, ಅವನಿಗಾಗಲೀ ಇರಲ್ಲ. ಯಾಕೆಂದರೆ ಅವು ಬರೀ ಹುಚ್ಚುಮನಸ್ಸಿನ ಹದಿನಾರು ಬಡಬಡಿಕೆಗಳಷ್ಟೇ.
You can sulk as much as you want.

There were many greats before you.
There will definetly be many greats after you.
But you will remain my true captian.

Keep inspiring many more.

Love you always MSD.

0 comments on “Good bye MSD!

Leave a Reply

Your email address will not be published. Required fields are marked *