Monday, 25 September, 2023

Tag: Latest


ಕಳೆದವಾದ ಸಿಂಗಪೂರ್ ಏರ್ಲೈನ್ ತನ್ನ ದೇಶವನ್ನು, ಸೇಫ್ಟೀವಿಡಿಯೋದಂತಹ ಒಂದು ನೀರಸವಾಗಬಹುದಾಂತಹಾ ವಿಚಾರದ ಮೂಲಕವೂ ಹೇಗೆ ಪ್ರವಾಸೀ ಮಾರುಕಟ್ಟೆಗೆ ತೆರೆದಿಡುತ್ತೆ ಎನ್ನುವುದನ್ನ ಹೇಳಿದ್ದೆ. ಸೇಫ್ಟೀವಿಡಿಯೋ ಮಾತ್ರವಲ್ಲ, ಅವರ ಇನ್-ಫ್ಲೈಟ್ ಮನರಂಜನಾ ವ್ಯವಸ್ಥೆಯಲ್ಲಿ, ಸಿಂಗಪೂರಿನ ಬಗ್ಗೆ, ಅಲ್ಲಿನ ಆಕರ್ಷಣೆಗಳ ಬಗ್ಗೆ ಸಣ್ಣ ಸಣ್ಣ ಫಿಲಂಗಳೇ ಇವೆ. ನಿಮ್ಮ ಪ್ರಯಾಣದ ಉದ್ದೇಶ ಏನೆಂದು ಆರಿಸಿಕೊಂಡರೆ, ನಿಮ್ಮ ಅಭಿರುಚಿಗೆ ತಕ್ಕಂತೆ ಒಂದು Read more…


ನನ್ನ ಮಗಳು ‘ಕುಹೂ’ಗೆ ಈಗ ಜುಲೈ ಆಗಸ್ಟಿನಲ್ಲಿ ಶಾಲೆಗೆ ರಜವಾದ್ದರಿಂದ, ಸಧ್ಯಕ್ಕೆ ಕುಟುಂಬದೊಂದಿಗೆ ತಿರುಗಾಟದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ವರ್ಷದವರೆಗೂ ಅವಳಿಗೆ ಶಾಲೆಯಿಂದ ರಜಕೇಳಬೇಕಾಗಿದ್ದರೆ ಹೆಚ್ಚಿನ ತಲೆಬಿಸಿಯೇನೂ ಇರುತ್ತಿರಲಿಲ್ಲ. ಯಾವಾಗ, ಎಷ್ಟು ದಿನ ಬೇಕಾದರೂ ಕಾಲಿಗೆ ಚಕ್ರ ಕಟ್ಟಬಹುದಾಗಿತ್ತು. ಈ ವರ್ಷದಿಂದ ಹಾಗಿಲ್ಲ, ವರ್ಷಕ್ಕಿಷ್ಟು ದಿನ ಶಾಲೆಗೆ ಬರಲೇಬೇಕೆಂಬ ನಿಯಮವಿರುವುದರಿಂದ ಹೆಚ್ಚಿನ ಪ್ರವಾಸ ಮತ್ತು ಪ್ರಯಾಣಗಳನ್ನು Read more…


ಹಣವುಳಿಸುವ ಕಥೆಗಳಲ್ಲಿ ಇದು ಕೊನೆಯ ಕಂತು. ಕಳೆದ ವಾರದ ಎಳೆಯನ್ನೇ ಮುಂದುವರಿಸುತ್ತಾ ಉದ್ಯೋಗಿ ಸಂಬಂಧೀ ಖರ್ಚುಗಳನ್ನೇ ಬೇರೆ ಬೇರೆ ರೀತಿಯಲ್ಲಿ ಕಡಿಮೆ ಮಾಡುತ್ತಾ ಲಾಭಗಳಿಸಿದ ಕಂಪನಿಗಳ ಕೆಲ ಉದಾಹರಣೆಗಳನ್ನು ನೋಡೋಣ.   ಖರ್ಚು ಕಡಿಮೆ ಮಾಡೋದು ಎಂದ ಕೂಡಲೇ ನಮಗೆ, ಈ ಕ್ಷಣದ ಅಂದರೆ ಈ ತಿಂಗಳಲ್ಲಿ ಉದ್ಯೋಗಿಗಳ ಸಂಬಳದ ಖರ್ಚನ್ನು ಕಡಿಮೆಮಾಡುವುದು ಎಂಬ ಆಲೋಚನೆ ಬರುತ್ತದೆ. Read more…


ಕಳೆದೆರಡು ವಾರದಲ್ಲಿ ಹಣಉಳಿಸಲು ಕಂಪನಿಗಳು ಮಾಡಿದ ಕೆಲ ಜನಪ್ರಿಯ ಪ್ರಯತ್ನಗಳ ಉದಾಹರಣೆಗಳ ಬಗ್ಗೆ ಬರೆದಿದ್ದೆ. ಈ ಮತ್ತು ಮುಂದಿನ ಕಂತಿನಲ್ಲಿ, ಇದೇ ನಿಟ್ಟಿನಲ್ಲಿ ಅಂದರೆ ಕಂಪನಿಗೆ ಹಣವುಳಿಸುವ ಹಾದಿಯಲ್ಲಿ ಮಾಡಿದ ಒಂದು ನಿರ್ದಿಷ್ಟಹಂತದ ಪ್ರಯತ್ನಗಳ ಬಗ್ಗೆ ತಿಳಿಯೋಣ. ಇದು ವೈಯುಕ್ತಿಕವಾಗಿ ನನ್ನ ಕೆಲಸದ ಕ್ಷೇತ್ರವೂ ಹೌದಾದ್ದರಿಂದ, ಇದರ ಬಗ್ಗೆ ನನಗೆ ಹೆಚ್ಚೇ ಒಲವು ಹಾಗೂ ವಿವರಿಸಲು ನನಗೆ ಸಂತೋಷ ಕೂಡಾ. Read more…


ನನ್ನ ಹಿಂದಿನ ಅಂಕಣದಲ್ಲಿ, ಕಂಪನಿಗಳು ಲಾಭ ಹೆಚ್ಚಿಸುವ ಉದ್ದೇಶದಿಂದ ಜಾರಿಗೆ ತಂದ ಕೆಲವು ವಿಷಯಗಳ ಬಗ್ಗೆ ಬರೆದಿದ್ದೆ. ವ್ಯವಹಾರ ಲೋಕದಲ್ಲಿ ಇವನ್ನು ಜಿಪುಣತನ ಅನ್ನಲಿಕ್ಕಾಗುವುದಿಲ್ಲ. ಯಾಕೆಂದರೆ ಇವು ಬರೀ ಒಂದೆರಡು ಡಾಲರ್ ಉಳಿಸುವ ಉಪಾಯಗಳಲ್ಲ. ಬದಲಿಗೆ ಕೋಟ್ಯಾಂತರ ಡಾಲರ್ ಉಳಿಸುವ ನಿಟ್ಟಿನಲ್ಲಿ ನೆರವಾದ ಹೆಜ್ಜೆಗಳು. ಇವು ಯಾರೋ ಒಬ್ಬ ಸುಮ್ಮನೇ ಮಧ್ಯಾಹ್ನದೂಟಕ್ಕೆ ಕೂತಾಗ ಟೀಮಿಗೆ ಕೊಟ್ಟ ಸಲಹೆಗಳಲ್ಲ. ನೂರಾರುಘಂಟೆಗಳ Read more…


ನಿಮ್ಮ ಪ್ರಕಾರ ಕಂಪನಿಯೊಂದರ ಮೂಲ ಉದ್ದೇಶವೇನಿರಬಹುದು? ನೀವು ಕೆಲಸ ಮಾಡುವ ಕಂಪನಿಯಿರಬಹುದು, ಅಥವಾ ಮಾರುಕಟ್ಟೆಯಲ್ಲಿ ನೋಡುವ ಬೇರೆ ಕಂಪನಿಗಳಿರಬಹುದು. ಅದರ ಮೂಲ ಮತ್ತು ಅಂತಿಮ ಉದ್ದೇಶವೇನು? ಕಂಪನಿಗಳಿಗೆ ವಿಷನ್ ಮತ್ತು ಮಿಷನ್ ಸ್ಟೇಟ್ಮೆಂಟುಗಳಿರುತ್ತೆ ಅನ್ನೋದನ್ನ ನೀವು ಓದಿರ್ತೀರಿ. ಕೆಲಕಂಪನಿಗಳಿಗೆ ತಮ್ಮ ವಲಯದೊಳಗೆ ಜಗತ್ತಿನಲ್ಲೇ ಅತ್ಯುತ್ತಮ ಕಂಪನಿಯಾಗುವ ವಿಷನ್ ಸ್ಟೇಟ್ಮೆಂಟ್ ಇರುತ್ತೆ. ಇನ್ನು ಕೆಲಕಂಪನಿಗಳಿಗೆ ಜನರ ಜೀವನಮಟ್ಟವನ್ನು ಸುಧಾರಿಸೋದು, ಬೇರೆ ಕಂಪನಿಗಳಿಗೆ ಜಗತ್ತನ್ನು Read more…


“ಲಂಡನ್ ಬ್ರಿಡ್ಜ್ ಈಸ್ ಫಾಲಿಂಗ್ ಡೌನ್…ಫಾಲಿಂಗ್ ಡೌನ್” ಅನ್ನೋ ಶಿಶುಗೀತೆಯನ್ನ ನಾವೆಲ್ಲರೂ ಕೇಳಿದ್ದೀವಿ. ಈ ಹಾಡಿನ ವಿಭಿನ್ನ ಆವೃತ್ತಿಗಳನ್ನು ಪ್ರಪಂಚದಾದ್ಯಂತ ಕಾಣಬಹುದು (ಕೇಳಬಹುದು). ಮಕ್ಕಳು ಇದನ್ನು ಚಂದಾಗಿ ಪ್ರಾಸಬದ್ಧವಾಗಿ ಹಾಡುತ್ತಾರಷ್ಟೇ ಹೊರತು, ಯಾಕೆ ಲಂಡನ್ ಸೇತುವೆ ಬಿತ್ತು ಅಂತಾ ಕೇಳುವ ಸಾಧ್ಯತೆ ಕಡಿಮೆ. ಈ ಹಾಡು ಕೇಳುವುದಕ್ಕೆ ಚಂದವಾಗಿದ್ದರೂ, ಇದರ ಹಿಂದಿನ ಅರ್ಥ ಕರಾಳವಾದದ್ದೇ. ಈ Read more…


ಸಮಾಜ ಮತ್ತು ದೇಶವೊಂದು ಮುಂದುವರೆಯಬೇಕಾದರೆ ಕೇವಲ ನಾಯಕ, ಸರ್ಕಾರಗಳು ಮಾತ್ರ ಆದರ್ಶರೀತಿಯಲ್ಲಿದ್ದರೆ ಸಾಲದು. ಅವು ಯಾರಿಗಾಗಿ ರಚಿಸಲ್ಪಟ್ಟಿವೆಯೋ ಆ ಪ್ರಜೆಗಳೂ ಅವರೂ ಆದರ್ಶಗುಣಗಳನ್ನು ಹೊಂದಿರಬೇಕು. ಆದರ್ಶ ನಾಯಕನಿಗೆ ಹೇಗೆ ಗುಣಲಕ್ಷಣಗಳಿವೆಯೋ, ಆದರ್ಶ ಪ್ರಜೆಗೂ ಹಾಗೆಯೇ ಕೆಲ ಗುಣಲಕ್ಷಣಗಳಿವೆ. ಮತ್ತೀ ಗುಣಲಕ್ಷಣಗಳು ಶತಮಾನಗಳ ಕಾಲದಿಂದ, ಹತ್ತಾರು ನಾಗರೀಕತೆಗಳು ಕಲಿತ ಪಾಠದ ಮೂಲಕ ವಿಕಸನಗೊಳ್ಳುತ್ತಾ ಗಟ್ಟಿಯಾಗಿ ರೂಪುಗೊಂಡಿವೆ. ಒಬ್ಬ Read more…


ಚುನಾವಣೆಗಳು ಹೊಸ್ತಿಲಲ್ಲಿವೆ. ಪ್ರತಿ ಚುನಾವಣೆ ಬಂದಾಗಲೂ ರಾಜಕೀಯ ಪಕ್ಷಗಳು ತಮ್ಮದೊಂದು ಪ್ರಣಾಳಿಕೆಯನ್ನು ಬಿಡುಗಡೆ ಮಾಡುವುದನ್ನ ನಾವು ನೋಡಿಯೇ ಇದ್ದೇವೆ. ಕಳೆದ ಶತಮಾನಕ್ಕೆ ಹೋಲಿಸಿದರೆ, ಈ ಶತಮಾನದ ಚುನಾವಣೆಗಳಲ್ಲಿ ಇದೊಂದು ಧನಾತ್ಮಕ ಬೆಳವಣಿಗೆ. ಮೊದಲು ಬರೀ ಆಶ್ವಾಸನೆಗಳು ಬಾಯಿಮಾತಿನಲ್ಲಿರುತ್ತಿದ್ದವು. ಪ್ರಜೆಗಳು ಬುದ್ಧಿವಂತರಾದಂತೆಲ್ಲಾ ನಿಧಾನಕ್ಕೆ ಈ ಆಶ್ವಾಸನೆಗಳು ಅಕ್ಷರರೂಪಕ್ಕಿಳಿದು, ಪ್ರಣಾಳಿಕೆಯ ರೂಪ ಪಡೆದುಕೊಂಡವು. ಆದರೆ ಚುನಾವಣೆಗೆ ಮುನ್ನ ಆಶ್ವಾಸನೆಗಳ Read more…


ಸಾವನ್ನು ಎದುರಿಸುವುದು ಸುಲಭವಲ್ಲ. ನಮಗೆ ಸಾವನ್ನು ಎದುರಿಸುವುದು ಎಂದಕ್ಷಣ ಸೈನಿಕನ ನೆನಪಾಗುತ್ತದೆ. ಸೈನ್ಯಕ್ಕೆ ಸೇರುವವರೆಲ್ಲರೂ ಯುದ್ಧಕ್ಕೆ ಹೋಗದಿರಬಹುದು, ಯುದ್ಧಕ್ಕೆ ಹೋದವರೆಲ್ಲರೂ ಸಾಯದಿರಬಹುದು. ಆದರೆ ಸೈನ್ಯದಲ್ಲಿ ಇದ್ದಮೇಲೆ ಸಾವು ಎನ್ನುವುದು ಅನೂಹ್ಯವೇ. ಯಾವತ್ತು ಎಲ್ಲಿಂದ ಹೇಗೆ ಬರಬಹುದೆಂಬುದನ್ನು ಯಾರು ಹೇಳಲು ಸಾಧ್ಯ ಹೇಳಿ. ಯುದ್ಧಕಾಲದಲ್ಲಿ ಮಾತ್ರವಲ್ಲ, ಪ್ರವಾಹ, ವಿಕೋಪ, ಧಂಗೆ ಅಲ್ಲದೇ ಶಾಂತಿಕಾಲದಲ್ಲೂ ಸೈನ್ಯದ ಬಳಕೆಯಾಗುವುದರಿಂದ, ಅವೂ Read more…