Tuesday, 27 February, 2024

ಪುರುಷಸೂಕ್ತ – 2

Share post

ಒಂದೊಳ್ಳೆ ಫಾರ್ಮಲ್ ಶೂ ಯಾವಾಗ್ಲೂ ನಿಮ್ಮ ಕಲೆಕ್ಷನ್ನಿನಲ್ಲಿ ಇರ್ಲಿ.

 

ನೀವು ಸಾಫ್ಟ್ವೇರ್ ಎಂಜಿನಿಯರ್ರೋ, ಸೇಲ್ಸ್ ಮ್ಯಾನೋ, ಡ್ರೈವರ್ರೋ, ಪೈಂಟರ್ರೋ ಏನೇ ಆಗಿರಿ. ಅದು ಬೇರೆ. ಆದ್ರೆ ಒಂದು ಶೂ ಇರ್ಲಿ. ಬಾಟಾ ತಗೋತೀರೋ, ಹಶ್ ಪಪ್ಪೀಸ್ ತಗೋತೀರೋ ಅಥ್ವಾ ಸಾಲ್ವಟೋರೆ ಫೆರ್ರಗಾಮೋ ತಗೋತೀರೋ ಅದು ನಿಮ್ಮ ಹಣೆಬರಹ. ಆದರೆ ಯಾವಾಗ್ಲೂ ವಾರ್ಡ್ರೋಬಲ್ಲಿ ಕನಿಷ್ಟ ಒಂದು ಫಾರ್ಮಲ್ ಶೂ ಇರ್ಲಿ.

 

“ಯಾವ್ಯಾವ ಡ್ರೆಸ್ಸಿನಲ್ಲಿ ನಾನು ಜಾನ್ ಅಬ್ರಾಹಂ ತರಾ ಕಾಣ್ತೀನಿ ಅಂತಾ ನಂಗೊತ್ತು” ಅನ್ನುವಷ್ಟು ಕಾನ್ಫಿಡೆಂಟ್ ನೀವಲ್ಲ ಅಂತಾದ್ರೆ, ಕಪ್ಪು ಶೂ ತಗೊಳ್ಳೋದು ಬೆಟರ್ರು. ರಿಸ್ಕು ಕಮ್ಮಿ.

 

ಬರೀ ಕೊಳ್ಳೋದಷ್ಟೇ ಅಲ್ಲ. ಅದರ ಹೊಳಪು ಹಾಗೂ ವಾಸನೆ ಎರಡೂ ಚೆನ್ನಾಗಿರುವಂತೆ ನೊಡ್ಕೊಳ್ಳಿ. Nothing turns off people (women in particular), like a worn off or stinky shoes

0 comments on “ಪುರುಷಸೂಕ್ತ – 2

Leave a Reply

Your email address will not be published. Required fields are marked *