Friday, 19 April, 2024

Tag: ಪುರುಷಸೂಕ್ತ


“ನೀವು ಬರೀ ನೂರು ರೂಪಾಯಿ ಕಳ್ಕೊಂಡಿದ್ದಕ್ಕೇ ಮೈಯೆಲ್ಲಾ ಉರ್ಕೊಳ್ಳೋರು ಅಂತಾದ್ರೆ, ಜೂಜಾಡೋಕೆ ಹೋಗಬೇಡಿ. ಅದು ನಿಮ್ಮಂತವರಿಗಲ್ಲ.”   ನಿಮ್ಮ ಸಾಮರ್ಥ್ಯಗಳ ಅರಿವಿರುವಷ್ಟೇ, ದೌರ್ಬಲ್ಯಗಳ ಅರಿವೂ ಇರಲಿ. ದೌರ್ಬಲ್ಯಗಳೇನೂ ಕೆಟ್ಟವಲ್ಲ. ಆದರೆ ದೌರ್ಬಲ್ಯಗಳನ್ನು ಕಂಡುಕೊಳ್ಳದೇ ಇರೋದು, ಅವನ್ನು ಒಪ್ಪಿಕೊಳ್ಳದೇ ಇರೋದು, ಅವುಗಳನ್ನು ಮೀರಲು ಪ್ರಯತ್ನಿಸದೇ ಇರೋದು ನಿಮ್ಮ ಬೆಳವಣಿಗೆಗೆ ಮಾರಕ.


“ಒಂದುಸಲಕ್ಕೆ ಒಬ್ಬಳು ಗರ್ಲ್ಫ್ರೆಂಡು ಇದ್ರೆ, ಬಹುಷಃ ಬೇಕಾದಷ್ಟಾಯ್ತು. ಇನ್ನೊಬ್ಬಳು ಬೇಕು ಅಂತಾದ್ರೆ ಈಗಿರುವವಳಿಂದಾ ಶಾಸ್ತ್ರೋಕ್ತವಾಗಿ* ದೂರವಾಗೋದನ್ನ ಅಭ್ಯಾಸ ಮಾಡ್ಕೊಳ್ಳಿ.” *ಶಾಸ್ತ್ರೋಕ್ತವಾಗಿ ಅಂದ್ರೆ, ಶತ್ರುವಿನಾಶ ಹೋಮ ಮಾಡಿಸಿ ಅಂತಲ್ಲ. ಸಂಬಂಧಗಳನ್ನ ಕ್ರಿಯೇಟ್ ಮಾಡೋಕೆ ಎಷ್ಟು ಸಮಯ/ಪರಿಶ್ರಮ ಇನ್ವೆಸ್ಟ್ ಮಾಡಿದ್ರೋ, ಅವುಗಳಿಂದಾ ದೂರವಾಗಬೇಕಾದ್ರೂ ಅಷ್ಟೇ ಸಮಯ/ಪರಿಶ್ರಮ ಹಾಕಿ. ಅದಕ್ಕೊಂದು ಸರಿಯಾದ ಕೊನೆ ಕಾಣಿಸಿ. “ನಾವ್ಯಾಕೆ ಸರಿಹೊಂದ್ತಾ ಇಲ್ಲ” ಅನ್ನೋದನ್ನ Read more…


ಹಿಂದಿನ (ಪುರುಷಸೂಕ್ತ – 3) ಪೋಸ್ಟಿಗೆ ಪೂರಕವಾಗಿ:   ಕುಡಿಯೋದು. ಕುಡಿದಾದ್ಮೇಲೆ ಹೆಂಗೆ ಮ್ಯಾನೇಜ್ ಮಾಡ್ಕೊಳ್ಳೋದು ಅಂತಾ ಕಲ್ತಿದ್ರೆ ಒಳ್ಳೇದು ಕುಡಿಯೋದೇ ಕಲಿತಿಲ್ಲ ಅಂತಾದ್ರೆ ಇನ್ನೂ ಒಳ್ಳೇದು . . . ಯಾಕಂದ್ರೆ ಕುಡಿತ ಕಲಿಯೋದು ತಾಕತ್ತು*. ಕುಡಿಯದೆಯೂ ಬದುಕಬಲ್ಲೆ ಅಂತಾ ರಿಯಲೈಸ್ ಮಾಡ್ಕೊಳ್ಳೋದು, ಟ್ಯಾಲೆಂಟು. ಜೊತೆಗೇ ಡಬಲ್ ತಾಕತ್ತು.   *ತಾಕತ್ತು ಅಂತಾ ಯಾಕೆ Read more…


“ಎರಡು ಪೆಗ್ ಹಾಕಿದ್ಮೇಲೆ, ಇವ್ನು ಸಕ್ಕತ್ ತಮಾಷೆ ಪಾರ್ಟಿ ಮಗಾ. ಒಳ್ಳೇ ಮಜಾ ಕೊಡ್ತಾನೆ” ಅಂತಾ ನಿಮ್ಮ ಸ್ನೇಹಿತರು ನಿಮ್ಮಬಗ್ಗೆ ಹೇಳುತ್ತಿದ್ದಾರೆ ಅಂತಾದ್ರೆ, ನಿಮ್ಮನ್ನು ನೀವು ಬದಲಾಯಿಸಿಕೊಳ್ಳುವ ಕಾಲ ಹತ್ತಿರದಲ್ಲಿದೆ ಎಂದರ್ಥ.   ನೀವೆಷ್ಟು ಕುಡಿಯುವ ಕೆಪಾಸಿಟಿ ಇರೋರು ಅನ್ನೋದು ಹೆಮ್ಮೆಯ ವಿಷಯವಲ್ಲ. ಅದೆಷ್ಟೋ ಕುಡಿದಮೇಲೂ ಎಷ್ಟು ಸ್ಥಿರವಾಗಿ ವರ್ತಿಸುತ್ತೀರಿ (especially ಹೆಂಗಸರೊಟ್ಟಿಗೆ) ಅನ್ನೋದು ಹೆಮ್ಮೆಯ Read more…


ಒಂದೊಳ್ಳೆ ಫಾರ್ಮಲ್ ಶೂ ಯಾವಾಗ್ಲೂ ನಿಮ್ಮ ಕಲೆಕ್ಷನ್ನಿನಲ್ಲಿ ಇರ್ಲಿ.   ನೀವು ಸಾಫ್ಟ್ವೇರ್ ಎಂಜಿನಿಯರ್ರೋ, ಸೇಲ್ಸ್ ಮ್ಯಾನೋ, ಡ್ರೈವರ್ರೋ, ಪೈಂಟರ್ರೋ ಏನೇ ಆಗಿರಿ. ಅದು ಬೇರೆ. ಆದ್ರೆ ಒಂದು ಶೂ ಇರ್ಲಿ. ಬಾಟಾ ತಗೋತೀರೋ, ಹಶ್ ಪಪ್ಪೀಸ್ ತಗೋತೀರೋ ಅಥ್ವಾ ಸಾಲ್ವಟೋರೆ ಫೆರ್ರಗಾಮೋ ತಗೋತೀರೋ ಅದು ನಿಮ್ಮ ಹಣೆಬರಹ. ಆದರೆ ಯಾವಾಗ್ಲೂ ವಾರ್ಡ್ರೋಬಲ್ಲಿ ಕನಿಷ್ಟ ಒಂದು Read more…


ಜೀವನದಲ್ಲಿ ಎಲ್ಲರೂ ಎಲ್ಲಾ ತಪ್ಪುಗಳನ್ನೂ ಮಾಡಿಕಲಿಯೋಕಾಗಲ್ಲ. ಬೇರೆಯವರ ತಪ್ಪಿಂದಲೂ ಕಲಿಯಬೇಕು. ಹಾಗೆಯೇ ಬೇರೆಯವರ ಯಶಸ್ಸಿನಿಂದಲೂ ಸಹ. ಈ ಅಭ್ಯಾಸ ನಿಮ್ಮ ಸಮಯ ಉಳಿಸುತ್ತೆ. ಅದಕ್ಕೇ ನಾನು ಇದುವರೆಗೂ ಮಾಡಿದ ತಪ್ಪುಗಳನ್ನು (ಹಾಗೂ ಕೆಲವೇ ಕೆಲ ಸಕ್ಸಸ್ಸುಗಳಿಂದ) ಲಿಸ್ಟ್ ಮಾಡಿ ಅದರಿಂದ ನಾನು ಕಲಿತ ಪಾಠಗಳನ್ನು ಕೆಲವೇ ಕೆಲವು ಸಾಲುಗಳಲ್ಲಿ ತಿಳಿಸುವ ಪ್ರಯತ್ನ. ಕೆಲವು ಸಾಲುಗಳು witty Read more…