Friday, 19 April, 2024

ಪುರುಷಸೂಕ್ತ – 1

Share post

ಜೀವನದಲ್ಲಿ ಎಲ್ಲರೂ ಎಲ್ಲಾ ತಪ್ಪುಗಳನ್ನೂ ಮಾಡಿಕಲಿಯೋಕಾಗಲ್ಲ. ಬೇರೆಯವರ ತಪ್ಪಿಂದಲೂ ಕಲಿಯಬೇಕು. ಹಾಗೆಯೇ ಬೇರೆಯವರ ಯಶಸ್ಸಿನಿಂದಲೂ ಸಹ. ಈ ಅಭ್ಯಾಸ ನಿಮ್ಮ ಸಮಯ ಉಳಿಸುತ್ತೆ. ಅದಕ್ಕೇ ನಾನು ಇದುವರೆಗೂ ಮಾಡಿದ ತಪ್ಪುಗಳನ್ನು (ಹಾಗೂ ಕೆಲವೇ ಕೆಲ ಸಕ್ಸಸ್ಸುಗಳಿಂದ) ಲಿಸ್ಟ್ ಮಾಡಿ ಅದರಿಂದ ನಾನು ಕಲಿತ ಪಾಠಗಳನ್ನು ಕೆಲವೇ ಕೆಲವು ಸಾಲುಗಳಲ್ಲಿ ತಿಳಿಸುವ ಪ್ರಯತ್ನ. ಕೆಲವು ಸಾಲುಗಳು witty ಹಾಗೂ ಪ್ರಾಕ್ಟಿಕಲ್ ಆಗಿರೋದ್ರಿಂದ ಇಲ್ಲಿರೋ ಎಲ್ಲವೂ ಎಲ್ಲರಿಗೂ ಅಪ್ಲೈ ಆಗಲ್ಲ. ಎಲ್ಲರಿಗೂ ಇಷ್ಟವೂ ಆಗಲ್ಲ ಅಂತಾ ಗೊತ್ತು. ಅಗತ್ಯವಿದ್ದದ್ದನ್ನು, ಇಷ್ಟವಾದದ್ದನ್ನು ಸ್ವೀಕರಿಸಿ.

 

ಬೇಡವಾದದ್ದು……ಕೃಷ್ಣಾರ್ಪಣ.

 

ಹಾಗಂತ ಇದು ಫಿಲಾಸಫಿ ಕ್ಲಾಸಲ್ಲ. ಒಳಹರಿವಿನಲ್ಲಿ ಫಿಲಾಸಫಿ ಇದ್ದರೂ ಬಿಡಿಸಿ ಹೇಳೋಕೆ ಹೋಗಲ್ಲ. ಅದೆಲ್ಲಾ ಓದುಗರಿಗೆ ಬಿಟ್ಟದ್ದು. ಈ male ಎಂಬ ಜೆಂಡರಿನಲ್ಲಿ ಮಕ್ಕಳು, ಹುಡುಗರು, ಅಂಕಲ್ಲುಗಳು, ಪುರುಷರು ಹೀಗೇ ಬೇಕಾದಷ್ಟು ವರ್ಗಗಳಿವೆ. ಈ ಸರಣಿ ಆ Boys ಅನ್ನು Men ಆಗುವಂತೆ ಮಾಡುವ ಪ್ರಯತ್ನ. ಒಬ್ಬ ಪರಿಪೂರ್ಣ ಅಥವಾ ಆದರ್ಶಪ್ರಾಯ ಪುರುಷನಲ್ಲಿ ಜನರು ಬಯಸುವ ಗುಣಗಳ ಪಟ್ಟಿ ಅಂತಲೂ ಹೇಳಬಹುದು. ಅದಕ್ಕೇ ಇದರ ಹೆಸರು “ಪುರುಷಸೂಕ್ತ” 😊

 

ಇದು ಹೆಚ್ಚಾಗಿ ಹುಡುಗರಿಗೇ ಅಪ್ಲೈ ಆಗುವಂತದ್ದು. ಆದ್ರೂ ಹುಡುಗಿಯರು ಓದಿದ್ರೆ ವೇಸ್ಟೇನೂ ಆಗಲ್ಲ.

.

.

.

.

ಪುರುಷಸೂಕ್ತ – 1

ನಿಮಗೆ ಹೆಚ್ಚು ಮೈ ಬೆವರುವ ಸಮಸ್ಯೆಯಿದ್ದರೆ, ಬನೀನು ಹಾಕೋದು ಅಭ್ಯಾಸ ಮಾಡಿಕೊಳ್ಳಿ.

ಹಾಗೆಯೇ ದಿನಕ್ಕೆ (ಬೆಳಿಗ್ಗೆ ಎದ್ದಾಗ, ರಾತ್ರಿ ಮಲಗುವ ಮುನ್ನದ್ದೂ ಸೇರಿ) ಮೂರು ಬಾರಿಯಾದರೂ ಮುಖ ತೊಳೆಯುವ ಅಭ್ಯಾಸವಿರಲಿ.

0 comments on “ಪುರುಷಸೂಕ್ತ – 1

Leave a Reply

Your email address will not be published. Required fields are marked *