Saturday, 20 April, 2024

ಪುರುಷಸೂಕ್ತ – 3

Share post

“ಎರಡು ಪೆಗ್ ಹಾಕಿದ್ಮೇಲೆ, ಇವ್ನು ಸಕ್ಕತ್ ತಮಾಷೆ ಪಾರ್ಟಿ ಮಗಾ. ಒಳ್ಳೇ ಮಜಾ ಕೊಡ್ತಾನೆ” ಅಂತಾ ನಿಮ್ಮ ಸ್ನೇಹಿತರು ನಿಮ್ಮಬಗ್ಗೆ ಹೇಳುತ್ತಿದ್ದಾರೆ ಅಂತಾದ್ರೆ, ನಿಮ್ಮನ್ನು ನೀವು ಬದಲಾಯಿಸಿಕೊಳ್ಳುವ ಕಾಲ ಹತ್ತಿರದಲ್ಲಿದೆ ಎಂದರ್ಥ.

 

ನೀವೆಷ್ಟು ಕುಡಿಯುವ ಕೆಪಾಸಿಟಿ ಇರೋರು ಅನ್ನೋದು ಹೆಮ್ಮೆಯ ವಿಷಯವಲ್ಲ. ಅದೆಷ್ಟೋ ಕುಡಿದಮೇಲೂ ಎಷ್ಟು ಸ್ಥಿರವಾಗಿ ವರ್ತಿಸುತ್ತೀರಿ (especially ಹೆಂಗಸರೊಟ್ಟಿಗೆ) ಅನ್ನೋದು ಹೆಮ್ಮೆಯ ವಿಷಯ. ನಾಲಿಗೆ ತೊದಲದಂತೆ, ನಿಮ್ಮ ಕಣ್ಣು ನಿಮ್ಮ ಎದುರಿಗಿರುವವರ ಮುಖದಿಂದ ಕೆಳಗೆ ಜಾರದಂತೆ ನೋಡಿಕೊಳ್ಳುವುದು ಹೆಮ್ಮೆಯ ವಿಷಯ.

 

Trust me on this, ಕುಡಿದಮೇಲೆ ನೀವು ಫನ್ನಿ ಆಗುವುದರಿಂದ ನಿಮ್ಮ ಸುತ್ತಲಿನ ಜನರೂ ಬೇಸತ್ತಿದ್ದಾರೆ. ಆವರು ಬೇಸತ್ತಿಲ್ಲ ಅಂತಾದ್ರೆ, ನೀವು ಅವರಿಂದ ಉಪಯೋಗಿಸಲ್ಪಡುತ್ತಿದ್ದೀರಿ ಎಂದರ್ಥ. ನಿಮ್ಮನ್ನು ತಮಾಷೆಗಾಗಿ ಉಪಯೋಗಿಸಿಕೊಳ್ಳುತ್ತಿರುವ ಆ ಸರ್ಕಲ್ಲಿನಲ್ಲಿ ನೀವಿರಬೇಕೋ ಬೇಡವೋ ಎಂಬುದರ ಆಯ್ಕೆಯನ್ನ ನೀವು ನಿಮ್ಮ ಜೀವನದಲ್ಲಿ ಬೇಗ ಮಾಡಿದಷ್ಟೂ ಒಳ್ಳೆಯದು.

0 comments on “ಪುರುಷಸೂಕ್ತ – 3

Leave a Reply

Your email address will not be published. Required fields are marked *