
ಕೆಲವೊಮ್ಮೆ ನಮ್ಮ ಪ್ರಯತ್ನಗಳು, ರೆಕ್ಕೆಪುಕ್ಕ ಕಟ್ಟಿಕೊಂಡು ಬೇರೆಯದೇ ರೂಪದಲ್ಲಿ ಆಕಾಶದೆತ್ತರಕ್ಕೆ ಹಾರುವುದನ್ನು ಕಂಡಾಗ ಖುಷಿಯಾಗುವುದುಂಟು. ನನ್ನ ಬರಹವೊಂದಕ್ಕೆ ಮೈಸೂರಿನ ಶ್ರೀ ಪಾಂಡುರಂಗ ವಿಠಲರು ಚಂದದ ಧ್ವನಿರೂಪಕೊಟ್ಟು ತಮ್ಮ ಸಮುದಾಯ ರೇಡಿಯೋದಲ್ಲಿ ಪ್ರಸಾರ ಮಾಡಿದ್ದಾರೆ. ಅದರದ್ದೊಂದು ಪ್ರತಿಯನ್ನು ಕಳಿಸಿಯೂ ಕೊಟ್ಟಿದ್ದಾರೆ.
ಮೂಲಬರಹ ಇಲ್ಲಿದೆ:
ಅವರ ಪ್ರಯತ್ನಕ್ಕೆ ಧನ್ಯವಾದ ಮಾತ್ರವಲ್ಲ, ಮೈಸೂರಿನ ಸುತ್ತಮುತ್ತಲಿನ ಹಳ್ಳಿಗಳಿಗೆ ಜ್ಞಾನಪ್ರಸಾರ ಮಾಡುತ್ತಿರುವ ಅವರ ಕೆಲಸಕ್ಕೆ ಒಂದು ನಮಸ್ಕಾರವನ್ನೂ ತಿಳಿಸಲೇ ಬೇಕು.