Tuesday, 27 February, 2024

ಪುರುಷಸೂಕ್ತ – 4

Share post

“ಒಂದುಸಲಕ್ಕೆ ಒಬ್ಬಳು ಗರ್ಲ್ಫ್ರೆಂಡು ಇದ್ರೆ, ಬಹುಷಃ ಬೇಕಾದಷ್ಟಾಯ್ತು. ಇನ್ನೊಬ್ಬಳು ಬೇಕು ಅಂತಾದ್ರೆ ಈಗಿರುವವಳಿಂದಾ ಶಾಸ್ತ್ರೋಕ್ತವಾಗಿ* ದೂರವಾಗೋದನ್ನ ಅಭ್ಯಾಸ ಮಾಡ್ಕೊಳ್ಳಿ.”

*ಶಾಸ್ತ್ರೋಕ್ತವಾಗಿ ಅಂದ್ರೆ, ಶತ್ರುವಿನಾಶ ಹೋಮ ಮಾಡಿಸಿ ಅಂತಲ್ಲ. ಸಂಬಂಧಗಳನ್ನ ಕ್ರಿಯೇಟ್ ಮಾಡೋಕೆ ಎಷ್ಟು ಸಮಯ/ಪರಿಶ್ರಮ ಇನ್ವೆಸ್ಟ್ ಮಾಡಿದ್ರೋ, ಅವುಗಳಿಂದಾ ದೂರವಾಗಬೇಕಾದ್ರೂ ಅಷ್ಟೇ ಸಮಯ/ಪರಿಶ್ರಮ ಹಾಕಿ. ಅದಕ್ಕೊಂದು ಸರಿಯಾದ ಕೊನೆ ಕಾಣಿಸಿ. “ನಾವ್ಯಾಕೆ ಸರಿಹೊಂದ್ತಾ ಇಲ್ಲ” ಅನ್ನೋದನ್ನ ಹೇಳಿ ಮುಂದೆಹೋಗಿ. ಹೇಳದೇ ಮುಂದೋಗೋದು ನೀವು ಆ ಹುಡುಗಿ ಮಾಡಿದ ಅವಮಾನ. ಸಿಟ್ಟು ಬಂದಿರೋ ಹುಡುಗಿಯನ್ನ ಹೆಂಗಾದ್ರೂ ಸುಧಾರಿಸಬಹುದು. ಅವಮಾನಕ್ಕೊಳಗಾಗಿರೋ ಹೆಣ್ಣು ನಾಗರಹಾವಿದ್ದಂಗೆ. ಹಾವಿನ ದ್ವೇಷ…..ಗೊತ್ತಲ್ಲ.

ಮನೆ ಕಾಂಪೌಂಡಲ್ಲಿ ಬೋರ್ವೆಲ್ ಕೊರೆಸಿ, ಅದರಲ್ಲಿ ನೀರು ಸಿಗಲಿಲ್ಲವೆಂದು ಹಂಗೇ ಓಪನ್ನಾಗಿ ಬಿಟ್ಟರೆ ಸ್ವಲ್ಪ ಸಮಯದ ನಂತರ ನೀವೇ ಬೀಳೋ ಚಾನ್ಸು ಜಾಸ್ತಿ. ನೀವು ಬಿದ್ರೂ ಪರವಾಗಿಲ್ಲ, ನಿಮ್ ಮಕ್ಳೇನಾದ್ರೂ ಬಿದ್ರೆ 😮 !

0 comments on “ಪುರುಷಸೂಕ್ತ – 4

Leave a Reply

Your email address will not be published. Required fields are marked *