Friday, 29 March, 2024

Meeting Jeremy Bentham @UCL

Share post

ಆಕ್ಸ್ಫರ್ಡ್ ಮತ್ತು ಕೇಂಬ್ರಿಡ್ಜ್ಗಳಲ್ಲಿ ಚರ್ಚ್ ಪ್ರೇರಿತ ಮತ್ತು ಚರ್ಚ್ ಪ್ರಣೀತ ವಿದ್ಯಾಭ್ಯಾಸಗಳಷ್ಟೇ ನಡೆಯುತ್ತಿದ್ದಾಗ, “ವಿದ್ಯೆಯೆನ್ನುವುದು ಎಲ್ಲ ರೀತಿಯ ನಿರ್ದೇಶನ ಹಾಗೂ ಪ್ರಾಯೋಜನಗಳಿಂದ ಮುಕ್ತವಾಗಿರಬೇಕು” ಎಂಬ ಕನಸು ಕಂಡು, 1826ರಲ್ಲಿ ಯೂನಿವರ್ಸಿಟಿ ಕಾಲೇಜ್ ಆಫ್ ಲಂಡನ್ (UCL)ನ ಸ್ಥಾಪನೆಗೆ ಬುನಾದಿ ಹಾಕಿದ ಶ್ರೀ ಜೆರಿಮಿ ಬೆಂಥಮ್ ಅವರನ್ನು ಮಾತನಾಡಿಸಿಕೊಂಡು ಬರಲಾಯ್ತು. ಶ್ರೀಯುತರು ಹೆಚ್ಚು ಮಾತನಾಡಲಿಲ್ಲವಾದ್ದರಿಂದ ನಾವೇ ಮಾತನಾಡಿ ಬಂದೆವು.

ತನ್ನ ಮರಣಾನಂತರ, ತನ್ನ ದೇಹವನ್ನು ಡೈಸೆಕ್ಷನ್ ಮೂಲಕ ವಿದ್ಯಾರ್ಜನೆಗೆ ಬಳಸಿಕೊಂಡು, ನಂತರ ಮಮ್ಮಿಫೈ ಮಾಡಿ, auto-icon (ಸ್ವ-ಪ್ರತಿಮೆ) ಆಗಿಸಿಡಬೇಕು ಎಂಬ ಆತನ ಆಸೆಯಂತೆ, ಈ ಮಮ್ಮಿಫೈಡ್ ದೇಹಕ್ಕೆ ವ್ಯಾಕ್ಸಿನ ತಲೆ ಜೋಡಿಸಿ ವಿದ್ಯಾಲಯದಲ್ಲಿ ಸ್ಥಾಪಿಸಿ ಇಡಲಾಗಿದೆ.

ಹದಿನೆಂಟನೇ ಶತಮಾನಕಂಡ ಶ್ರೇಷ್ಠ ಉಪಯುಕ್ತತಾವಾದಿ (champion of utilitarianism) ಜೆರೆಮಿ ಬೆಂಥಮ್. ಶಿಕ್ಷಣವನ್ನು ರಿಲೀಜಿಯನ್ ಹಿಡಿತದಿಂದ ಹೊರತಂದ ತತ್ವಶಾಸ್ತ್ರಜ್ಞ ಹಾಗೂ ಶಿಕ್ಷಣತಜ್ಞ ಕೂಡಾ. ಅಭಿವ್ಯಕ್ತಿ ಸ್ವಾತಂತ್ರ್ಯ, ಮುಕ್ತ ಆರ್ಥಿಕತೆ, ಕಲ್ಯಾಣವಾದ (welfarism), ಚರ್ಚ್ ಮತ್ತು ಸ್ಟೇಟ್’ನ ಬೇರ್ಪಡಿಸುವಿಕೆಗಳಿಗೆ ಅಗಾಧ ಕೊಡುಗೆ ನೀಡಿದ, ಇಂದಿನ ಸಮಾಜದ ಹಲವಾರು ಮಜಲುಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಾಂದಿಹಾಡಿದ ವ್ಯಕ್ತಿ .

ಕಾಲೇಜಿನೊಳಕ್ಕೆ ಕರೆದುಕೊಂಡು ಹೋಗಿ, ಕೆಲಕಾಲ ನನ್ನನ್ನೂ ಕಾಲೇಜು ಹುಡುಗನನ್ನಾಗಿಸಿದ ಡಾಕ್ಟರ್ ಲತಾ ಅವರಿಗೂ ಧನ್ಯವಾದ!

0 comments on “Meeting Jeremy Bentham @UCL

Leave a Reply

Your email address will not be published. Required fields are marked *