ಇದನ್ನ ಬೇರೆಯವರು ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. “ಚಟ್ಣಿ ಈಗ ಯಾರು ಮಾಡ್ತಾರೆ 😤” ಅಂತಾ ನನಗನಿಸಿದಾಗ ಮಾಡುವ ಸುಲಭದ ಸೈಡ್ ಡಿಷ್ ಇದು.
(ಇನ್ನೂ ಸುಲಭದ್ದು ಮೊಸರು + ಜೇನುತುಪ್ಪ, ಮೊಸರು + ಚಟ್ಣಿಪುಡಿ, ತುಪ್ಪ + ಚಟ್ಣಿಪುಡಿ, ಚಟ್ಣಿಪುಡಿ, ಜೋನಿಬೆಲ್ಲ, ಉಪ್ಪಿನಕಾಯಿ ಇವೆಲ್ಲಾ ಇದೆ ಅಂತಾ ಗೊತ್ತು. ಸೋ….✋🏽)
ಮನೆಯಲ್ಲಿ ಗಳಿತ ಬಾಳೆಹಣ್ಣು ಉಳಿದಿದ್ರೆ, ಇನ್ನೇನು ಕಪ್ಪಾಗೋಗಕೆ ಶುರುವಾಗಿದೆ ಅಂದ್ರೆ, ಅದಕ್ಕೊಂದು ಗತಿ ಕಾಣಿಸೋಕೂ ಒಳ್ಳೆ ದಾರಿ ಇದು.
ಪ್ಯಾನಿಗೆ ಎರಡುಚಮಚ ತುಪ್ಪ ಬಿಟ್ಟು, ಕತ್ತರಿಸಿದ ಬಾಳೆಹಣ್ಣು, ಚಿಟಿಕೆ ಸಕ್ಕರೆ, ಚಿಟಿಕೆ ಉಪ್ಪು, ಎರಡು ಚಿಟಿಕೆ ಹುಡಿ ಕಾಳುಮೆಣಸು, ಮೂರು ಗುದ್ದಿದ ಏಲಕ್ಕಿ….ಬೇಕಾದರೆ ಸ್ವಲ್ಪ ಕಾಯಿತುರಿ ಹಾಕಿ ಒಂದೇ ಒಂದು ನಿಮಿಷ ಹುರಿದರಾಯ್ತು.

ದೋಸೆಗೆ ಮಜೇದಾರ್ ಜೋಡಿ ತಯಾರ್. ನಾಳೆಬೆಳಿಗ್ಗೆ ಟ್ರೈ ಮಾಡಿ.