Friday, 24 March, 2023

Tag: ರಾಘವಾಂಕಣ


ಅವ ರುಕ್ಮಿಣಿಗೂ ಕೃಷ್ಣನಾದ. ರಾಧೆಗೂ ಕೃಷ್ಣನಾದ. ರುಕ್ಮಿಣಿಯನ್ನು, ಅವಳ ಬಯಕೆಗಳನ್ನೂ, ರುಕ್ಮಿಣಿಯೊಂದಿಗಿನ ಕೃಷ್ಣನನ್ನು ಹೋಗೋ ಅರ್ಥೈಸಿಕೊಂಡುಬಿಡಬಹುದು. ಯಾಕೆಂದರೆ ನಾವೆಲ್ಲರೂ ರುಕ್ಮಿಣಿಯ ಕೃಷ್ಣರೇ. ಆದರೆ ರಾಧಾಕೃಷ್ಣನನ್ನು ಅರ್ಥೈಸಿಕೊಳ್ಳುವಾಗ ಹೆಚ್ಚಿನ ಹಿಡಿತಬೇಕು, ಜಗತ್ತು ಅರ್ಥವಾಗಬೇಕು, ಸಂಬಂಧಗಳು ಮನಸ್ಸನ್ನು ತಾಕಬೇಕು. ಇಲ್ಲವಾದಲ್ಲಿ ಕೈಲಾಗದತನವನ್ನೋ, ಲಂಪಟತನವನ್ನೋ ಸಮರ್ಥಿಸಿಕೊಂಡಂತಾಗುತ್ತದೆ.   ಕೃಷ್ಣ ಎಂದರೆ ಏನೋ ಸೆಳೆತ, ಸಂಭ್ರಮ, ಗದ್ದಲ, ಸಂತೋಷ, ಆತ್ಮೀಯತೆ, ನಮ್ಮವನೆಂಬ Read more…


ಯುದ್ಧಕಾಲದಲ್ಲಿ ಪ್ರದರ್ಶಿಸಿದ ಅಪ್ರತಿಮ ಸಾಹಸ, ಶೌರ್ಯ ಮತ್ತು ತ್ಯಾಗಕ್ಕಾಗಿ, ಭಾರತೀಯ ಸೈನ್ಯ ತನ್ನ ಸೈನಿಕರಿಗೆ ನೀಡುವ ದೇಶದ ಅತ್ಯುನ್ನತ ಯುದ್ಧಕಾಲದ ಶೌರ್ಯ ಪ್ರಶಸ್ತಿಯಾದ “ಪರಮ ವೀರ ಚಕ್ರ”ಕ್ಕೆ ಸ್ಪೂರ್ತಿ ಹಿಂದೂ ಮಹರ್ಷಿ ದಧೀಚಿ. 1.375 ಇಂಚಿನ ವ್ಯಾಸದ ಈ ಶೌರ್ಯಭೂಷಣದ ಮೇಲೆ ರಾಷ್ಟ್ರೀಯಲಾಂಛನದ ಸುತ್ತ ಇರುವ ಕಾಣುವ ನಾಲ್ಕು ಚಿಹ್ನೆಗಳು ಬೇರೇನೂ ಅಲ್ಲ, ದೇವರಾಜ ಇಂದ್ರನ Read more…


“ನೀವು ಬರೀ ನೂರು ರೂಪಾಯಿ ಕಳ್ಕೊಂಡಿದ್ದಕ್ಕೇ ಮೈಯೆಲ್ಲಾ ಉರ್ಕೊಳ್ಳೋರು ಅಂತಾದ್ರೆ, ಜೂಜಾಡೋಕೆ ಹೋಗಬೇಡಿ. ಅದು ನಿಮ್ಮಂತವರಿಗಲ್ಲ.”   ನಿಮ್ಮ ಸಾಮರ್ಥ್ಯಗಳ ಅರಿವಿರುವಷ್ಟೇ, ದೌರ್ಬಲ್ಯಗಳ ಅರಿವೂ ಇರಲಿ. ದೌರ್ಬಲ್ಯಗಳೇನೂ ಕೆಟ್ಟವಲ್ಲ. ಆದರೆ ದೌರ್ಬಲ್ಯಗಳನ್ನು ಕಂಡುಕೊಳ್ಳದೇ ಇರೋದು, ಅವನ್ನು ಒಪ್ಪಿಕೊಳ್ಳದೇ ಇರೋದು, ಅವುಗಳನ್ನು ಮೀರಲು ಪ್ರಯತ್ನಿಸದೇ ಇರೋದು ನಿಮ್ಮ ಬೆಳವಣಿಗೆಗೆ ಮಾರಕ.


“ಒಂದುಸಲಕ್ಕೆ ಒಬ್ಬಳು ಗರ್ಲ್ಫ್ರೆಂಡು ಇದ್ರೆ, ಬಹುಷಃ ಬೇಕಾದಷ್ಟಾಯ್ತು. ಇನ್ನೊಬ್ಬಳು ಬೇಕು ಅಂತಾದ್ರೆ ಈಗಿರುವವಳಿಂದಾ ಶಾಸ್ತ್ರೋಕ್ತವಾಗಿ* ದೂರವಾಗೋದನ್ನ ಅಭ್ಯಾಸ ಮಾಡ್ಕೊಳ್ಳಿ.” *ಶಾಸ್ತ್ರೋಕ್ತವಾಗಿ ಅಂದ್ರೆ, ಶತ್ರುವಿನಾಶ ಹೋಮ ಮಾಡಿಸಿ ಅಂತಲ್ಲ. ಸಂಬಂಧಗಳನ್ನ ಕ್ರಿಯೇಟ್ ಮಾಡೋಕೆ ಎಷ್ಟು ಸಮಯ/ಪರಿಶ್ರಮ ಇನ್ವೆಸ್ಟ್ ಮಾಡಿದ್ರೋ, ಅವುಗಳಿಂದಾ ದೂರವಾಗಬೇಕಾದ್ರೂ ಅಷ್ಟೇ ಸಮಯ/ಪರಿಶ್ರಮ ಹಾಕಿ. ಅದಕ್ಕೊಂದು ಸರಿಯಾದ ಕೊನೆ ಕಾಣಿಸಿ. “ನಾವ್ಯಾಕೆ ಸರಿಹೊಂದ್ತಾ ಇಲ್ಲ” ಅನ್ನೋದನ್ನ Read more…


ಹಿಂದಿನ (ಪುರುಷಸೂಕ್ತ – 3) ಪೋಸ್ಟಿಗೆ ಪೂರಕವಾಗಿ:   ಕುಡಿಯೋದು. ಕುಡಿದಾದ್ಮೇಲೆ ಹೆಂಗೆ ಮ್ಯಾನೇಜ್ ಮಾಡ್ಕೊಳ್ಳೋದು ಅಂತಾ ಕಲ್ತಿದ್ರೆ ಒಳ್ಳೇದು ಕುಡಿಯೋದೇ ಕಲಿತಿಲ್ಲ ಅಂತಾದ್ರೆ ಇನ್ನೂ ಒಳ್ಳೇದು . . . ಯಾಕಂದ್ರೆ ಕುಡಿತ ಕಲಿಯೋದು ತಾಕತ್ತು*. ಕುಡಿಯದೆಯೂ ಬದುಕಬಲ್ಲೆ ಅಂತಾ ರಿಯಲೈಸ್ ಮಾಡ್ಕೊಳ್ಳೋದು, ಟ್ಯಾಲೆಂಟು. ಜೊತೆಗೇ ಡಬಲ್ ತಾಕತ್ತು.   *ತಾಕತ್ತು ಅಂತಾ ಯಾಕೆ Read more…


“ಎರಡು ಪೆಗ್ ಹಾಕಿದ್ಮೇಲೆ, ಇವ್ನು ಸಕ್ಕತ್ ತಮಾಷೆ ಪಾರ್ಟಿ ಮಗಾ. ಒಳ್ಳೇ ಮಜಾ ಕೊಡ್ತಾನೆ” ಅಂತಾ ನಿಮ್ಮ ಸ್ನೇಹಿತರು ನಿಮ್ಮಬಗ್ಗೆ ಹೇಳುತ್ತಿದ್ದಾರೆ ಅಂತಾದ್ರೆ, ನಿಮ್ಮನ್ನು ನೀವು ಬದಲಾಯಿಸಿಕೊಳ್ಳುವ ಕಾಲ ಹತ್ತಿರದಲ್ಲಿದೆ ಎಂದರ್ಥ.   ನೀವೆಷ್ಟು ಕುಡಿಯುವ ಕೆಪಾಸಿಟಿ ಇರೋರು ಅನ್ನೋದು ಹೆಮ್ಮೆಯ ವಿಷಯವಲ್ಲ. ಅದೆಷ್ಟೋ ಕುಡಿದಮೇಲೂ ಎಷ್ಟು ಸ್ಥಿರವಾಗಿ ವರ್ತಿಸುತ್ತೀರಿ (especially ಹೆಂಗಸರೊಟ್ಟಿಗೆ) ಅನ್ನೋದು ಹೆಮ್ಮೆಯ Read more…


ಒಂದೊಳ್ಳೆ ಫಾರ್ಮಲ್ ಶೂ ಯಾವಾಗ್ಲೂ ನಿಮ್ಮ ಕಲೆಕ್ಷನ್ನಿನಲ್ಲಿ ಇರ್ಲಿ.   ನೀವು ಸಾಫ್ಟ್ವೇರ್ ಎಂಜಿನಿಯರ್ರೋ, ಸೇಲ್ಸ್ ಮ್ಯಾನೋ, ಡ್ರೈವರ್ರೋ, ಪೈಂಟರ್ರೋ ಏನೇ ಆಗಿರಿ. ಅದು ಬೇರೆ. ಆದ್ರೆ ಒಂದು ಶೂ ಇರ್ಲಿ. ಬಾಟಾ ತಗೋತೀರೋ, ಹಶ್ ಪಪ್ಪೀಸ್ ತಗೋತೀರೋ ಅಥ್ವಾ ಸಾಲ್ವಟೋರೆ ಫೆರ್ರಗಾಮೋ ತಗೋತೀರೋ ಅದು ನಿಮ್ಮ ಹಣೆಬರಹ. ಆದರೆ ಯಾವಾಗ್ಲೂ ವಾರ್ಡ್ರೋಬಲ್ಲಿ ಕನಿಷ್ಟ ಒಂದು Read more…


ಜೀವನದಲ್ಲಿ ಎಲ್ಲರೂ ಎಲ್ಲಾ ತಪ್ಪುಗಳನ್ನೂ ಮಾಡಿಕಲಿಯೋಕಾಗಲ್ಲ. ಬೇರೆಯವರ ತಪ್ಪಿಂದಲೂ ಕಲಿಯಬೇಕು. ಹಾಗೆಯೇ ಬೇರೆಯವರ ಯಶಸ್ಸಿನಿಂದಲೂ ಸಹ. ಈ ಅಭ್ಯಾಸ ನಿಮ್ಮ ಸಮಯ ಉಳಿಸುತ್ತೆ. ಅದಕ್ಕೇ ನಾನು ಇದುವರೆಗೂ ಮಾಡಿದ ತಪ್ಪುಗಳನ್ನು (ಹಾಗೂ ಕೆಲವೇ ಕೆಲ ಸಕ್ಸಸ್ಸುಗಳಿಂದ) ಲಿಸ್ಟ್ ಮಾಡಿ ಅದರಿಂದ ನಾನು ಕಲಿತ ಪಾಠಗಳನ್ನು ಕೆಲವೇ ಕೆಲವು ಸಾಲುಗಳಲ್ಲಿ ತಿಳಿಸುವ ಪ್ರಯತ್ನ. ಕೆಲವು ಸಾಲುಗಳು witty Read more…


2010ರಲ್ಲಿ ನಾನು ನಮ್ಮ ಕಂಪನಿಯ ಏರೋಸ್ಪೇಸ್ ಟೀಮ್’ನಲ್ಲಿ HR ಆಗಿದ್ದೆ. ಎಪ್ಪತ್ತು ಜನರ ಸಣ್ಣ ಟೀಮು, ಆದ್ರೆ ರೋಲ್ಸ್-ರಾಯ್ಸ್ ಮತ್ತು ಏರ್ಬಸ್ಸಿಂದ ಬಹಳಾ ದೊಡ್ಡ ಸರ್ಟಿಫಿಕೇಷನ್ ಆರ್ಡರ್ ಸಿಕ್ಕಿತ್ತು. ಟೀಮ್ ಡಬಲ್ ಆಗುವ ಅಗತ್ಯವಿತ್ತು. ಹೊಸಾ ಗ್ರಾಜುಯೇಟುಗಳನ್ನ ಹೈರ್ ಮಾಡೋಕೆ ತಿರುಗಾಡ್ತಾ ಇದ್ವಿ. ಲೀಡ್ಸ್ ಯೂನಿವರ್ಸಿಟಿಯಲ್ಲಿದ್ವಿ. ನನ್ನ ಜೊತೆಯಲ್ಲಿದ್ದ ಏರೋಸ್ಪೇಸ್ ಚೀಫ್ ಎಂಜಿನಿಯರ್ ಆಂಡಿ ಮಹಾನ್ Read more…


ಒಂದು ವಿಷ್ಯ ಯೋಚನೆ ಮಾಡಿ.   ನಿಮಗೆ ನಿಮ್ಮ ಬಾಸ್ “ನಾಳೆ ಶುಕ್ರವಾರ ಬೆಳಿಗ್ಗೆ ಎಂಟಕ್ಕೆ, ಅಥವಾ ಒಂಬತ್ತಕ್ಕೆ ಆಫೀಸಲ್ಲಿ ಇರಬೇಕು, ಒಂದು ಕೆಲಸ ಇದೆ” ಅಂದ್ರೆ, ನೀವು ಆ ಟೈಮಿಗೆ ಕರೆಕ್ಟಾಗಿ ಅಲ್ಲಿ ಇರ್ತೀರಿ ಅಲ್ವಾ? ಹೋಗ್ಲಿ, ಇನ್ನೂ ಕರೋನಾಶಕೆ ಮುಗಿದಿಲ್ಲ, ಆಫೀಸಿಗೆ ಹೋಗಲಿಕ್ಕಿಲ್ಲ ಮನೆಯಿಂದಲೇ ಕೆಲ್ಸ ಅಂತೀರಾ. ನಿಮ್ಮ ಕ್ಲೈಂಟ್ “ನಾಳೆ ಮಧ್ಯಾಹ್ನ Read more…