Thursday, 07 December, 2023

Tag: ರಾಘವಾಂಕಣ


ತಂತ್ರಜ್ಞಾನ ಚಂದ. ಆದರೆ ಎಷ್ಟೋ ಜನ ತಂತ್ರಜ್ಞಾನದ ಅತ್ಯುತ್ಕೃಷ್ಟ ಉಪಯೋಗವೆಂದರೆ ಬರೀ ರಾಕೆಟ್ಟುಗಳ ಉಡಾವಣೆ, ಸೂಪರ್ ಕಂಪ್ಯೂಟರ್ ನಿರ್ಮಿಸುವುದು ಎಂದು ಭಾವಿಸುವುದುಂಟು. ಅದು ತಪ್ಪೇನಲ್ಲ. ಆದರೆ ನನ್ನ ಪ್ರಕಾರ ಅತ್ಯುತ್ಕೃಷ್ಟ ತಂತ್ರಜ್ಞಾನವೆಂದರೆ, ಯಾವುದು ಜನರ ಬದುಕನ್ನು ಹಸನು ಮಾಡಬಲ್ಲುದೋ ಅದು. ಅದು ರಾಕೆಟ್ಟಿನಿಂದ ಹಾರಿಸಲ್ಪಟ್ಟ ಉಪಗ್ರಹವೊಂದು ನೂರು ಕಿಲೋಮೀಟರ್ ಎತ್ತರದಿಂದ ನನ್ನ ಗ್ರಾಮದ, ಜಿಲ್ಲೆಯ ಚಿತ್ರ ತೆಗೆದು ಎಲ್ಲಿ ನದಿಯನೀರನ್ನು Read more…


ಇವತ್ತಿನ ಜಗತ್ತಿನಲ್ಲಿ ಕಳ್ಳರಿಗೇನೂ ಕಮ್ಮಿಯಿಲ್ಲ. ಹಣ, ಒಡವೆ, ವಾಹನ, ಸ್ಥಿರಾಸ್ತಿ ಮಾತ್ರವೇ ಕಳ್ಳತನಕ್ಕೆ ಒಳಗಾಗುವ ವಸ್ತುಗಳು ಎಂದುಕೊಂದಿದ್ದ ನಮಗೆ, ಕಳೆದೊಂದು ಶತಮಾನದಿಂದ ದೇಹದ ಮತ್ತದರ ಭಾಗಗಳನ್ನೂ ಕದಿಯಬಹುದೆಂದು ತಿಳಿದುಬಂತು. ಕಳೆದೊಂದು ದಶಕದಿಂದ ಮಾಹಿತಿಯನ್ನು ಕದಿಯುವುದು ಅತ್ಯಂತ ಲಾಭದಾಯಕ ಕಳ್ಳತನವೆಂದು ತಿಳಿದುಬಂದಿದೆ. ಒಟ್ಟಿನಲ್ಲಿ ಕಳೆದುಕೊಳ್ಳುವವರು, ಕೊಳ್ಳುವವರು ಇರುವ ತನಕ ಕಳ್ಳತನ ಅವ್ಯಾಹತವಾಗಿ ಸಾಗಲಿದೆ.   ಫೇಸ್ಬುಕ್ಕಲ್ಲಿ ನನ್ನ ಪೋಸ್ಟ್ ಇನ್ಯಾರೋ ತಮ್ಮ ಹೆಸರಲ್ಲಿ ಹಾಕಿಕೊಂಡಿದ್ದಾರೆ Read more…


ಮಧ್ಯಮಗಾತ್ರದ ಅಥವಾ ದೊಡ್ಡನಗರದಲ್ಲಿ ವಾಸಿಸುವವರು ನೀವಾದರೆ ವೀಕೆಂಡುಗಳಲ್ಲಿ ನಿಮಗೆ ಎರಡು ತರದ ಜನ ಸಿಕ್ತಾರೆ. ಒಂದು ಗುಂಪು ಬೆಳಿಗ್ಗೆದ್ದು ಸೈಕ್ಲಿಂಗು, ರನ್ನಿಂಗು, ಅಥವಾ ಬೈಕ್ ಕ್ಲಬ್ ಜೊತೆ ಲಾಂಗ್ ರೈಡು, ಯಾವುದಾದರೂ ಹಿಲ್-ಸ್ಟೇಷನ್ನಿಗೆ ಓಟ, ಆಮೇಲೆ ಏನೋ ಒಂದು ಹೊಸಾವಿದ್ಯೆಯ ಕ್ಲಾಸು, ಬಾಲ್ಕನಿಯೋ ಟೆರೇಸಲ್ಲೋ ಇರೋ ಗಾರ್ಡನ್ನು ನೋಡ್ಕೊಳ್ಳೋದು ಇತ್ಯಾದಿ ಕೆಲಸಗಳನ್ನು ಹಮ್ಮಿಕೊಳ್ಳೋರು. ಇನ್ನೊಂದು ಗುಂಪು, Read more…


ಚುನಾವಣೆಗಳು ಮುಗಿದು, ಪಲಿತಾಂಶ ಪ್ರಕಟವಾಗಿ ಮೂರುವಾರ ಕಳೆದಿದೆ. ಮೂರೂ ಪ್ರಮುಖ ಪಕ್ಷಗಳು ತಮ್ಮ ನೈಸರ್ಗಿಕ ಗುಣಗಳನ್ನು ಮತ್ತೆ ರಾಜ್ಯದ ಜನರ ಮುಂದೆ ಖುಲ್ಲಂಖುಲ್ಲಾ ಪ್ರದರ್ಶನಕ್ಕಿಟ್ಟಿವೆ. ಚುನಾವಣೆ ಮುಗಿದಕೂಡಲೇ “ಸಧ್ಯಕ್ಕೆ ತಮ್ಮ ಕೆಲಸ ಮುಗಿದಿದೆ, ಇನ್ನು ಐದು ವರ್ಷ ನಮಗೇನೂ ಕೆಲಸವಿಲ್ಲ” ಎನ್ನುತ್ತಾ ಜೆಡಿಎಸ್ ಪುನಃ ನಿದ್ರೆಗೆ ಜಾರಿದೆ. ಬಹುಷಃ ಕುಮಾರಸ್ವಾಮಿಯವರು 2028ರ ಜನವರಿಯಲ್ಲಿ ಮತ್ತೊಂದಷ್ಟು ಹೊಸಹೊಸರೀತಿಯ Read more…


ಭಾರತವೊಂದು ವೈವಿಧ್ಯತೆಯ ಸಾಗರ. “Unity in diversity”, “ಭಾರತವೊಂದು ದೇಶವಲ್ಲ-ಬದಲಿಗೆ ಒಂದುಉಪಖಂಡ” ಮುಂತಾದ ಸಾಲುಗಳನ್ನ ನಾವು ಕೇಳುತ್ತಲೇ ಇರುತ್ತೇವೆ. ಚಿಕ್ಕವರಿದ್ದಾಗಲಿಂದ ಪ್ರತಿಪಠ್ಯಪುಸ್ತಕದಲ್ಲೂ ಅದನ್ನೇ ನಮಗೆ ಹೇಳಿಕೊಡಲಾಗುತ್ತದೆ. ಬೆಳೆಯುತ್ತಾ ಪ್ರತಿಯೊಂದು ಪಾಠ, ಕಾರ್ಯಕ್ರಮ, ಲೇಖನಗಳಲ್ಲೇ ಅದನ್ನೇ ತಲೆಗೆ ತುಂಬಿ, ಅದರ ಮೂಲಕ ಸೌಹಾರ್ದತೆಯ ಪಾಠಗಳನ್ನು ಕಲಿಸಲಾಗುತ್ತದೆ. ಆದರೆ ಇಂದಿಗೂ ಎಷ್ಟೋ ಜನರಿಗೆ ಅಸಮಾನತೆ ಮತ್ತು ವೈವಿಧ್ಯತೆ/ವಿಭಿನ್ನತೆಗಳ ನಡುವಿನ Read more…


ಸಮಾಜ ಮತ್ತು ದೇಶವೊಂದು ಮುಂದುವರೆಯಬೇಕಾದರೆ ಕೇವಲ ನಾಯಕ, ಸರ್ಕಾರಗಳು ಮಾತ್ರ ಆದರ್ಶರೀತಿಯಲ್ಲಿದ್ದರೆ ಸಾಲದು. ಅವು ಯಾರಿಗಾಗಿ ರಚಿಸಲ್ಪಟ್ಟಿವೆಯೋ ಆ ಪ್ರಜೆಗಳೂ ಅವರೂ ಆದರ್ಶಗುಣಗಳನ್ನು ಹೊಂದಿರಬೇಕು. ಆದರ್ಶ ನಾಯಕನಿಗೆ ಹೇಗೆ ಗುಣಲಕ್ಷಣಗಳಿವೆಯೋ, ಆದರ್ಶ ಪ್ರಜೆಗೂ ಹಾಗೆಯೇ ಕೆಲ ಗುಣಲಕ್ಷಣಗಳಿವೆ. ಮತ್ತೀ ಗುಣಲಕ್ಷಣಗಳು ಶತಮಾನಗಳ ಕಾಲದಿಂದ, ಹತ್ತಾರು ನಾಗರೀಕತೆಗಳು ಕಲಿತ ಪಾಠದ ಮೂಲಕ ವಿಕಸನಗೊಳ್ಳುತ್ತಾ ಗಟ್ಟಿಯಾಗಿ ರೂಪುಗೊಂಡಿವೆ. ಒಬ್ಬ Read more…


ಚುನಾವಣೆಗಳು ಹೊಸ್ತಿಲಲ್ಲಿವೆ. ಪ್ರತಿ ಚುನಾವಣೆ ಬಂದಾಗಲೂ ರಾಜಕೀಯ ಪಕ್ಷಗಳು ತಮ್ಮದೊಂದು ಪ್ರಣಾಳಿಕೆಯನ್ನು ಬಿಡುಗಡೆ ಮಾಡುವುದನ್ನ ನಾವು ನೋಡಿಯೇ ಇದ್ದೇವೆ. ಕಳೆದ ಶತಮಾನಕ್ಕೆ ಹೋಲಿಸಿದರೆ, ಈ ಶತಮಾನದ ಚುನಾವಣೆಗಳಲ್ಲಿ ಇದೊಂದು ಧನಾತ್ಮಕ ಬೆಳವಣಿಗೆ. ಮೊದಲು ಬರೀ ಆಶ್ವಾಸನೆಗಳು ಬಾಯಿಮಾತಿನಲ್ಲಿರುತ್ತಿದ್ದವು. ಪ್ರಜೆಗಳು ಬುದ್ಧಿವಂತರಾದಂತೆಲ್ಲಾ ನಿಧಾನಕ್ಕೆ ಈ ಆಶ್ವಾಸನೆಗಳು ಅಕ್ಷರರೂಪಕ್ಕಿಳಿದು, ಪ್ರಣಾಳಿಕೆಯ ರೂಪ ಪಡೆದುಕೊಂಡವು. ಆದರೆ ಚುನಾವಣೆಗೆ ಮುನ್ನ ಆಶ್ವಾಸನೆಗಳ Read more…


ಅವ ರುಕ್ಮಿಣಿಗೂ ಕೃಷ್ಣನಾದ. ರಾಧೆಗೂ ಕೃಷ್ಣನಾದ. ರುಕ್ಮಿಣಿಯನ್ನು, ಅವಳ ಬಯಕೆಗಳನ್ನೂ, ರುಕ್ಮಿಣಿಯೊಂದಿಗಿನ ಕೃಷ್ಣನನ್ನು ಹೋಗೋ ಅರ್ಥೈಸಿಕೊಂಡುಬಿಡಬಹುದು. ಯಾಕೆಂದರೆ ನಾವೆಲ್ಲರೂ ರುಕ್ಮಿಣಿಯ ಕೃಷ್ಣರೇ. ಆದರೆ ರಾಧಾಕೃಷ್ಣನನ್ನು ಅರ್ಥೈಸಿಕೊಳ್ಳುವಾಗ ಹೆಚ್ಚಿನ ಹಿಡಿತಬೇಕು, ಜಗತ್ತು ಅರ್ಥವಾಗಬೇಕು, ಸಂಬಂಧಗಳು ಮನಸ್ಸನ್ನು ತಾಕಬೇಕು. ಇಲ್ಲವಾದಲ್ಲಿ ಕೈಲಾಗದತನವನ್ನೋ, ಲಂಪಟತನವನ್ನೋ ಸಮರ್ಥಿಸಿಕೊಂಡಂತಾಗುತ್ತದೆ.   ಕೃಷ್ಣ ಎಂದರೆ ಏನೋ ಸೆಳೆತ, ಸಂಭ್ರಮ, ಗದ್ದಲ, ಸಂತೋಷ, ಆತ್ಮೀಯತೆ, ನಮ್ಮವನೆಂಬ Read more…


ಯುದ್ಧಕಾಲದಲ್ಲಿ ಪ್ರದರ್ಶಿಸಿದ ಅಪ್ರತಿಮ ಸಾಹಸ, ಶೌರ್ಯ ಮತ್ತು ತ್ಯಾಗಕ್ಕಾಗಿ, ಭಾರತೀಯ ಸೈನ್ಯ ತನ್ನ ಸೈನಿಕರಿಗೆ ನೀಡುವ ದೇಶದ ಅತ್ಯುನ್ನತ ಯುದ್ಧಕಾಲದ ಶೌರ್ಯ ಪ್ರಶಸ್ತಿಯಾದ “ಪರಮ ವೀರ ಚಕ್ರ”ಕ್ಕೆ ಸ್ಪೂರ್ತಿ ಹಿಂದೂ ಮಹರ್ಷಿ ದಧೀಚಿ. 1.375 ಇಂಚಿನ ವ್ಯಾಸದ ಈ ಶೌರ್ಯಭೂಷಣದ ಮೇಲೆ ರಾಷ್ಟ್ರೀಯಲಾಂಛನದ ಸುತ್ತ ಇರುವ ಕಾಣುವ ನಾಲ್ಕು ಚಿಹ್ನೆಗಳು ಬೇರೇನೂ ಅಲ್ಲ, ದೇವರಾಜ ಇಂದ್ರನ Read more…


“ನೀವು ಬರೀ ನೂರು ರೂಪಾಯಿ ಕಳ್ಕೊಂಡಿದ್ದಕ್ಕೇ ಮೈಯೆಲ್ಲಾ ಉರ್ಕೊಳ್ಳೋರು ಅಂತಾದ್ರೆ, ಜೂಜಾಡೋಕೆ ಹೋಗಬೇಡಿ. ಅದು ನಿಮ್ಮಂತವರಿಗಲ್ಲ.”   ನಿಮ್ಮ ಸಾಮರ್ಥ್ಯಗಳ ಅರಿವಿರುವಷ್ಟೇ, ದೌರ್ಬಲ್ಯಗಳ ಅರಿವೂ ಇರಲಿ. ದೌರ್ಬಲ್ಯಗಳೇನೂ ಕೆಟ್ಟವಲ್ಲ. ಆದರೆ ದೌರ್ಬಲ್ಯಗಳನ್ನು ಕಂಡುಕೊಳ್ಳದೇ ಇರೋದು, ಅವನ್ನು ಒಪ್ಪಿಕೊಳ್ಳದೇ ಇರೋದು, ಅವುಗಳನ್ನು ಮೀರಲು ಪ್ರಯತ್ನಿಸದೇ ಇರೋದು ನಿಮ್ಮ ಬೆಳವಣಿಗೆಗೆ ಮಾರಕ.