Saturday, 06 August, 2022

Category: ಸರಸ್ವತಿ

ಅಂಕಣ ಬರಹ


2010ರಲ್ಲಿ ನಾನು ನಮ್ಮ ಕಂಪನಿಯ ಏರೋಸ್ಪೇಸ್ ಟೀಮ್’ನಲ್ಲಿ HR ಆಗಿದ್ದೆ. ಎಪ್ಪತ್ತು ಜನರ ಸಣ್ಣ ಟೀಮು, ಆದ್ರೆ ರೋಲ್ಸ್-ರಾಯ್ಸ್ ಮತ್ತು ಏರ್ಬಸ್ಸಿಂದ ಬಹಳಾ ದೊಡ್ಡ ಸರ್ಟಿಫಿಕೇಷನ್ ಆರ್ಡರ್ ಸಿಕ್ಕಿತ್ತು. ಟೀಮ್ ಡಬಲ್ ಆಗುವ ಅಗತ್ಯವಿತ್ತು. ಹೊಸಾ ಗ್ರಾಜುಯೇಟುಗಳನ್ನ ಹೈರ್ ಮಾಡೋಕೆ ತಿರುಗಾಡ್ತಾ ಇದ್ವಿ. ಲೀಡ್ಸ್ ಯೂನಿವರ್ಸಿಟಿಯಲ್ಲಿದ್ವಿ. ನನ್ನ ಜೊತೆಯಲ್ಲಿದ್ದ ಏರೋಸ್ಪೇಸ್ ಚೀಫ್ ಎಂಜಿನಿಯರ್ ಆಂಡಿ ಮಹಾನ್ Read more…


ಒಂದು ವಿಷ್ಯ ಯೋಚನೆ ಮಾಡಿ.   ನಿಮಗೆ ನಿಮ್ಮ ಬಾಸ್ “ನಾಳೆ ಶುಕ್ರವಾರ ಬೆಳಿಗ್ಗೆ ಎಂಟಕ್ಕೆ, ಅಥವಾ ಒಂಬತ್ತಕ್ಕೆ ಆಫೀಸಲ್ಲಿ ಇರಬೇಕು, ಒಂದು ಕೆಲಸ ಇದೆ” ಅಂದ್ರೆ, ನೀವು ಆ ಟೈಮಿಗೆ ಕರೆಕ್ಟಾಗಿ ಅಲ್ಲಿ ಇರ್ತೀರಿ ಅಲ್ವಾ? ಹೋಗ್ಲಿ, ಇನ್ನೂ ಕರೋನಾಶಕೆ ಮುಗಿದಿಲ್ಲ, ಆಫೀಸಿಗೆ ಹೋಗಲಿಕ್ಕಿಲ್ಲ ಮನೆಯಿಂದಲೇ ಕೆಲ್ಸ ಅಂತೀರಾ. ನಿಮ್ಮ ಕ್ಲೈಂಟ್ “ನಾಳೆ ಮಧ್ಯಾಹ್ನ Read more…


ಭಾರತದಲ್ಲಿ ದಲಿತರ ಶೋಷಣೆ ನಡೆದಂತೆಯೇ ಅಮೇರಿಕಾದಲ್ಲಿ ಬಿಳಿಯರಲ್ಲದವರೆಲ್ಲರ ಮೇಲೂ ಶೋಷಣೆ ನಡೆದಿತ್ತು. ಈಗಲೂ ನಡೆಯುತ್ತಿದೆ ಕೂಡಾ. ಮೊದಲಿನಂತೆ ಅಲ್ಲ, ಆದರೆ ಶೋಷಣೆ ಬೇರೆ ಬೇರೆಯ ಸ್ವರೂಪಗಳನ್ನು ಪಡೆದು ಈಗಲೂ ನಡೆಯುತ್ತಿದೆ. ಕೆಲಸಕ್ಕೆ ಅರ್ಜಿ ಹಾಕಿದರೆ ಪ್ರತಿಭೆ ಎಷ್ಟೇ ಇದ್ದರೂ ಚರ್ಮದ ಬಣ್ಣ, ಇಂಗ್ಳಿಷಿನ ಉಚ್ಛಾರ, ಯಾವ ಕಾಲೇಜಿನಿಂದ ಓದಿದ್ದು ಮುಂತಾದವನ್ನು ನೋಡಿ ಕೆಲ ಅರ್ಜಿಗಳನ್ನು ತಿರಸ್ಕರಿಸುವುದುಂಟು. Read more…


ಸಾವನ್ನು ಎದುರಿಸುವುದು ಸುಲಭವಲ್ಲ. ನಮಗೆ ಸಾವನ್ನು ಎದುರಿಸುವುದು ಎಂದಕ್ಷಣ ಸೈನಿಕನ ನೆನಪಾಗುತ್ತದೆ. ಸೈನ್ಯಕ್ಕೆ ಸೇರುವವರೆಲ್ಲರೂ ಯುದ್ಧಕ್ಕೆ ಹೋಗದಿರಬಹುದು, ಯುದ್ಧಕ್ಕೆ ಹೋದವರೆಲ್ಲರೂ ಸಾಯದಿರಬಹುದು. ಆದರೆ ಸೈನ್ಯದಲ್ಲಿ ಇದ್ದಮೇಲೆ ಸಾವು ಎನ್ನುವುದು ಅನೂಹ್ಯವೇ. ಯಾವತ್ತು ಎಲ್ಲಿಂದ ಹೇಗೆ ಬರಬಹುದೆಂಬುದನ್ನು ಯಾರು ಹೇಳಲು ಸಾಧ್ಯ ಹೇಳಿ. ಯುದ್ಧಕಾಲದಲ್ಲಿ ಮಾತ್ರವಲ್ಲ, ಪ್ರವಾಹ, ವಿಕೋಪ, ಧಂಗೆ ಅಲ್ಲದೇ ಶಾಂತಿಕಾಲದಲ್ಲೂ ಸೈನ್ಯದ ಬಳಕೆಯಾಗುವುದರಿಂದ, ಅವೂ Read more…


ಸೈನ್ಯ ಎಂಬುದೊಂದು ದೇಶದ ಹೆಮ್ಮೆ. ನಾವಿರುವ ಜಗತ್ತು ದೇಶವೊಂದರ ಶಕ್ತಿಯನ್ನು ಅದರ ಸೈನ್ಯದ ಗಾತ್ರ, ಶಸ್ತ್ರಗಳು, ಸೈನ್ಯದ ಶಿಸ್ತು, ಯುದ್ಧಗಳಲ್ಲಿ ಅದು ತೋರಿದ ಚಾಕಚಕ್ಯತೆ ಅಥವಾ ಸಾಹಸದ ಮೇಲೆ ಅಳೆಯುತ್ತದೆ. ಭಾರತೀಯ ಸೈನ್ಯ ಜಗತ್ತಿನ ಅತೀದೊಡ್ಡ ಸ್ವಯಂಪ್ರೇರಿತ ಸೈನ್ಯ. ಅಂದರೆ ದೇಶದಲ್ಲಿ ಯಾವ ರೀತಿಯ ಕಡ್ಡಾಯ ಸೇನಾಸೇವೆಯ ಸಾಂವಿಧಾನಿಕ ಅಗತ್ಯತೆ ಇಲ್ಲದೆಯೂ ಸಹ ತಾವಾಗಿಯೇ ಸ್ವ-ಇಚ್ಚೆಯಿಂದ Read more…


ನಮ್ಮಲ್ಲಿ ಹೆಚ್ಚಿನವರು ಕಾರ್ಪೊರೇಟ್ ಅಥವಾ ಖಾಸಗೀ ಕಂಪನಿಗಳ ಹೆಸರು ಕೇಳಿದ ಕೂಡಲೇ ಅದೇನೋ ಹಾವು ತುಳಿದವರಂತೆ ಆಡುವುದುಂಟು. ಕಾರ್ಪೊರೇಟುಗಳೆಂದರೆ ಬಡವರ ರಕ್ತಹೀರುವವರು, ತಮ್ಮ ಲಾಭವನ್ನಷ್ಟೇ ನೋಡಿಕೊಳ್ಳುವವರು, ಅಬಲರನ್ನು ತುಳಿಯುವವರು, ಕಾನೂನನ್ನು ತಮ್ಮ ಜೇಬಿನಲ್ಲಿಟ್ಟುಕೊಂಡು ಸರ್ಕಾರವನ್ನು ತಮ್ಮದಾಗಿಸಿಕೊಂಡು ತಮಗೆ ಬೇಕಾದದ್ದನ್ನೆಲ್ಲಾ ಮಾಡಿಕೊಳ್ಳುವವರು ಎಂಬ ನಂಬಿಕೆ ಇರುವವರೇ ಹೆಚ್ಚು. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಭೋಪಾಲ್’ನಲ್ಲಿ ಅನಿಲ ಸೋರಿಕೆ ಮಾಡಿ Read more…


ನಿಮಗೆ ಯಾರಾದರೂ ಜಗತ್ತಿನ ಅತ್ಯಂತ ಲಾಭದಾಯಕ ಉದ್ಯಮ ಯಾವುದು ಎಂದರೆ ನಿಮ್ಮ ಉತ್ತರ ಏನಿರಬಹುದು? ಬಿಡಿ, ಜಗತ್ತಿನ ಅತ್ಯಂತ ಲಾಭದಾಯಕ ಕಂಪನಿ ಯಾವುದು ಎಂದರೆ ನಿಮ್ಮ ಉತ್ತರ ಏನಿರಬಹುದು? ಇಲ್ಲೊಂದು ಕಂಪನಿಯಿದೆ ನೋಡಿ. ತನ್ನ 60ವರ್ಷದ ಇತಿಹಾಸದಲ್ಲಿ ಪ್ರತೀವರ್ಷವೂ ಸರಾಸರಿ 20%ನಷ್ಟು ಬೆಳವಣಿಗೆ ಆಗುತ್ತಿದೆ, PBT – Profit Before Taxes ಲಾಭ ಕಳೆದ ಐವತ್ತು Read more…


ಮಾತು ಬೆಳ್ಳಿ, ಮೌನ ಬಂಗಾರವೆಂಬ ನಾಣ್ಣುಡಿಯನ್ನು ನೀವು ಕೇಳಿರಬಹುದು. ಯಾವಾಗ ಎಲ್ಲಿ ಏನನ್ನು ಎಷ್ಟು ಮಾತನಾಡಬೇಕು ಎಂದು ತಿಳಿದಿರಬೇಕಾದದ್ದು ಅತೀ ಮುಖ್ಯ. ಆಡಿದ ಮಾತು ಕಾಳ್ಗಿಚ್ಚಿನಂತೆ ಹರಡುವ ಈ ದಿನಗಳಲ್ಲಂತೂ ಇದು ಇನ್ನೂ ಹೆಚ್ಚು ಮುಖ್ಯ. ಸುಳ್ಳನ್ನು, ತಮಗೆ ಬೇಕಾದ ಸತ್ಯಗಳನ್ನೂ, ಅರೆಬೆಂದ ಸತ್ಯಗಳನ್ನೂ ಬೇಕಾಬಿಟ್ಟಿ ಹರಡುವ ಜನರ ಸಂಖ್ಯೆ ಇತ್ತೀಚೆಗೆ ತೀರಾ ಹೆಚ್ಚಾಗಿದೆ. ಇದರ Read more…


ಮಾನವನ ಆಲೋಚನೆ, ಕ್ರಿಯೆ, ಜಗತ್ತಿನ ಗ್ರಹಿಕೆ ಎಲ್ಲವೂ ಸೀಮಿತವೆಂದು ನಮಗೆ ಗೊತ್ತು. ಈ ಜಗತ್ತನ್ನು ನಮ್ಮ ಸೀಮಿತಗ್ರಹಿಕೆಯೊಳಗೆ ಕಟ್ಟಿಡುವುದು ಅಸಾಧ್ಯ. ಬಿಗ್ ಬ್ಯಾಂಗ್ ಎಂದಾಗ ನಮ್ಮ ಮನಸ್ಸಿನಲ್ಲಿ ಮೂಡುವ ಆ ಸ್ಪೋಟ ಕೂಡಾ ನಾವು ನೋಡಿರಬಹುದಾದ ಅತೀ ದೊಡ್ಡ ಸ್ಪೋಟದ ಎರಡುಮೂರು ಪಟ್ಟಷ್ಟೇ ಆಗಿರುತ್ತದೆ. ಅಂಕೆ ಸಂಖ್ಯೆಗಳನ್ನೂ ಕೂಡಾ ನಾವು ಊಹಿಸಿಕೊಳ್ಳುವ ರೀತಿ ತೀರಾ ಮೂಲಾವಸ್ಥೆಯಲ್ಲಿ. Read more…


ರೈತರ ಪ್ರತಿಭಟನೆಗಳು ನಾಲ್ಕುತಿಂಗಳು ಮುಗಿಸಿ ಐದನೇ ತಿಂಗಳಿನೆಡೆಗೆ ಧಾವಿಸುತ್ತಿವೆ. ಮಾಧ್ಯಮದವರು ಯಥಾಪ್ರಕಾರ ಜಗತ್ತಿನ ಸರ್ವವಿದ್ಯಮಾನಗಳಿಗೆ ಬಳಸುವ ಬೆಲ್-ಕರ್ವ್ ಸುದ್ದಿಸಂಗ್ರಹಣಾ ವಿಧಾನ ಬಳಸಿ ಮೊದಮೊದಲಿಗೆ ಈ ಸುದ್ಧಿಯನ್ನು ತೀರಾ ನಿರ್ಲಕ್ಷಿಸಿ, ನಂತರದ ದಿನಗಳಲ್ಲಿ ನಿಧಾನಕ್ಕೆ ಹೆಚ್ಚೆಚ್ಚು ಕವರೇಜ್ ಕೊಟ್ಟು, ಒಂದು ಕಾಲದಲ್ಲಂತೂ ಭಾರತದಲ್ಲಿ ಸಧ್ಯಕ್ಕೆ ರೈತಪ್ರತಿಭಟನೆಯನ್ನು ಬಿಟ್ಟು ಬೇರೇನೂ ನಡೆಯುತ್ತಲೇ ಇಲ್ಲ ಎಂಬ ತಾರಕಕ್ಕೆ ತಲುಪಿ, ತಮ್ಮ Read more…