Saturday, 27 April, 2024

Category: ಸರಸ್ವತಿ

ಅಂಕಣ ಬರಹ


ಬೆಳಿಗ್ಗೆ ಇಂತಹದ್ದೊಂದು ಸುದ್ಧಿ ಓದಿದೆ. ಅದರಲ್ಲಿ ಹೇಗೆ ಇಮೇಲ್ ಹಾಗೂ ಅಟ್ಯಾಚ್ಮೆಂಟುಗಳು ಪರಿಸರಕ್ಕೆ ಹಾನಿ ಮಾಡುತ್ತಿವೆ ಅಂತಾ ಪತ್ರಿಕಾ ಲೇಖನವೊಂದಿತ್ತು. “ಪ್ರತಿಯೊಂದು ಈಮೇಲ್’ನಿಂದ 4ಗ್ರಾಂನಷ್ಟು ಕಾರ್ಬನ್ ಡೈ-ಆಕ್ಸೈಡ್ ವಾತಾವರಣಕ್ಕೆ ಸೇರುತ್ತದೆ. ಈಮೇಲ್ ಗಾತ್ರ ದೊಡ್ಡದಿದ್ದರೆ, ಅಥವಾ ದೊಡ್ಡ ಅಟ್ಯಾಚ್ಮೆಂಟುಗಳಿದ್ದರೆ ಇನ್ನೂ ಹೆಚ್ಚು ಇಂಗಾಲ ಪರಿಸರಕ್ಕೆ ಸೇರಿ ಮಾಲಿನ್ಯಕ್ಕೆ ಕಾರಣವಾಗುತ್ತದೆ” ಅಂತಾ ಅದರಲ್ಲಿ ಬರೆದಿದ್ದರು.   ಮೇಲ್ನೋಟಕ್ಕೆ Read more…


ಹಣವುಳಿಸುವ ಕಥೆಗಳಲ್ಲಿ ಇದು ಕೊನೆಯ ಕಂತು. ಕಳೆದ ವಾರದ ಎಳೆಯನ್ನೇ ಮುಂದುವರಿಸುತ್ತಾ ಉದ್ಯೋಗಿ ಸಂಬಂಧೀ ಖರ್ಚುಗಳನ್ನೇ ಬೇರೆ ಬೇರೆ ರೀತಿಯಲ್ಲಿ ಕಡಿಮೆ ಮಾಡುತ್ತಾ ಲಾಭಗಳಿಸಿದ ಕಂಪನಿಗಳ ಕೆಲ ಉದಾಹರಣೆಗಳನ್ನು ನೋಡೋಣ.   ಖರ್ಚು ಕಡಿಮೆ ಮಾಡೋದು ಎಂದ ಕೂಡಲೇ ನಮಗೆ, ಈ ಕ್ಷಣದ ಅಂದರೆ ಈ ತಿಂಗಳಲ್ಲಿ ಉದ್ಯೋಗಿಗಳ ಸಂಬಳದ ಖರ್ಚನ್ನು ಕಡಿಮೆಮಾಡುವುದು ಎಂಬ ಆಲೋಚನೆ ಬರುತ್ತದೆ. Read more…


ಕಳೆದೆರಡು ವಾರದಲ್ಲಿ ಹಣಉಳಿಸಲು ಕಂಪನಿಗಳು ಮಾಡಿದ ಕೆಲ ಜನಪ್ರಿಯ ಪ್ರಯತ್ನಗಳ ಉದಾಹರಣೆಗಳ ಬಗ್ಗೆ ಬರೆದಿದ್ದೆ. ಈ ಮತ್ತು ಮುಂದಿನ ಕಂತಿನಲ್ಲಿ, ಇದೇ ನಿಟ್ಟಿನಲ್ಲಿ ಅಂದರೆ ಕಂಪನಿಗೆ ಹಣವುಳಿಸುವ ಹಾದಿಯಲ್ಲಿ ಮಾಡಿದ ಒಂದು ನಿರ್ದಿಷ್ಟಹಂತದ ಪ್ರಯತ್ನಗಳ ಬಗ್ಗೆ ತಿಳಿಯೋಣ. ಇದು ವೈಯುಕ್ತಿಕವಾಗಿ ನನ್ನ ಕೆಲಸದ ಕ್ಷೇತ್ರವೂ ಹೌದಾದ್ದರಿಂದ, ಇದರ ಬಗ್ಗೆ ನನಗೆ ಹೆಚ್ಚೇ ಒಲವು ಹಾಗೂ ವಿವರಿಸಲು ನನಗೆ ಸಂತೋಷ ಕೂಡಾ. Read more…


ನನ್ನ ಹಿಂದಿನ ಅಂಕಣದಲ್ಲಿ, ಕಂಪನಿಗಳು ಲಾಭ ಹೆಚ್ಚಿಸುವ ಉದ್ದೇಶದಿಂದ ಜಾರಿಗೆ ತಂದ ಕೆಲವು ವಿಷಯಗಳ ಬಗ್ಗೆ ಬರೆದಿದ್ದೆ. ವ್ಯವಹಾರ ಲೋಕದಲ್ಲಿ ಇವನ್ನು ಜಿಪುಣತನ ಅನ್ನಲಿಕ್ಕಾಗುವುದಿಲ್ಲ. ಯಾಕೆಂದರೆ ಇವು ಬರೀ ಒಂದೆರಡು ಡಾಲರ್ ಉಳಿಸುವ ಉಪಾಯಗಳಲ್ಲ. ಬದಲಿಗೆ ಕೋಟ್ಯಾಂತರ ಡಾಲರ್ ಉಳಿಸುವ ನಿಟ್ಟಿನಲ್ಲಿ ನೆರವಾದ ಹೆಜ್ಜೆಗಳು. ಇವು ಯಾರೋ ಒಬ್ಬ ಸುಮ್ಮನೇ ಮಧ್ಯಾಹ್ನದೂಟಕ್ಕೆ ಕೂತಾಗ ಟೀಮಿಗೆ ಕೊಟ್ಟ ಸಲಹೆಗಳಲ್ಲ. ನೂರಾರುಘಂಟೆಗಳ Read more…


ನಿಮ್ಮ ಪ್ರಕಾರ ಕಂಪನಿಯೊಂದರ ಮೂಲ ಉದ್ದೇಶವೇನಿರಬಹುದು? ನೀವು ಕೆಲಸ ಮಾಡುವ ಕಂಪನಿಯಿರಬಹುದು, ಅಥವಾ ಮಾರುಕಟ್ಟೆಯಲ್ಲಿ ನೋಡುವ ಬೇರೆ ಕಂಪನಿಗಳಿರಬಹುದು. ಅದರ ಮೂಲ ಮತ್ತು ಅಂತಿಮ ಉದ್ದೇಶವೇನು? ಕಂಪನಿಗಳಿಗೆ ವಿಷನ್ ಮತ್ತು ಮಿಷನ್ ಸ್ಟೇಟ್ಮೆಂಟುಗಳಿರುತ್ತೆ ಅನ್ನೋದನ್ನ ನೀವು ಓದಿರ್ತೀರಿ. ಕೆಲಕಂಪನಿಗಳಿಗೆ ತಮ್ಮ ವಲಯದೊಳಗೆ ಜಗತ್ತಿನಲ್ಲೇ ಅತ್ಯುತ್ತಮ ಕಂಪನಿಯಾಗುವ ವಿಷನ್ ಸ್ಟೇಟ್ಮೆಂಟ್ ಇರುತ್ತೆ. ಇನ್ನು ಕೆಲಕಂಪನಿಗಳಿಗೆ ಜನರ ಜೀವನಮಟ್ಟವನ್ನು ಸುಧಾರಿಸೋದು, ಬೇರೆ ಕಂಪನಿಗಳಿಗೆ ಜಗತ್ತನ್ನು Read more…


“ಲಂಡನ್ ಬ್ರಿಡ್ಜ್ ಈಸ್ ಫಾಲಿಂಗ್ ಡೌನ್…ಫಾಲಿಂಗ್ ಡೌನ್” ಅನ್ನೋ ಶಿಶುಗೀತೆಯನ್ನ ನಾವೆಲ್ಲರೂ ಕೇಳಿದ್ದೀವಿ. ಈ ಹಾಡಿನ ವಿಭಿನ್ನ ಆವೃತ್ತಿಗಳನ್ನು ಪ್ರಪಂಚದಾದ್ಯಂತ ಕಾಣಬಹುದು (ಕೇಳಬಹುದು). ಮಕ್ಕಳು ಇದನ್ನು ಚಂದಾಗಿ ಪ್ರಾಸಬದ್ಧವಾಗಿ ಹಾಡುತ್ತಾರಷ್ಟೇ ಹೊರತು, ಯಾಕೆ ಲಂಡನ್ ಸೇತುವೆ ಬಿತ್ತು ಅಂತಾ ಕೇಳುವ ಸಾಧ್ಯತೆ ಕಡಿಮೆ. ಈ ಹಾಡು ಕೇಳುವುದಕ್ಕೆ ಚಂದವಾಗಿದ್ದರೂ, ಇದರ ಹಿಂದಿನ ಅರ್ಥ ಕರಾಳವಾದದ್ದೇ. ಈ Read more…


ತಂತ್ರಜ್ಞಾನ ಚಂದ. ಆದರೆ ಎಷ್ಟೋ ಜನ ತಂತ್ರಜ್ಞಾನದ ಅತ್ಯುತ್ಕೃಷ್ಟ ಉಪಯೋಗವೆಂದರೆ ಬರೀ ರಾಕೆಟ್ಟುಗಳ ಉಡಾವಣೆ, ಸೂಪರ್ ಕಂಪ್ಯೂಟರ್ ನಿರ್ಮಿಸುವುದು ಎಂದು ಭಾವಿಸುವುದುಂಟು. ಅದು ತಪ್ಪೇನಲ್ಲ. ಆದರೆ ನನ್ನ ಪ್ರಕಾರ ಅತ್ಯುತ್ಕೃಷ್ಟ ತಂತ್ರಜ್ಞಾನವೆಂದರೆ, ಯಾವುದು ಜನರ ಬದುಕನ್ನು ಹಸನು ಮಾಡಬಲ್ಲುದೋ ಅದು. ಅದು ರಾಕೆಟ್ಟಿನಿಂದ ಹಾರಿಸಲ್ಪಟ್ಟ ಉಪಗ್ರಹವೊಂದು ನೂರು ಕಿಲೋಮೀಟರ್ ಎತ್ತರದಿಂದ ನನ್ನ ಗ್ರಾಮದ, ಜಿಲ್ಲೆಯ ಚಿತ್ರ ತೆಗೆದು ಎಲ್ಲಿ ನದಿಯನೀರನ್ನು Read more…


ಇವತ್ತಿನ ಜಗತ್ತಿನಲ್ಲಿ ಕಳ್ಳರಿಗೇನೂ ಕಮ್ಮಿಯಿಲ್ಲ. ಹಣ, ಒಡವೆ, ವಾಹನ, ಸ್ಥಿರಾಸ್ತಿ ಮಾತ್ರವೇ ಕಳ್ಳತನಕ್ಕೆ ಒಳಗಾಗುವ ವಸ್ತುಗಳು ಎಂದುಕೊಂದಿದ್ದ ನಮಗೆ, ಕಳೆದೊಂದು ಶತಮಾನದಿಂದ ದೇಹದ ಮತ್ತದರ ಭಾಗಗಳನ್ನೂ ಕದಿಯಬಹುದೆಂದು ತಿಳಿದುಬಂತು. ಕಳೆದೊಂದು ದಶಕದಿಂದ ಮಾಹಿತಿಯನ್ನು ಕದಿಯುವುದು ಅತ್ಯಂತ ಲಾಭದಾಯಕ ಕಳ್ಳತನವೆಂದು ತಿಳಿದುಬಂದಿದೆ. ಒಟ್ಟಿನಲ್ಲಿ ಕಳೆದುಕೊಳ್ಳುವವರು, ಕೊಳ್ಳುವವರು ಇರುವ ತನಕ ಕಳ್ಳತನ ಅವ್ಯಾಹತವಾಗಿ ಸಾಗಲಿದೆ.   ಫೇಸ್ಬುಕ್ಕಲ್ಲಿ ನನ್ನ ಪೋಸ್ಟ್ ಇನ್ಯಾರೋ ತಮ್ಮ ಹೆಸರಲ್ಲಿ ಹಾಕಿಕೊಂಡಿದ್ದಾರೆ Read more…


ಮಧ್ಯಮಗಾತ್ರದ ಅಥವಾ ದೊಡ್ಡನಗರದಲ್ಲಿ ವಾಸಿಸುವವರು ನೀವಾದರೆ ವೀಕೆಂಡುಗಳಲ್ಲಿ ನಿಮಗೆ ಎರಡು ತರದ ಜನ ಸಿಕ್ತಾರೆ. ಒಂದು ಗುಂಪು ಬೆಳಿಗ್ಗೆದ್ದು ಸೈಕ್ಲಿಂಗು, ರನ್ನಿಂಗು, ಅಥವಾ ಬೈಕ್ ಕ್ಲಬ್ ಜೊತೆ ಲಾಂಗ್ ರೈಡು, ಯಾವುದಾದರೂ ಹಿಲ್-ಸ್ಟೇಷನ್ನಿಗೆ ಓಟ, ಆಮೇಲೆ ಏನೋ ಒಂದು ಹೊಸಾವಿದ್ಯೆಯ ಕ್ಲಾಸು, ಬಾಲ್ಕನಿಯೋ ಟೆರೇಸಲ್ಲೋ ಇರೋ ಗಾರ್ಡನ್ನು ನೋಡ್ಕೊಳ್ಳೋದು ಇತ್ಯಾದಿ ಕೆಲಸಗಳನ್ನು ಹಮ್ಮಿಕೊಳ್ಳೋರು. ಇನ್ನೊಂದು ಗುಂಪು, Read more…


ಚುನಾವಣೆಗಳು ಮುಗಿದು, ಪಲಿತಾಂಶ ಪ್ರಕಟವಾಗಿ ಮೂರುವಾರ ಕಳೆದಿದೆ. ಮೂರೂ ಪ್ರಮುಖ ಪಕ್ಷಗಳು ತಮ್ಮ ನೈಸರ್ಗಿಕ ಗುಣಗಳನ್ನು ಮತ್ತೆ ರಾಜ್ಯದ ಜನರ ಮುಂದೆ ಖುಲ್ಲಂಖುಲ್ಲಾ ಪ್ರದರ್ಶನಕ್ಕಿಟ್ಟಿವೆ. ಚುನಾವಣೆ ಮುಗಿದಕೂಡಲೇ “ಸಧ್ಯಕ್ಕೆ ತಮ್ಮ ಕೆಲಸ ಮುಗಿದಿದೆ, ಇನ್ನು ಐದು ವರ್ಷ ನಮಗೇನೂ ಕೆಲಸವಿಲ್ಲ” ಎನ್ನುತ್ತಾ ಜೆಡಿಎಸ್ ಪುನಃ ನಿದ್ರೆಗೆ ಜಾರಿದೆ. ಬಹುಷಃ ಕುಮಾರಸ್ವಾಮಿಯವರು 2028ರ ಜನವರಿಯಲ್ಲಿ ಮತ್ತೊಂದಷ್ಟು ಹೊಸಹೊಸರೀತಿಯ Read more…