Saturday, 27 April, 2024

Tag: Singer


ಎಸ್ಪಿಬಿಯವರಿಗೆ ನುಡಿನಮನ ಸಲ್ಲಿಸಿದ ನನ್ನ ಲೇಖನಕ್ಕೆ ಮೈಸೂರಿನ ಶ್ರೀ ಪಾಂಡುರಂಗ ವಿಠಲರು ಚಂದದ ಧ್ವನಿರೂಪಕೊಟ್ಟಿದ್ದಾರೆ. ಮೂಲಬರಹ ಇಲ್ಲಿದೆ: “ಕಲ್ಲಾದರೆ ನಾನು…..ಆಕಾಶದೀಪವು ನೀನು” ಎಂದೂಮಾಸದ ಎಸ್ಪಿಬಿಯವರ ಧ್ವನಿಗೊಂದು ಧ್ವನಿನಮನ.


ನೀವು ಆಗಾಗ ಸಾಮಾನ್ಯವಾಗಿ ಅತ್ಯುತ್ತಮ ವ್ಯಕ್ತಿತ್ವವನ್ನು ಗುರುತಿಸುವಾಗ, “ಮೇರುಸಮಾನರಾದ” “ಮೇರು ಪ್ರಾಯರಾದ” “ಮೇರು ಪರ್ವತದಂತಾ ವ್ಯಕ್ತಿತ್ವ” ಮೊದಲಾದ ವಿಶೇಷಣಗಳ ಬಳಕೆಯನ್ನು ಕೇಳಿರುತ್ತೀರಿ ಅಥವಾ ನೋಡಿರುತ್ತೀರಿ. ಕರ್ನಾಟಸಂಗೀತಪ್ರಿಯರಿಗೆ ಶಾಮಾಶಾಸ್ತ್ರಿಗಳು ಜಗನ್ಮಾತೆ ಪಾರ್ವತಿಯನ್ನು ‘ಸುಮೇರು ಮಧ್ಯ ನಿಲಯೇ’ ಎಂದು ಕರೆದಿರುವುದು ನೆನಪಿರಬಹುದು. ಪಾರ್ವತಿ ಪರ್ವತ ರಾಜ ಹಿಮಾಲಯನ ಮಗಳಾದ್ದರಿಂದ, ಇದೇ ಕಾರಣಕ್ಕೇ ಮೇರು ಪರ್ವತ ಹಿಮಾಲಯ ಪರ್ವತಗಳಲ್ಲಿ ಎಲ್ಲೋ ಇದೆ ಎಂಬ ನಂಬಿಕೆ Read more…