Saturday, 20 April, 2024

Tag: religion


2002ರ ಗೋಧ್ರಾ ಗಲಭೆಗಳಾದಾಗ ಎಲ್ಲರೂ ಮೋದಿಯ ರಾಜೀನಾಮೆಗೆ ಆಗ್ರಹಿಸಿ ಕೂತಿದ್ದರು. ರಾಜ್ಯ ಮತ್ತು ಕೇಂದ್ರಗಳಲ್ಲಿದ್ದ ವಿಪಕ್ಷದವರು ಮಾತ್ರವಲ್ಲದೇ, ಅಂದು ಗುಜರಾತಿನಲ್ಲಿ ಮತ್ತು ಕೇಂದ್ರದಲ್ಲಿ ಆಡಳಿತದಪಕ್ಷವಾಗಿದ್ದ ಬಿಜೆಪಿಯೊಳಗೂ ಸಹ ಮೋದಿವಿರೋಧಿ ಅಲೆಯೆದ್ದಿತ್ತು. ಇಡೀ ದೇಶವೇ ಇಂತಹುದೊಂದು ಆಗ್ರಹಕ್ಕೆ ಉತ್ತರವನ್ನು ನಿರೀಕ್ಷಿಸಿ ಕುಳಿತಿದ್ದಾಗ ಅಂದಿನ ಪ್ರಧಾನಿಯಾಗಿದ್ದ ವಾಜಪೇಯಿಯವರು ಹೇಳಿದ ಮಾತು ಒಂದೇ “ಮೋದಿಯವರು ರಾಜಧರ್ಮವನ್ನು ಪಾಲಿಸಲಿ”. ಪ್ರಧಾನಿಗಳು ಮೋದಿಯವರನ್ನು Read more…


ಮನುಷ್ಯ ಮೂಲತಃ ಗರ್ವಿ. ಆದರೆ ಭಯಾನಕ ಹೆದರುಪುಕ್ಕಲ. “ಎಲ್ಲವೂ ನನ್ನಿಂದಲೇ, ನಾನೆಲ್ಲವನ್ನೂ ಮೀರಬಲ್ಲೆ, ಎಲ್ಲಕಡೆಯೂ ಹೋಗಬಲ್ಲೆ” ಎಂದು ಎದೆಯುಬ್ಬಿಸುತ್ತಲೇ, “ದೇವರೇ ಕಾಪಾಡಪ್ಪ….ಇದೊಂದನ್ನು ಸರಿಮಾಡಪ್ಪಾ” ಅಂತಾ ಬೇಡಿಕೊಳ್ತಾನೆ. ದೇವರಿದ್ದಾನೋ ಇಲ್ಲವೋ ಎಂದು ನಿರೂಪಿಸಲಾಗದಿದ್ದರೂ, ನನ್ನನ್ನು ಕಾಪಾಡುವ/ಮಣ್ಣುಮುಕ್ಕಿಸಬಲ್ಲ ಇನ್ನೊಬ್ಬನಿದ್ದಾನೆ(ಳೆ) ಅನ್ನುವ ಮನೋಸ್ಥಿತಿಯಿಂದ ಸಾವಿರಾರು ವರ್ಷವಾದರೂ ನಾವು ಹೊರಬಂದಿಲ್ಲ. ಸರ್ವಶಕ್ತನಾದ ದೇವರೆಂಬ ಕಲ್ಪನೆಯನ್ನು ಅಪ್ಪಿ ಮುದ್ದಾಡಿದವರು ಜಗತ್ತಿನಲ್ಲಿ ಲೆಕ್ಕವಿಲ್ಲದಷ್ಟು ಜನ. Read more…