
ಮನುಷ್ಯ ಮೂಲತಃ ಸಂಘಜೀವಿಯಾದರೂ, ಬೆಳೆದಂತೆಲ್ಲಾ ಆತನಿಗೆ ತನ್ನದೇ ಒಂದು ಅಸ್ಮಿತೆಯನ್ನು ರೂಪಿಸಿಕೊಳ್ಳುವ ಅಗತ್ಯ ಮತ್ತೆ ಮತ್ತೆ ಕಂಡುಬರುತ್ತದೆ. ಮೊತ್ತಮೊದಲ ನಾಗರೀಕತೆ, ಮನುಷ್ಯರನ್ನು ಒಂದುಗೂಡಿಸಿದರೂ ಸಹ, ಎರಡು ನಾಗರೀಕತೆಗಳು ಮುಖಾಮುಖಿಯಾದಾಗ, ನಿಧಾನಕ್ಕೆ ಅಸೂಯೆಯೋ, ಶಕ್ತಿಯ ಅಗತ್ಯತೆಯೋ ಮೇಲುಗೈ ಸಾಧಿಸಿ ನಿನಗಿಂತಾ ನಾನು ಕಡಿಮೆಯಿಲ್ಲ ಎಂದು ತೋರಿಸುವ ಚಾಳಿಗೆ ಎಲ್ಲರೂ ಬಿದ್ದವರೇ. ಮೊದಲಿನ ನಾಗರೀಕತೆಗಳಲ್ಲಿ ತನಗೆ ಕಂಡಿದ್ದೆಲ್ಲಾ ಮತ್ತು ತನಗೆ ಬೇಕಾದದ್ದೆಲ್ಲಾ ನನ್ನದೇ ಎಂಬ ಮನೋಭಾವವೇ Read more…