
ಅವ ರುಕ್ಮಿಣಿಗೂ ಕೃಷ್ಣನಾದ. ರಾಧೆಗೂ ಕೃಷ್ಣನಾದ. ರುಕ್ಮಿಣಿಯನ್ನು, ಅವಳ ಬಯಕೆಗಳನ್ನೂ, ರುಕ್ಮಿಣಿಯೊಂದಿಗಿನ ಕೃಷ್ಣನನ್ನು ಹೋಗೋ ಅರ್ಥೈಸಿಕೊಂಡುಬಿಡಬಹುದು. ಯಾಕೆಂದರೆ ನಾವೆಲ್ಲರೂ ರುಕ್ಮಿಣಿಯ ಕೃಷ್ಣರೇ. ಆದರೆ ರಾಧಾಕೃಷ್ಣನನ್ನು ಅರ್ಥೈಸಿಕೊಳ್ಳುವಾಗ ಹೆಚ್ಚಿನ ಹಿಡಿತಬೇಕು, ಜಗತ್ತು ಅರ್ಥವಾಗಬೇಕು, ಸಂಬಂಧಗಳು ಮನಸ್ಸನ್ನು ತಾಕಬೇಕು. ಇಲ್ಲವಾದಲ್ಲಿ ಕೈಲಾಗದತನವನ್ನೋ, ಲಂಪಟತನವನ್ನೋ ಸಮರ್ಥಿಸಿಕೊಂಡಂತಾಗುತ್ತದೆ. ಕೃಷ್ಣ ಎಂದರೆ ಏನೋ ಸೆಳೆತ, ಸಂಭ್ರಮ, ಗದ್ದಲ, ಸಂತೋಷ, ಆತ್ಮೀಯತೆ, ನಮ್ಮವನೆಂಬ Read more…