Tuesday, 27 February, 2024

Tag: Management


ಜಾಹೀರಾತುಗಳು ಉತ್ಪನ್ನಗಳನ್ನು ಮಾರುವುದು, ಕಂಪನಿಯ ಧ್ಯೇಯ ಸಾರುವುದು, ಸಾಮಾಜಿಕ ಸಂದೇಶಗಳನ್ನು ಕಳುಹಿಸುವುದಲ್ಲದೇ, ಎಷ್ಟೋಬಾರಿ ಕಂಪನಿಗಳನ್ನು ಉಳಿಸಿದ್ದೂ ಉಂಟು. ಉತ್ಪನ್ನಗಳ ಮಾರಾಟ ಕೆಳಗಿಳಿದು, ಕಂಪನಿಯೇ ಮುಳುಗುತ್ತಿದ್ದ ಪರಿಸ್ಥಿತಿಯಲ್ಲಿ ಬಿಡುಗಡೆಯಾದ ಆ ಒಂದು ಜಾಹೀರಾತು, ಇಡೀ ಕಂಪನಿಗೊಂದು ಹುಲ್ಲುಕಡ್ಡಿಯಾಗಿ ನಿಂತು ಅದನ್ನು ಬಚಾಯಿಸಿ ಮತ್ತೆ ಜೀವ ತುಂಬಿದ್ದಿದೆ. ಕೆಲವೊಮ್ಮೆ ಈ ಜಾಹೀರಾತುಗಳು ಉತ್ಪನ್ನದ ಮಾರುಕಟ್ಟೆ ಹೆಚ್ಚಿಸಿದ್ದಷ್ಟೇ ಅಲ್ಲ, ಕಂಪನಿಯ ಬಗ್ಗೆ ಜನರಿಗಿದ್ದ ಗ್ರಹಿಕೆಯನ್ನೇ ಬದಲಾಯಿಸಿ ಅದರ ಬ್ರಾಂಡ್ Read more…


ಜಾಹೀರಾತಿನ ಮುಖ್ಯ ಉದ್ದೇಶವೇ ಉತ್ಪನ್ನವನ್ನು ಮಾರುವುದಾದರೂ, ಹಲವಾರು ಬಾರಿ ಕಂಪನಿಗಳು ಈ ಮಾರಾಟದ ಮದ್ಯೆ ಸಂದೇಶಗಳನ್ನೂ ಸೇರಿಸಲು ಪ್ರಯತ್ನಪಡುವುದುಂಟು. ಇದೊಂದು ತೀರಾ ಸೂಕ್ಷ್ಮ ಪ್ರಕ್ರಿಯೆಯಾಗಿದ್ದು, ಈ ವಿಚಾರದಲ್ಲಿ ಎಲ್ಲಾ ಜಾಹೀರಾತುಗಳು ಸಫಲತೆ ಕಂಡಿದ್ದಿಲ್ಲ. ಹಾಗೆ ನೋಡಿದರೆ, ಈ ರೀತಿಯ ಜಾಹೀರಾತುಗಳು ಸಂದೇಶಕೊಟ್ಟು ಜನಪ್ರಿಯವಾದದ್ದಕ್ಕಿಂತಾ ಸೋಲುಕಂಡಿದ್ದೇ ಹೆಚ್ಚು. ಸಂದೇಶಕೊಡುವಲ್ಲಿ ವಿಫಲವಾದದ್ದು ಮಾತ್ರವಲ್ಲ, ಕೆಲವೊಮ್ಮೆ ತಪ್ಪುಸಂದೇಶ ಕೊಟ್ಟು, ವಿವಾದ Read more…


ಜಾಹೀರಾತುಗಳ ಮೂಲೋದ್ದೇಶ ಉತ್ಪನ್ನಗಳ ಮಾರಾಟವೇ ಆಗಿದ್ದರೂ, ಕಂಪನಿಗಳಿಗೆ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸುವ ಇರಾದೆಯೇ ಇದ್ದರೂ, ಮನುಷ್ಯರು ಮಾಡುವ ಕೆಲಸಗಳಲ್ಲಿ ತಪ್ಪಾಗಲೇ ಬೇಕಲ್ಲ. ಮತ್ತು ಆಗಿದೆ ಕೂಡಾ. ಜಾಹೀರಾತುಗಳ ವಿಷಯದಲ್ಲಿ ನೂರಾರು ತಪ್ಪುಗಳಾಗಿವೆ. ಕೆಲವೆಡೆ ನಿಜಕ್ಕೂ ತಪ್ಪು ಸಂದೇಶವೇ ಹೋಗಿ, ಜನರು ಕೋಪಗೊಂಡಿದ್ದಾರೆ. ಕೆಲವೆಡೆ ಉತ್ಪನ್ನಗಳನ್ನೇ ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ, ಮತ್ತೆ ಕೆಲವೆಡೆ ಜಾಹೀರಾತಿನ ಸಂದೇಶ ತಪ್ಪು ಅರ್ಥಕ್ಕೆ ಎಡೆಮಾಡಿಕೊಟ್ಟು ನಿರ್ಧಿಷ್ಟ ಸಮುದಾಯಗಳು ಕಂಪನಿಗಳು Read more…


ಜಾಹೀರಾತುಗಳು ಯಾರಿಗೆ ತಾನೇ ಇಷ್ಟವಿಲ್ಲ. ಮಕ್ಕಳಿಗಂತೂ ಜಾಹೀರಾತುಗಳು ಬಲು ಇಷ್ಟ ಹೌದಾದರೂ, ಜಾಹೀರಾತುಗಳನ್ನು ಮೆಚ್ಚುವ ಮನಸೋಲುವ ವಯಸ್ಕರಿಗೂ ಏನು ಕಮ್ಮಿಯಿಲ್ಲ. ಬಣ್ಣದ ಬಣ್ಣದ ಮಾತುಗಳು, ಈಡೇರುತ್ತೋ ಇಲ್ಲವೋ ಆದರೂ ಚಂದಚಂದದ ಭರವಸೆಗಳು, ನಮ್ಮ ಪ್ರಾಡಕ್ಟನ್ನು ಬಳಸದೇ ಹೋದರೆ ನಿಮ್ಮ ಜೀವನವೇ ವ್ಯರ್ಥ, ನಮ್ಮ ಎದುರಾಳಿಯ ಉತ್ಪನ್ನವನ್ನು ಬಳಸುತ್ತಿದ್ದೀರ ಎಂದಾದಲ್ಲಿ ನೀವೆಂತ ಮೂರ್ಖರು, ನಿಮ್ಮ ಜೀವನವನ್ನೇ ಬದಲಾಯಿಸಿಕೊಳ್ಳೋಕೆ ನಾವು ಎಂತಹಾ ಒಳ್ಳೆಯ ಅವಕಾಶ ಕೊಡ್ತಾ Read more…


ಜಗತ್ತು ವೇಗವಾಗಿ ಬೆಳೆಯುತ್ತಿದೆ ಅನ್ನುವ ಮಾತನ್ನು ನಾವು ಸದಾ ಕೇಳುತ್ತಲೇ ಇರುತ್ತೇವೆ. ಹಾಗೂ ಆ ಬೆಳವಣಿಗೆಯ ಬಗ್ಗೆ ಹೆಮ್ಮೆಯನ್ನೂ ಪಡುತ್ತೇವೆ. ನಮ್ಮ ಕಾಲದಲ್ಲಿ ಹೀಗಿರಲಿಲ್ಲಪ್ಪಾ ಎನ್ನುತ್ತಲೇ, ಹೀಗಿದ್ದಿದ್ದರೆ ಎಷ್ಟು ಚಂದ ಇರ್ತಿತ್ತು ಅನ್ನುವ ಕನಸನ್ನೂ ಕಾಣುತ್ತೇವೆ. ಹೌದು ಕೆಲ ಬೆಳವಣಿಗೆಗಳು ಚಂದ. ಇನ್ನು ಕೆಲವು ಬೆಳವಣಿಗೆಗಳು ಆಗದಿದ್ದರೆ ಚೆಂದವಿತ್ತೇನೋ, ಅಥವಾ ಸ್ವಲ್ಪ ನಿಧಾನಕ್ಕೆ ಆಗಿದ್ದರೂ ಒಳ್ಳೆಯದಿತ್ತೇನೋ Read more…


ಜಗತ್ತಿಗೇ ಗೊತ್ತಿರುವ, ಜಗತ್ತಿನ “ಬೇಕಾದವರೆಲ್ಲರೂ” ಇರುವ, ದೊಡ್ಡ ವಿಚಾರಗಳನ್ನೆಲ್ಲಾ ಎರಡೇ ಸಾಲಿನಲ್ಲಿ ಪ್ರಕಟಿಸಿ ಬ್ರೇಕಿಂಗ್ ಸುದ್ಧಿಮಾಡುವ ಟ್ವಿಟರ್ ಗೊತ್ತಿಲ್ಲದವರು ಯಾರಿದ್ದಾರೆ? ಸ್ಮಾರ್ಟ್-ಫೋನಿದ್ದಮೇಲೆ ಟ್ವಿಟರ್ ಗೊತ್ತಿರಲೇ ಬೇಕಲ್ಲ? ಗೊತ್ತಿಲ್ಲದಿದ್ದರೆ ಡಿಜಿಟಲ್ ಯುಗದಲ್ಲಿದ್ದೇ ಶಿಲಾಯುಗದಲ್ಲಿ ಬದುಕುವವರು ನೀವಾಗ್ತೀರಿ. ಯಾಕೆಂದರೆ ಮಾಹಿತಿಯುಗದ ಮುಂಚೂಣಿಯಲ್ಲಿ ನಿಂತು, ಜಗತ್ತು ಯಾವಕಡೆ ಹೋಗಬೇಕೆನ್ನುವುದನ್ನು ನಿರ್ಧರಿಸುವ ಚುಕ್ಕಾಣಿಯನ್ನೇ ಕೈಯಲ್ಲಿ ಹಿಡಿದು ನಿಂತಿರುವ ಟ್ವಿಟರ್, ಪ್ರತಿಯೊಬ್ಬ ತಂತ್ರಜ್ಞಾನ ಸಾಕ್ಷರನ, ಸಾಮಾಜಿಕ ಜಾಲತಾಣಜೀವನದ ತೊದಲುನುಡಿ. ಜಗತ್ತಿನ ಆಗುಹೋಗುಗಳ ಅರಿವಿರುವವರು, ಅರಿವಿರಬೇಕೆಂದು ಬಯಸುವವರು ನೀವಾದರೆ, ಟ್ವಿಟರ್ ಬಗ್ಗೆ Read more…


ಹಣವುಳಿಸುವ ಕಥೆಗಳಲ್ಲಿ ಇದು ಕೊನೆಯ ಕಂತು. ಕಳೆದ ವಾರದ ಎಳೆಯನ್ನೇ ಮುಂದುವರಿಸುತ್ತಾ ಉದ್ಯೋಗಿ ಸಂಬಂಧೀ ಖರ್ಚುಗಳನ್ನೇ ಬೇರೆ ಬೇರೆ ರೀತಿಯಲ್ಲಿ ಕಡಿಮೆ ಮಾಡುತ್ತಾ ಲಾಭಗಳಿಸಿದ ಕಂಪನಿಗಳ ಕೆಲ ಉದಾಹರಣೆಗಳನ್ನು ನೋಡೋಣ.   ಖರ್ಚು ಕಡಿಮೆ ಮಾಡೋದು ಎಂದ ಕೂಡಲೇ ನಮಗೆ, ಈ ಕ್ಷಣದ ಅಂದರೆ ಈ ತಿಂಗಳಲ್ಲಿ ಉದ್ಯೋಗಿಗಳ ಸಂಬಳದ ಖರ್ಚನ್ನು ಕಡಿಮೆಮಾಡುವುದು ಎಂಬ ಆಲೋಚನೆ ಬರುತ್ತದೆ. Read more…


ಕಳೆದೆರಡು ವಾರದಲ್ಲಿ ಹಣಉಳಿಸಲು ಕಂಪನಿಗಳು ಮಾಡಿದ ಕೆಲ ಜನಪ್ರಿಯ ಪ್ರಯತ್ನಗಳ ಉದಾಹರಣೆಗಳ ಬಗ್ಗೆ ಬರೆದಿದ್ದೆ. ಈ ಮತ್ತು ಮುಂದಿನ ಕಂತಿನಲ್ಲಿ, ಇದೇ ನಿಟ್ಟಿನಲ್ಲಿ ಅಂದರೆ ಕಂಪನಿಗೆ ಹಣವುಳಿಸುವ ಹಾದಿಯಲ್ಲಿ ಮಾಡಿದ ಒಂದು ನಿರ್ದಿಷ್ಟಹಂತದ ಪ್ರಯತ್ನಗಳ ಬಗ್ಗೆ ತಿಳಿಯೋಣ. ಇದು ವೈಯುಕ್ತಿಕವಾಗಿ ನನ್ನ ಕೆಲಸದ ಕ್ಷೇತ್ರವೂ ಹೌದಾದ್ದರಿಂದ, ಇದರ ಬಗ್ಗೆ ನನಗೆ ಹೆಚ್ಚೇ ಒಲವು ಹಾಗೂ ವಿವರಿಸಲು ನನಗೆ ಸಂತೋಷ ಕೂಡಾ. Read more…


ನನ್ನ ಹಿಂದಿನ ಅಂಕಣದಲ್ಲಿ, ಕಂಪನಿಗಳು ಲಾಭ ಹೆಚ್ಚಿಸುವ ಉದ್ದೇಶದಿಂದ ಜಾರಿಗೆ ತಂದ ಕೆಲವು ವಿಷಯಗಳ ಬಗ್ಗೆ ಬರೆದಿದ್ದೆ. ವ್ಯವಹಾರ ಲೋಕದಲ್ಲಿ ಇವನ್ನು ಜಿಪುಣತನ ಅನ್ನಲಿಕ್ಕಾಗುವುದಿಲ್ಲ. ಯಾಕೆಂದರೆ ಇವು ಬರೀ ಒಂದೆರಡು ಡಾಲರ್ ಉಳಿಸುವ ಉಪಾಯಗಳಲ್ಲ. ಬದಲಿಗೆ ಕೋಟ್ಯಾಂತರ ಡಾಲರ್ ಉಳಿಸುವ ನಿಟ್ಟಿನಲ್ಲಿ ನೆರವಾದ ಹೆಜ್ಜೆಗಳು. ಇವು ಯಾರೋ ಒಬ್ಬ ಸುಮ್ಮನೇ ಮಧ್ಯಾಹ್ನದೂಟಕ್ಕೆ ಕೂತಾಗ ಟೀಮಿಗೆ ಕೊಟ್ಟ ಸಲಹೆಗಳಲ್ಲ. ನೂರಾರುಘಂಟೆಗಳ Read more…


ನಿಮ್ಮ ಪ್ರಕಾರ ಕಂಪನಿಯೊಂದರ ಮೂಲ ಉದ್ದೇಶವೇನಿರಬಹುದು? ನೀವು ಕೆಲಸ ಮಾಡುವ ಕಂಪನಿಯಿರಬಹುದು, ಅಥವಾ ಮಾರುಕಟ್ಟೆಯಲ್ಲಿ ನೋಡುವ ಬೇರೆ ಕಂಪನಿಗಳಿರಬಹುದು. ಅದರ ಮೂಲ ಮತ್ತು ಅಂತಿಮ ಉದ್ದೇಶವೇನು? ಕಂಪನಿಗಳಿಗೆ ವಿಷನ್ ಮತ್ತು ಮಿಷನ್ ಸ್ಟೇಟ್ಮೆಂಟುಗಳಿರುತ್ತೆ ಅನ್ನೋದನ್ನ ನೀವು ಓದಿರ್ತೀರಿ. ಕೆಲಕಂಪನಿಗಳಿಗೆ ತಮ್ಮ ವಲಯದೊಳಗೆ ಜಗತ್ತಿನಲ್ಲೇ ಅತ್ಯುತ್ತಮ ಕಂಪನಿಯಾಗುವ ವಿಷನ್ ಸ್ಟೇಟ್ಮೆಂಟ್ ಇರುತ್ತೆ. ಇನ್ನು ಕೆಲಕಂಪನಿಗಳಿಗೆ ಜನರ ಜೀವನಮಟ್ಟವನ್ನು ಸುಧಾರಿಸೋದು, ಬೇರೆ ಕಂಪನಿಗಳಿಗೆ ಜಗತ್ತನ್ನು Read more…