Friday, 29 March, 2024

Tag: Kannada


ಹೊಸ ವರುಷವೊಂದು ಹೊಸ್ತಿಲಲ್ಲಿದೆ. ನಮ್ಮ ಸಂಪ್ರದಾಯದ ಪ್ರಕಾರ ಇದು ಹೊಸವರ್ಷದ ದಿನವಲ್ಲ ಎಂಬ ಸಿನಿಕತವನ್ನು ಬಿಟ್ಟು, ಯಾರಿಗೆ ಆಚರಿಸಲು ಇಷ್ಟವಿದೆಯೋ ಅವರನ್ನವರಪಾಡಿಗೆ ಬಿಟ್ಟು, ಎಲ್ಲರಿಗೂ ಹೊಸ ವರ್ಷದಲ್ಲಿ ಒಳ್ಳೆಯದಾಗಲಿ ಎಂದು ಹಾರೈಸುತ್ತಾ, ಮುಂದುವರಿಯೋಣ. ಕಳೆದ ವರ್ಷ ಸಾಧಿಸಿದ್ದು ಬಹಳಷ್ಟಿದೆ. ಮುಂದಿನ ವರ್ಷದಲ್ಲೂ ಮಾಡಬೇಕಾದ ಕೆಲಸ ಕಾರ್ಯಗಳೂ, ಜಗತ್ತು ಮತ್ತದರ ಸವಾಲುಗಳೂ ಹತ್ತಾರಿವೆ. ಕಳೆದ ಹತ್ತುವರ್ಷಗಳಿಂದ ಭಾರತ Read more…


ಜಾಹೀರಾತುಗಳು ಉತ್ಪನ್ನಗಳನ್ನು ಮಾರುವುದು, ಕಂಪನಿಯ ಧ್ಯೇಯ ಸಾರುವುದು, ಸಾಮಾಜಿಕ ಸಂದೇಶಗಳನ್ನು ಕಳುಹಿಸುವುದಲ್ಲದೇ, ಎಷ್ಟೋಬಾರಿ ಕಂಪನಿಗಳನ್ನು ಉಳಿಸಿದ್ದೂ ಉಂಟು. ಉತ್ಪನ್ನಗಳ ಮಾರಾಟ ಕೆಳಗಿಳಿದು, ಕಂಪನಿಯೇ ಮುಳುಗುತ್ತಿದ್ದ ಪರಿಸ್ಥಿತಿಯಲ್ಲಿ ಬಿಡುಗಡೆಯಾದ ಆ ಒಂದು ಜಾಹೀರಾತು, ಇಡೀ ಕಂಪನಿಗೊಂದು ಹುಲ್ಲುಕಡ್ಡಿಯಾಗಿ ನಿಂತು ಅದನ್ನು ಬಚಾಯಿಸಿ ಮತ್ತೆ ಜೀವ ತುಂಬಿದ್ದಿದೆ. ಕೆಲವೊಮ್ಮೆ ಈ ಜಾಹೀರಾತುಗಳು ಉತ್ಪನ್ನದ ಮಾರುಕಟ್ಟೆ ಹೆಚ್ಚಿಸಿದ್ದಷ್ಟೇ ಅಲ್ಲ, ಕಂಪನಿಯ ಬಗ್ಗೆ ಜನರಿಗಿದ್ದ ಗ್ರಹಿಕೆಯನ್ನೇ ಬದಲಾಯಿಸಿ ಅದರ ಬ್ರಾಂಡ್ Read more…


ಜಾಹೀರಾತಿನ ಮುಖ್ಯ ಉದ್ದೇಶವೇ ಉತ್ಪನ್ನವನ್ನು ಮಾರುವುದಾದರೂ, ಹಲವಾರು ಬಾರಿ ಕಂಪನಿಗಳು ಈ ಮಾರಾಟದ ಮದ್ಯೆ ಸಂದೇಶಗಳನ್ನೂ ಸೇರಿಸಲು ಪ್ರಯತ್ನಪಡುವುದುಂಟು. ಇದೊಂದು ತೀರಾ ಸೂಕ್ಷ್ಮ ಪ್ರಕ್ರಿಯೆಯಾಗಿದ್ದು, ಈ ವಿಚಾರದಲ್ಲಿ ಎಲ್ಲಾ ಜಾಹೀರಾತುಗಳು ಸಫಲತೆ ಕಂಡಿದ್ದಿಲ್ಲ. ಹಾಗೆ ನೋಡಿದರೆ, ಈ ರೀತಿಯ ಜಾಹೀರಾತುಗಳು ಸಂದೇಶಕೊಟ್ಟು ಜನಪ್ರಿಯವಾದದ್ದಕ್ಕಿಂತಾ ಸೋಲುಕಂಡಿದ್ದೇ ಹೆಚ್ಚು. ಸಂದೇಶಕೊಡುವಲ್ಲಿ ವಿಫಲವಾದದ್ದು ಮಾತ್ರವಲ್ಲ, ಕೆಲವೊಮ್ಮೆ ತಪ್ಪುಸಂದೇಶ ಕೊಟ್ಟು, ವಿವಾದ Read more…


ಜಾಹೀರಾತುಗಳ ಮೂಲೋದ್ದೇಶ ಉತ್ಪನ್ನಗಳ ಮಾರಾಟವೇ ಆಗಿದ್ದರೂ, ಕಂಪನಿಗಳಿಗೆ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸುವ ಇರಾದೆಯೇ ಇದ್ದರೂ, ಮನುಷ್ಯರು ಮಾಡುವ ಕೆಲಸಗಳಲ್ಲಿ ತಪ್ಪಾಗಲೇ ಬೇಕಲ್ಲ. ಮತ್ತು ಆಗಿದೆ ಕೂಡಾ. ಜಾಹೀರಾತುಗಳ ವಿಷಯದಲ್ಲಿ ನೂರಾರು ತಪ್ಪುಗಳಾಗಿವೆ. ಕೆಲವೆಡೆ ನಿಜಕ್ಕೂ ತಪ್ಪು ಸಂದೇಶವೇ ಹೋಗಿ, ಜನರು ಕೋಪಗೊಂಡಿದ್ದಾರೆ. ಕೆಲವೆಡೆ ಉತ್ಪನ್ನಗಳನ್ನೇ ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ, ಮತ್ತೆ ಕೆಲವೆಡೆ ಜಾಹೀರಾತಿನ ಸಂದೇಶ ತಪ್ಪು ಅರ್ಥಕ್ಕೆ ಎಡೆಮಾಡಿಕೊಟ್ಟು ನಿರ್ಧಿಷ್ಟ ಸಮುದಾಯಗಳು ಕಂಪನಿಗಳು Read more…


ಜಾಹೀರಾತುಗಳು ಯಾರಿಗೆ ತಾನೇ ಇಷ್ಟವಿಲ್ಲ. ಮಕ್ಕಳಿಗಂತೂ ಜಾಹೀರಾತುಗಳು ಬಲು ಇಷ್ಟ ಹೌದಾದರೂ, ಜಾಹೀರಾತುಗಳನ್ನು ಮೆಚ್ಚುವ ಮನಸೋಲುವ ವಯಸ್ಕರಿಗೂ ಏನು ಕಮ್ಮಿಯಿಲ್ಲ. ಬಣ್ಣದ ಬಣ್ಣದ ಮಾತುಗಳು, ಈಡೇರುತ್ತೋ ಇಲ್ಲವೋ ಆದರೂ ಚಂದಚಂದದ ಭರವಸೆಗಳು, ನಮ್ಮ ಪ್ರಾಡಕ್ಟನ್ನು ಬಳಸದೇ ಹೋದರೆ ನಿಮ್ಮ ಜೀವನವೇ ವ್ಯರ್ಥ, ನಮ್ಮ ಎದುರಾಳಿಯ ಉತ್ಪನ್ನವನ್ನು ಬಳಸುತ್ತಿದ್ದೀರ ಎಂದಾದಲ್ಲಿ ನೀವೆಂತ ಮೂರ್ಖರು, ನಿಮ್ಮ ಜೀವನವನ್ನೇ ಬದಲಾಯಿಸಿಕೊಳ್ಳೋಕೆ ನಾವು ಎಂತಹಾ ಒಳ್ಳೆಯ ಅವಕಾಶ ಕೊಡ್ತಾ Read more…


ಕಳೆದವಾರ ಕಾರ್ಪೊರೇಟ್ ಜಗತ್ತು ಬೋರ್ಡ್ ರೂಂ ಕಾಳಗವೊಂದರ ರೋಚಕ ಬಹುಮಜಲುಗಳ ಬಂಡಾಯದ ತಿರುವುಮುರುವುಗಳ ಕಥೆಯೊಂದಕ್ಕೆ ಸಾಕ್ಷಿಯಾಯ್ತು. ಇಡೀ ಜಗತ್ತಿನ ತಾಂತ್ರಿಕ ಚಹರೆಯನ್ನೇ ಚಾಟ್ ಜಿಪಿಟಿಯ ಮೂಲಕ ಬದಲಿಸುವ ಪಣತೊಟ್ಟ ಸ್ಯಾಮ್ ಆಲ್ಟ್-ಮನ್ ಎಂಬ ವಿಕ್ಷಿಪ್ತ ವ್ಯಕ್ತಿ ಈ ಇಡೀ ಕಥೆಯ ಕೇಂದ್ರಬಿಂದುವಾಗಿದ್ದ. ವಿಜ್ಞಾನ ತಂತ್ರಜ್ಞಾನ ಜಗತ್ತನ್ನು ಅವಲೋಕಿಸುವ ಅಭ್ಯಾಸದವರು ನೀವಾದರೆ, ಈ ಜಗತ್ತಿನಲ್ಲಿ ಪ್ರತೀ ಮೂರುದಶಕಕ್ಕೊಮ್ಮೆ ಹೀಗಾಗುವುದನ್ನು Read more…


ಕ್ರಿಕೆಟ್ ಜ್ವರ ಇನ್ನೂ ಇಳಿದಿಲ್ಲ. ನಿರುತ್ಸಾಹದ ಅಲೆಗಳು ಇನ್ನೂ ಸಪಾಟಾಗಿಲ್ಲ. ಸ್ವಘೋಷಿತ ತಜ್ಞರ ವಿಮರ್ಶೆಗಳು, ವಿಮರ್ಶೆಯ ಹೆಸರಿನಲ್ಲಿ ಕೂರಂಬುಗಳು ಇನ್ನೂ ತಣ್ಣಗಾಗಿಲ್ಲ. ಸೋಲಿನ ಕಾರಣದ ಹುಡುಕಾಟ ನಿಂತಿಲ್ಲ. ತಂಡಕ್ಕೆ, ನಾಯಕನಿಗೆ, ಆ ಬೌಲರನಿಗೆ, ಈ ಬ್ಯಾಟ್ಸ್ಮನ್ನನಿಗೆ, ತರಬೇತುದಾರನಿಗೆ, ಆಯ್ಕೆಸಮಿತಿಗೆ, ಎದುರಾಳಿ ತಂಡಕ್ಕೆ, ಪಾಕಿಸ್ಥಾನಕ್ಕೆ, ಮೋದಿಗೆ ಇನ್ನೂ ಬೈದು ಮುಗಿದಿಲ್ಲ. ಹಾಗಾಗಿ ಇವತ್ತಿನ ಬರಹದ ಓದುಗರು ಕಡಿಮೆಯೇ ಇರಬಹುದು. ಆದರೆ ಜೀವನ ನಿಲ್ಲುವುದಿಲ್ಲ, ನಿಲ್ಲಲೂಬಾರದು ನೋಡಿ. ಬನ್ನಿ ಒಂದು ಕತೆ ಕೇಳೋಣ. Read more…


ಜಗತ್ತು ವೇಗವಾಗಿ ಬೆಳೆಯುತ್ತಿದೆ ಅನ್ನುವ ಮಾತನ್ನು ನಾವು ಸದಾ ಕೇಳುತ್ತಲೇ ಇರುತ್ತೇವೆ. ಹಾಗೂ ಆ ಬೆಳವಣಿಗೆಯ ಬಗ್ಗೆ ಹೆಮ್ಮೆಯನ್ನೂ ಪಡುತ್ತೇವೆ. ನಮ್ಮ ಕಾಲದಲ್ಲಿ ಹೀಗಿರಲಿಲ್ಲಪ್ಪಾ ಎನ್ನುತ್ತಲೇ, ಹೀಗಿದ್ದಿದ್ದರೆ ಎಷ್ಟು ಚಂದ ಇರ್ತಿತ್ತು ಅನ್ನುವ ಕನಸನ್ನೂ ಕಾಣುತ್ತೇವೆ. ಹೌದು ಕೆಲ ಬೆಳವಣಿಗೆಗಳು ಚಂದ. ಇನ್ನು ಕೆಲವು ಬೆಳವಣಿಗೆಗಳು ಆಗದಿದ್ದರೆ ಚೆಂದವಿತ್ತೇನೋ, ಅಥವಾ ಸ್ವಲ್ಪ ನಿಧಾನಕ್ಕೆ ಆಗಿದ್ದರೂ ಒಳ್ಳೆಯದಿತ್ತೇನೋ Read more…


ನಿಜವಾಗಿಯೂ….ಹೆಸರಲ್ಲೇನಿದೆ!? ಹೆಸರಲ್ಲಿ ಬರೀ ಅಕ್ಷರಗಳಿವೆ ಅಂತಾ ಹಾಸ್ಯ ಮಾಡ್ಬೇಡಿ. ಎಷ್ಟೋ ಸಲ ಮನುಷ್ಯನಿಗಿಂತಾ ಅವನ ಹೆಸರೇ ಮುಖ್ಯವಾಗುತ್ತೆ. ಅದಕ್ಕೇ ಅಲ್ವೇ, ಮನುಷ್ಯ ಸತ್ತಮೇಲೂ ಅವನ ಕೆಲಸಗಳಿಂದಾಗಿ ಹೆಸರು ಮಾತ್ರ ಉಳಿಯುವುದು? ಕೆಲವೊಮ್ಮೆ ಮಾಡಿದ ಕೆಲಸ ಕೂಡ ಅಳಿದು ಹೋದರೂ ಹೆಸರು ಮಾತ್ರ ಹಾಗೇ ಉಳಿಯುತ್ತೆ. ಯಾರಾದರೂ ಅತ್ಯಾಕಾಂಕ್ಷಿಗಳನ್ನು ಕಂಡಾಗ “ನೀನೇನು ದೊಡ್ಡ ಅಲೆಕ್ಸಾಂಡರೋ!” ಅಂತಾ ಕೇಳುವುದೂ, Read more…


ಎಸ್ಪಿಬಿಯವರಿಗೆ ನುಡಿನಮನ ಸಲ್ಲಿಸಿದ ನನ್ನ ಲೇಖನಕ್ಕೆ ಮೈಸೂರಿನ ಶ್ರೀ ಪಾಂಡುರಂಗ ವಿಠಲರು ಚಂದದ ಧ್ವನಿರೂಪಕೊಟ್ಟಿದ್ದಾರೆ. ಮೂಲಬರಹ ಇಲ್ಲಿದೆ: “ಕಲ್ಲಾದರೆ ನಾನು…..ಆಕಾಶದೀಪವು ನೀನು” ಎಂದೂಮಾಸದ ಎಸ್ಪಿಬಿಯವರ ಧ್ವನಿಗೊಂದು ಧ್ವನಿನಮನ.