Wednesday, 24 April, 2024

Author: admin


ದೇಶದ ನಾಯಕತ್ವ ಮತ್ತು ಸರ್ಕಾರಗಳ ಸಿದ್ಧಾಂತಗಳೇನೇ ಇರಲಿ, ದೇಶವೊಂದು ನಡೆಯಬೇಕಾದರೆ ವ್ಯಾಪಾರ ವ್ಯವಹಾರಗಳೆನ್ನುವುದು ಇರಲೇಬೇಕು. ಮಾನವ  ನಾಗರೀಕತೆಗಳು ಪ್ರಾರಂಭವಾದಾಗಲಿಂದಲೂ ಕೊಡುಕೊಳ್ಳುವಿಕೆಯ ವ್ಯಾಪಾರಗಳು ನಡೆದೇ ಇವೆ. ನಾಗರೀಕತೆಗಳು ಪ್ರಾರಂಭವಾಗುವ ಮುನ್ನವೂ ತಮ್ಮದೇ ರೂಪದಲ್ಲಿ ವ್ಯಾಪಾರಗಳಿದ್ದೇ ಇದ್ದವು. ಲಾಭ ಎನ್ನುವ ಪರಿಕಲ್ಪನೆ ಸ್ವಲ್ಪ ತಡವಾಗಿ ಬಂದಿರಬಹುದಷ್ಟೇ. ಕಳೆದ ಆರೂವರೆ ಸಾವಿರ ವರ್ಷಗಳ ನಾಗರೀಕತೆಗಳಲ್ಲೆಲ್ಲೂ ಲಾಭವೆನ್ನುವುದನ್ನು ಕೆಟ್ಟಪದವಾಗಿ ಕಂಡಿಲ್ಲ.  ಅದೊಂದು ವ್ಯಾಪಾರದ ಸಹಜ ಉತ್ಪನ್ನ. ಲಾಭವಿಲ್ಲದೇ Read more…


ತಂತ್ರಜ್ಞಾನ ಮುಂದುವರೆದಂತೆಲ್ಲಾ ಮನುಷ್ಯನ ಕೆಲಸ ಕಡಿಮೆಯಾಗಿದೆ ಎಂದು ಭಾವಿಸುವವರಿದ್ದಾರೆ. ಆದರೆ ನಿಜಕ್ಕೂ ಮನುಷ್ಯನ ಕೆಲಸಗಳೇನೂ ಕಡಿಮೆಯಾಗಿಲ್ಲ, ಇದ್ದ ಕೆಲಸಗಳು ಮೊದಲಿಗಿಂತಾ ಸುಲಭವಾಗಿವೆ ಅಷ್ಟೇ. ಆ ಕೆಲಸಗಳನ್ನು ಸುಲಭವಾಗಿ ಮತ್ತು ಬೇಗ ಮುಗಿಸಿದ ಮನುಷ್ಯ ಸಮಯವನ್ನುಳಿಸಿ ಆ ಸಮಯದಲ್ಲಿ ಕೆಲಸವಿಲ್ಲದೇ ಕೂತಿಲ್ಲ. ಬೇರೆ ಇನ್ನೊಂದೇನೋ ಕೆಲಸ ಶುರುಹಚ್ಚಿಕೊಂಡಿದ್ದಾನೆ. ಹಾಗಾಗಿಯೇ, ಹದಿನೆಂಟನೇ ಶತಮಾನದಲ್ಲಿ ಒಂದು ಶತಕೋಟಿಯಿದ್ದ ನಾವುಗಳು, ಎಂಟು ಶತಕೋಟಿಯಾಗಿ ಬೆಳೆದರೂ, ಕೆಲಸಗಳನ್ನು ಕಡಿಮೆ Read more…


ಕೆಲವೊಮ್ಮೆ ಜಗತ್ತಿನಲ್ಲಿ ಶಕ್ತಿವಂತರಾಗುವುದಕ್ಕೆ ಕೇವಲ ನಾವು ಗಟ್ಟಿಯಾಗಿರುವುದು ಮಾತ್ರವಲ್ಲ, ನಮ್ಮ ವಿರೋಧಿಗಳು ತೀರಾ ದುರ್ಬಲಾಗಿರುವುದೂ ಕಾರಣವಾಗುತ್ತದೆ. ಇಸ್ರೇಲನ್ನು ಸುತ್ತುವರೆದಿದ್ದ ಅರಬ್ ದೇಶಗಳು ಒಂದೇ ಧರ್ಮದ ಮೂಲಕ ಬೆಸೆದುಕೊಂಡಿದ್ದರೂ ಕೂಡಾ, ಮೊದಲಿಂದಲೂ ರಾಜತಾಂತ್ರಿಕವಾಗಿ ಅಲ್ಲಿದ್ದ ನೂರುಜನ ರಾಜರು ನೂರುದಿಕ್ಕಿಗೆ ನೋಡುವಂತವರಾಗಿದ್ದರು. ಸದಾ ಅಂತರಿಕ ಕಚ್ಚಾಟಗಳಲ್ಲೇ ಮುಳುಗಿದ್ದು, ರಾಜಮನೆತಗಳು ತಮ್ಮವರನ್ನೇ ಗಟ್ಟಿಮಾಡುಕೊಳ್ಳುವುದರಲ್ಲೇ ನಿರತರಾಗಿದ್ದವು. ಅರಬ್ ಒಕ್ಕೂಟದ ಎರಡು ದೊಡ್ಡ ದೇಶಗಳಾಗಿದ್ದ ಸೌದಿ ಅರೇಬಿಯಾ Read more…


ನಾವು ಒಂದು ಹುಡುಗಿ, ಒಬ್ಬಳು ಹೆಂಡತಿ, ಒಂದೋ ಎರಡೋ ಮಕ್ಕಳನ್ನ ಸುಧಾರಿಸಬೇಕು ಅನ್ನೋವಷ್ಟರಲ್ಲಿ ಹೈರಾಣಾಗಿರ್ತೀವಿ. “ಆರತಿಗೊಬ್ಬ ಮಗಳು, ಕೀರುತಿಗೊಬ್ಬ ಮಗ…ನಾವಿಬ್ಬರು ನಮಗಿಬ್ಬರು” ಎನ್ನುವಲ್ಲಿಂದ “ಗಂಡ ಹೆಂಡ್ತಿ ಮುಖದಲ್ಲಿ ನಗು, ಬೀದಿಗೊಂದು ಮಗು” ಅನ್ನೋ ಸ್ಥಿತಿಗೆ ಬಹುತೇಕ ಹಿಂದೂಗಳು, ಮಾತ್ರವಲ್ಲ ಇಡೀ ಯೂರೋಪು ಅಮೇರಿಕಾ ತಲುಪಿವೆ. ಅದೇ ಕಾಲಕ್ಕೆ ಶಾಂತಿಬಯಸುವವರು ಹೊಟ್ಟೆಗೆ ಹಿಟ್ಟಿಲ್ಲದಿದ್ರೂ ಮನೆತುಂಬ, ಊರತುಂಬೆಲ್ಲಾ ಮಕ್ಕಳು ಮಾಡಿಕೊಳ್ಳುತ್ತಿರುವಾಗ, ಅಲ್ಲೊಬ್ಬ “ನಾವು ಹೆಚ್ಚೆಚ್ಚು ಮಕ್ಕಳನ್ನು ಮಾಡಿಕೊಳ್ಳದೇ ಇರೋದು, ಮಾನವಕುಲಕ್ಕೆ Read more…


ಜೀವನದಲ್ಲಿ ಯಶಸ್ಸು ಸಾಧಿಸಲಿಕ್ಕೆ ಏನು ಮಾಡಬೇಕು? ಅಂತಾ ಕೇಳಿದ್ರೆ ಕೆಲವರು ಕಷ್ಟಪಟ್ಟು ದುಡಿಯಬೇಕು ಅನ್ನಬಹುದು, ಕೆಲವರು ಜ್ಞಾನ ಇರಬೇಕು ಅನ್ನಬಹುದು, ಮತ್ತೆ ಕೆಲವರು “ಏನೇ ಗಳಿಸಬೇಕಾದರೂ ಅದೃಷ್ಟ ಇರಬೇಕು. ಅದಿಲ್ಲದಿದ್ದರೆ ಎಷ್ಟೇ ಬುದ್ಧಿವಂತಿಕೆ, ಶ್ರಮ ಹಾಕಿದರೂ ಏನೂ ಗಿಟ್ಟಲ್ಲ” ಅನ್ನಬಹುದು. ಅವೆಲ್ಲವೂ ಸರಿಯಾದ ಮಾತುಗಳು ಕೂಡಾ ಹೌದು. ಹಣ, ಹೆಸರು, ಸ್ಥಾನ ಮಾತ್ರವಲ್ಲ ಮನಶ್ಶಾಂತಿ ಪಅಡೆಯಲಿಕ್ಕೂ ಕೂಡಾ ಅದನ್ನು ಗಳಿಸುವುದು ಹೇಗೆ ಎನ್ನುವ ಪರಿಜ್ಞಾನ Read more…


ತಂತ್ರಜ್ಞಾನ ಮನುಷ್ಯನ ಮಿತ್ರ ಎನ್ನುವುರಲ್ಲಿ ಎರಡು ಮಾತಿಲ್ಲ. ಮನುಷ್ಯನ ಜೀವನವನ್ನು ಕಾಲದಿಂದ ಕಾಲಕ್ಕೆ ಹಸನು ಮಾಡುತ್ತಲೇ ಬರುತ್ತಿರುವ ತಂತ್ರಜ್ಞಾನಗಳು, ಪ್ರತಿವರ್ಷವೂ ಹೊಸದನ್ನು ಕಲಿಯುತ್ತಾ ತಮ್ಮನ್ನು ತಾವು ಹೆಚ್ಚೆಚ್ಚು ಉಪಯುಕ್ತಗೊಳಿಸಿಕೊಳ್ಳುತ್ತಿವೆ. ಇವುಗಳ ಉಪಯೋಗ ಮೊದಮೊದಲಿಗೆ ಕೆಲವು ಕ್ಷೇತ್ರಗಳಿಗಷ್ಟೇ ಸೀಮಿತವಾಗಿದ್ದರೂ, ಇತ್ತೀಚೆಗೆ ಅವು ಎಲ್ಲಾ ಮಿತಿಗಳನ್ನೂ ದಾಟಿ, ಹೊಸದೊಂದು ಯುಗಕ್ಕೆ ಕಾಲಿಟ್ಟಿವೆ.  ಹೌದು, ತಂತ್ರಜ್ಞಾನಗಳ ಅತಿಯಾದ ಉಪಯೋಗದ ಬಗ್ಗೆ Read more…


In 2012, 24-year-old Israeli climber Nadav Ben-Yehuda, who was 300 meters from the summit of Everest, gave up his dream of conquering the planet’s highest peak in order to save an injured Turkish climber. Ben-Yehuda described the incident as follows: Read more…


ಮನುಷ್ಯ ಮೂಲತಃ ಸಂಘಜೀವಿಯಾದರೂ, ಬೆಳೆದಂತೆಲ್ಲಾ ಆತನಿಗೆ ತನ್ನದೇ ಒಂದು ಅಸ್ಮಿತೆಯನ್ನು ರೂಪಿಸಿಕೊಳ್ಳುವ ಅಗತ್ಯ ಮತ್ತೆ ಮತ್ತೆ ಕಂಡುಬರುತ್ತದೆ. ಮೊತ್ತಮೊದಲ ನಾಗರೀಕತೆ, ಮನುಷ್ಯರನ್ನು ಒಂದುಗೂಡಿಸಿದರೂ ಸಹ, ಎರಡು ನಾಗರೀಕತೆಗಳು ಮುಖಾಮುಖಿಯಾದಾಗ, ನಿಧಾನಕ್ಕೆ ಅಸೂಯೆಯೋ, ಶಕ್ತಿಯ ಅಗತ್ಯತೆಯೋ ಮೇಲುಗೈ ಸಾಧಿಸಿ ನಿನಗಿಂತಾ ನಾನು ಕಡಿಮೆಯಿಲ್ಲ ಎಂದು ತೋರಿಸುವ ಚಾಳಿಗೆ ಎಲ್ಲರೂ ಬಿದ್ದವರೇ. ಮೊದಲಿನ ನಾಗರೀಕತೆಗಳಲ್ಲಿ ತನಗೆ ಕಂಡಿದ್ದೆಲ್ಲಾ ಮತ್ತು ತನಗೆ ಬೇಕಾದದ್ದೆಲ್ಲಾ ನನ್ನದೇ ಎಂಬ ಮನೋಭಾವವೇ Read more…


ಜಗತ್ತಿಗೇ ಗೊತ್ತಿರುವ, ಜಗತ್ತಿನ “ಬೇಕಾದವರೆಲ್ಲರೂ” ಇರುವ, ದೊಡ್ಡ ವಿಚಾರಗಳನ್ನೆಲ್ಲಾ ಎರಡೇ ಸಾಲಿನಲ್ಲಿ ಪ್ರಕಟಿಸಿ ಬ್ರೇಕಿಂಗ್ ಸುದ್ಧಿಮಾಡುವ ಟ್ವಿಟರ್ ಗೊತ್ತಿಲ್ಲದವರು ಯಾರಿದ್ದಾರೆ? ಸ್ಮಾರ್ಟ್-ಫೋನಿದ್ದಮೇಲೆ ಟ್ವಿಟರ್ ಗೊತ್ತಿರಲೇ ಬೇಕಲ್ಲ? ಗೊತ್ತಿಲ್ಲದಿದ್ದರೆ ಡಿಜಿಟಲ್ ಯುಗದಲ್ಲಿದ್ದೇ ಶಿಲಾಯುಗದಲ್ಲಿ ಬದುಕುವವರು ನೀವಾಗ್ತೀರಿ. ಯಾಕೆಂದರೆ ಮಾಹಿತಿಯುಗದ ಮುಂಚೂಣಿಯಲ್ಲಿ ನಿಂತು, ಜಗತ್ತು ಯಾವಕಡೆ ಹೋಗಬೇಕೆನ್ನುವುದನ್ನು ನಿರ್ಧರಿಸುವ ಚುಕ್ಕಾಣಿಯನ್ನೇ ಕೈಯಲ್ಲಿ ಹಿಡಿದು ನಿಂತಿರುವ ಟ್ವಿಟರ್, ಪ್ರತಿಯೊಬ್ಬ ತಂತ್ರಜ್ಞಾನ ಸಾಕ್ಷರನ, ಸಾಮಾಜಿಕ ಜಾಲತಾಣಜೀವನದ ತೊದಲುನುಡಿ. ಜಗತ್ತಿನ ಆಗುಹೋಗುಗಳ ಅರಿವಿರುವವರು, ಅರಿವಿರಬೇಕೆಂದು ಬಯಸುವವರು ನೀವಾದರೆ, ಟ್ವಿಟರ್ ಬಗ್ಗೆ Read more…


ಕಳೆದವಾದ ಸಿಂಗಪೂರ್ ಏರ್ಲೈನ್ ತನ್ನ ದೇಶವನ್ನು, ಸೇಫ್ಟೀವಿಡಿಯೋದಂತಹ ಒಂದು ನೀರಸವಾಗಬಹುದಾಂತಹಾ ವಿಚಾರದ ಮೂಲಕವೂ ಹೇಗೆ ಪ್ರವಾಸೀ ಮಾರುಕಟ್ಟೆಗೆ ತೆರೆದಿಡುತ್ತೆ ಎನ್ನುವುದನ್ನ ಹೇಳಿದ್ದೆ. ಸೇಫ್ಟೀವಿಡಿಯೋ ಮಾತ್ರವಲ್ಲ, ಅವರ ಇನ್-ಫ್ಲೈಟ್ ಮನರಂಜನಾ ವ್ಯವಸ್ಥೆಯಲ್ಲಿ, ಸಿಂಗಪೂರಿನ ಬಗ್ಗೆ, ಅಲ್ಲಿನ ಆಕರ್ಷಣೆಗಳ ಬಗ್ಗೆ ಸಣ್ಣ ಸಣ್ಣ ಫಿಲಂಗಳೇ ಇವೆ. ನಿಮ್ಮ ಪ್ರಯಾಣದ ಉದ್ದೇಶ ಏನೆಂದು ಆರಿಸಿಕೊಂಡರೆ, ನಿಮ್ಮ ಅಭಿರುಚಿಗೆ ತಕ್ಕಂತೆ ಒಂದು Read more…