Tuesday, 19 March, 2024

ಮಹಾಭಾರತದಲ್ಲಿ ಕೆಲ ಹೆಸರುಗಳು ಮಜಾ

Share post

(*) ಹೆಸರು ಮಾತ್ರ ಸಾಲ್ವ. ಸಣ್ಣದೊಂದು ವಿಷಯವನ್ನೂ ಸಾಲ್ವ್ ಮಾಡೋಕೆ ಆಗ್ತಿರಲಿಲ್ಲ ಅವನಿಗೆ

(*) ಹೆಸರು ನೋಡಿದ್ರೆ ಚಿತ್ರವೀರ್ಯ ವಿಚಿತ್ರವೀರ್ಯ. ಹೆಸರಲ್ಲೇ ವೀರ್ಯ ಇದ್ದರೂ, ಇಬ್ಬರಿಗೂ ಸಹ ಒಂದೂ ಮಕ್ಕಳಾಗಲಿಲ್ಲ

(*) ಹೆಸರು ನಳ. ತನ್ನ ಜೂಜಿನ ನಳ ನಿಲ್ಲಿಸುವ ಹ್ಯಾಂಡಲ್ಲೇ ಅವನ ಬಳಿ ಇರಲಿಲ್ಲ.

(*) ಆಕೆಯ ಹೆಸರು ಸುಲಭ (ವಿದುರನ ಪತ್ನಿ). ಆದರೆ ಸ್ವಲ್ಪವೂ ಸುಲಭವಿಲ್ಲದ ಜೀವನ ನಡೆಸಿಯೂ ಉಳಿದವರಿಗೆ ಉದಾಹರಣೆಯಾದಾಕೆ.

(*) ಹೆಸರು ಉತ್ತರ. ಪುಣ್ಯಾತ್ಮ ಯಾವುದಕ್ಕೂ ಉತ್ತರ ಕೊಡಲಾಗದೇ ಹೆದರಿ, ಅಡಗಿ ಕೂರುತ್ತಿದ್ದ.

.

.

.

ಸುಬಲ ಮತ್ತು ಸುಧರ್ಮರ ಮಗ ಶಕುನಿ. ಶಕುನಿಯ ಮಕ್ಕಳಲ್ಲೊಬ್ಬನ ಹೆಸರು ವೃಕಾಸುರ!!

ಎರಡೇ ಜನರೇಷನ್ನಿಗೆ ‘ಸು’ ದಿಂದ ‘ಅಸುರ’ ಎಂಬಲ್ಲಿಗೆ ತಲುಪಿಬಿಟ್ಟರು! ವೃಕಾಸುರ ಕುರುಕ್ಷೇತ್ರದಲ್ಲಿ ಕೌರವರ ಪರವಾಗಿ ಹೋರಾಡಿದ ಬಲಿಷ್ಟ ಹೋರಾಟಗಾರರಲ್ಲೊಬ್ಬ. ಪಾಂಡವರಿಗೆ ತಲೆನೋವಾಗಿದ್ದವ, ಹದಿನೇಳನೇ ದಿನ ನಕುಲ ಅವನನ್ನು ಕೊಲ್ಲುವವರೆಗೂ.

 

ಹೌದು, ಶಕುನಿಗೆ ಉಲೂಕ ಮತ್ತು ವ್ರಿಪ್ರಚಿತ್ತಿ ಎಂಬ ಇನ್ನಿಬ್ಬರು ಮಕ್ಕಳೂ ಇದ್ದರು. ವ್ರಿಪ್ರಚಿತ್ತಿಯಂತೂ ಬಹಳ ಬುದ್ಧಿವಂತನೂ ಆಗಿದ್ದವ, ಹಾಗೂ ಕುರುಕ್ಷೇತ್ರದಲ್ಲಿ ಬದುಕುಳಿದ ಕೆಲವೇ ಜನರಲ್ಲೊಬ್ಬ. ವಿಚಾರ ಅದಲ್ಲ. ದ್ವಾಪರಯುಗದಲ್ಲಿ ಕಾಲ ಎಷ್ಟು ಬೇಗ ಕೆಡಲಾರಂಭಿಸಿತ್ತೆಂದರೆ ಸುಬಲ, ಸುಧರ್ಮರ ಕುಲದಲ್ಲಿ ಎರಡೇ ತಲೆಮಾರಿನಲ್ಲಿ ಅಸುರನೂ ಬಂದ ಅನ್ನೋದಷ್ಟೇ.

0 comments on “ಮಹಾಭಾರತದಲ್ಲಿ ಕೆಲ ಹೆಸರುಗಳು ಮಜಾ

Leave a Reply

Your email address will not be published. Required fields are marked *