Tuesday, 27 February, 2024

ನಾನೂ ಕವಿತೆ ಬರೀತೀನಿ!

Share post

ಪ್ರಚಂಡಮಾರುತ ಬೀಸಿದಾಗ,

ಆಗಸದಲಿ ಕಾರ್ಮೋಡ ಕೈಚಾಚಿ,

ತಿಮಿರದ ಹಕ್ಕಿ ರೆಕ್ಕೆಚಾಚಿದಾಗ,

ದೀಪವನ್ನು ಬೂರ್ಷ್ವಾಗಾಳಿ ಹೊಸಕಿದಾಗ,

ರಣಹದ್ದುಗಳು ಕೀರಲಿದಾಗ,

ಗೂರುಬ್ಬಸವುದು ಎದೆಹಿಂಡಿದಾಗ,

 

ದೇಹೀ ಎಂದರೂ ಕೊಡದ ಬ್ರಾಹ್ಮಣನಿಗೆ,

ಕೋಶ ತೆರೆಯದ ರಾಜತ್ವ

ಕ್ಕೆ ದಲಿತನ ಕೋಪದ ರೂಪತೋರಿಸಿ,

ಕಾಮಾಲೆಯ ಧರ್ಮ ನಿರ್ನಾಮಮಾಡಿ,

ರಕ್ತದೋಳಿಹರಿದರೂ ಸರಿ ಚೆಗುವಾರನ

ಆ ಕನಸನ್ನು ನನಸು ಮಾಡುವೆವು.

 

ಕವಿತೆ ಅರ್ಥವಾಗಿಲ್ಲಾ ಅಂತಾ ಉರ್ಕೊಳ್ಳೋ ಮುನ್ನ, ಮೇಲಿನಿಂದಾ ಕೆಳಕ್ಕೆ, ಇಡೀ ಕವಿತೆಗೆ ‘ಗೋಮೂತ್ರಿಕಾ ಬಂಧ’ದ ಲಾಜಿಕ್ ಅನ್ನು ಅಪ್ಲೈ ಮಾಡಿ ಇನ್ನೊಮ್ಮೆ ಓದಿ. ಆಗಲೂ ಅರ್ಥವಾಗಲಿಲ್ಲವೆಂದರೆ……ಧಾರಾಳವಾಗಿ ಉರ್ಕೊಳ್ಳಿ.

 

‘ಗೋಮೂತ್ರಿಕಾ ಬಂಧ’ವೆಂದರೇನು?

ಗೋವು ಮೂತ್ರಮಾಡುತ್ತಾ ಸಾಗಿದರೆ ರಸ್ತೆಯಲ್ಲಿ ಯಾವ ರೀತಿಯ ಚಿತ್ರ ಮೂಡಬಹುದು!? ಊಹಿಸಿಕೊಳ್ಳಿ! ಅದೇ ಚಿತ್ರವನ್ನು ಈ ಕವಿತೆಯ ಮೊದಲೆರಡು ಅಕ್ಷರಗಳಿಗೆ ಅಪ್ಲೈ ಮಾಡಿ. ಅಂದರೆ ಮೊದಲ ಸಾಲಿನ ಮೊದಲಕ್ಷರ, ಎರಡನೆಯ ಸಾಲಿನ ಎರಡನೇ ಅಕ್ಷರ, ಮತ್ತೆ ಮೂರನೇ ಸಾಲಿನ ಮೊದಲಕ್ಷರ, ನಾಲ್ಕನೇ ಸಾಲಿನ ಎರಡನೇ ಅಕ್ಷರ ಇವನ್ನು ಮಾತ್ರ ಹೆಕ್ಕುತ್ತಾ ಹೋಗಿ.

 

ಗೋಮೂತ್ರಿಕಾ ಬಂಧ ಸಾಮಾನ್ಯವಾಗಿ ಸಾಲಿನ ಅಡ್ಡಕ್ಕೆ ಅಪ್ಲೈ ಆಗುತ್ತೆ. ನಾನು ಇದರಲ್ಲಿನ್ನೂ ಬಚ್ಚಾ. ಪದಲಾಲಿತ್ಯಕ್ಕೆ ನಾನು ದಂಡಿಯೂ ಅಲ್ಲ, ಭರ್ತೃಹರಿಯೂ ಅಲ್ಲ. ಹಾಗಾಗಿ ಉದ್ದುದ್ದಕ್ಕೆ ಅಪ್ಲೈ ಮಾಡಿದ್ದೇನೆ. ಪ್ಯೂರಿಸ್ಟುಗಳು ಸಿಟ್ಟು ನುಂಗಿಕೊಂಡು ಓದಿ 🙂

 

ಗೋಮೂತ್ರಿಕಾ ಬಂಧ ಹಾಗೂ ಇನ್ನಿತರ ಪದಲಾಲಿತ್ಯಗಳ ಬಗ್ಗೆ ಸ್ಥೂಲವಾಗಿ ತಿಳಿಯಲು ಇಲ್ಲಿ ಕ್ಲಿಕ್ಕಿಸಿ.

0 comments on “ನಾನೂ ಕವಿತೆ ಬರೀತೀನಿ!

Leave a Reply

Your email address will not be published. Required fields are marked *