Friday, 24 May, 2024

ಕಲರ್ * ಕನ್ನಡ

Share post

ನಾನು ಚಿಕ್ಕವನಿದ್ದಾಗ (ಬಹಳಷ್ಟು ದೊಡ್ಡವನಾದಮೇಲೂ ಸಹ) ಇದೊಂದು ಎಲ್ಲಾ ಫಿಲಂ ಪೋಸ್ಟರುಗಳಲ್ಲಿ, ಸಿನಿ ಜಾಹೀರಾತುಗಳಲ್ಲಿ, ಮೂವೀ ಹೆಸರಿನ ಕೆಳಗೆ ಬಲಬದಿಯಲ್ಲಿ ಸಣ್ಣಕ್ಷರಗಳಲ್ಲಿ ಕಂಡುಬರುತ್ತಿದ್ದ ಕಾಮನ್ ಪದ. ಇದರರ್ಥ ಏನು ಅಂತಲೇ ನನಗೆ ಗೊತ್ತಾಗ್ತಿರಲಿಲ್ಲ. ಫಿಲಂ ಟೈಟ್ಲು ನೋಡಿದ್ರೇನೇ ಗೊತ್ತಾಗುತ್ತೆ ಇದು ಕನ್ನಡದ ಫಿಲಂ ಅಂತಾ. ಮತ್ತೆ ಇದೇನಿದು ಕಲರ್*ಕನ್ನಡ ಅಂದ್ರೆ ಅಂತಾ ತಲೆ ತುರಿಸಿಕೊಳ್ತಾ ಇದ್ದೆ. ಎಷ್ಟೋ ಸಲ “ಬಹುಷಃ ಸ್ಯಾಂಡಲ್ವುಡ್ ಡಿಕ್ಷನರಿ ಪ್ರಕಾರ ಭಾಷೆ ಅನ್ನೋದಕ್ಕೆ ಕಲರ್ ಅನ್ನೋ ಪದ ಉಪಯೋಗಿಸ್ತಾರೇನೋ. ಅದಕ್ಕೇ ಇದು ಕನ್ನಡ ಭಾಷೆಯ ಚಿತ್ರ ಅಂತಾ ಹೇಳೋಕೆ ಹೀಗೆ ಬರೀತಾರೆ ಅನ್ಸುತ್ತೆ” ಅಂದ್ಕೊಂಡಿದ್ದೆ.

“ಅದು ಬ್ಲಾಕ್-ಅಂಡ್-ವೈಟ್ ಕಾಲದಿಂದ ಈಸ್ಟಮನ್ ಕಲರ್ರಿಗೆ ಶಿಫ್ಟ್ ಆದ ಕಾಲದ ಚಿತ್ರರಂಗದ ಚಾಳಿ. ಅದೂ ಅಲ್ಲದೇ ಆಗಿನ ಹೆಚ್ಚಿನ ಫಿಲಮ್ಮುಗಳೆಲ್ಲಾ ಮದ್ರಾಸಿನಲ್ಲೇ ತಯಾರಾಗುತ್ತಿದ್ದರಿಂದ, ಪಕ್ಕದಲ್ಲಿ ಈ ಫಿಲ್ಮು ಯಾವ ಭಾಷೇದು ಅಂತಾ ಹಾಕೋದೂ ಒಂದು ISO standard ಥರಾ ಆಗಿತ್ತು. ಈಗ ಬ್ಲಾಕ್-ಅಂಡ್-ವೈಟಿನಲ್ಲಿ ಒಂದೂ ಫಿಲಮ್ಮು ಬರ್ದೇ ಎಲ್ಲವೂ ಕಲರ್ರಿನಲ್ಲೇ ಇದ್ರೂ ಸಹ, ಇದೊಂದು ಪದೋಪಯೋಗ ಬಿಟ್ಟುಹೋಗಿಲ್ಲ”, ಅಂತೆಲ್ಲಾ ಗೊತ್ತಾಗೋಹೊತ್ತಿಗೆ, ಕನ್ನಡ ಫಿಲಮ್ಮೇ ನೋಡೋದು ಬಿಟ್ಬಿಟ್ಟಿದ್ದೆ

0 comments on “ಕಲರ್ * ಕನ್ನಡ

Leave a Reply

Your email address will not be published. Required fields are marked *